Ravi Belagere
ಅಮ್ಮ ಸಿಕ್ಕಿದ್ಲು
ಅಮ್ಮ ಸಿಕ್ಕಿದ್ಲು
Publisher - ಭಾವನಾ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 96
Type - Paperback
Couldn't load pickup availability
ಎಲ್ಲರಿಗೂ ಹಾಗಾಗುವುದಿಲ್ಲ. ಆಗಲೂ ಬಾರದು, ಆದರೆ ಕುಡಿತದಂತಹ ಅನಿಷ್ಟಚಟಗಳು ಒಮ್ಮೆ ಗಂಟು ಬಿದ್ದು ಬಿಟ್ಟರೆ ಹೂದೋಟದಂತಹ ಬದುಕನ್ನು ಒಂದು ಕಡೆಯಿಂದ ಹದಗೆಡಿಸಿ ಸರ್ವನಾಶ ಮಾಡಿಬಿಡುತ್ತವೆ. ಕುಡಿತವೆಂಬ ವ್ಯಸನಕ್ಕೆ ಬಹುದೊಡ್ಡ ಕಂದಾಯ ಕಟ್ಟಿ ಅದರ ತೆಕ್ಕೆಯಿಂದ ತಪ್ಪಿಸಿಕೊಂಡು ನನಗೇ ಅಚ್ಚರಿ ಯಾಗುವಂತದ ಗೆಲುವು, ಯಶಸ್ಸು, ಸಂತಸ ಕಂಡವನು ನಾನು. ಅದನ್ನೆಲ್ಲ ನೋಡಲಿಕ್ಕೆ ನನ್ನ ಅಮ್ಮ ಬದುಕಿಲ್ಲ ಎಂಬ ವೇದನೆ ನನ್ನನ್ನು ಸದಾ ಕಾಡುತ್ತದೆ.
ಒಂದೇ ಒಂದು ಸಲ ಈಗ ಆಕೆ ಬಂದು, ಒಂದು ದಿನ ನನ್ನೊಂದಿಗೆ ಇದ್ದುಬಿಟ್ಟರೆ... ಅಂದುಕೊಳ್ಳುತ್ತೇನೆ. ಅದೆಲ್ಲ ಆಗುವ ಮಾತೆ?
ಬಿಡಿ, 2012 ನನ್ನ ಪಾಲಿಗೆ ಅತ್ಯಂತ ಚಟುವಟಿಕೆಯ ವರ್ಷ, ಒಂದಾದ ಮೇಲೊಂದು ಪುಸ್ತಕಗಳು, ಸಿ.ಡಿಗಳ ಬಿಡುಗಡೆ, ನಾಲ್ಕಾರು ದೇಶಗಳ ಸುತ್ತಾಟ, ವಿಪರೀತ ಓದು. ಒಂದು ಕನಸಿನಸಾಕಾರ ವೆಂಬಂತೆ ಬೆಂಗಳೂರಿನ ಗಾಂಧಿಬಜಾರ್ ನಲ್ಲಿ ಬಿ.ಬಿ.ಸಿ ಎಂಬ ಪುಸ್ತಕದ ಅ೦ಗಡಿಯ ಉದ್ಘಾಟನೆ ಇವೆಲ್ಲವುಗಳ ನಡುವೆಯೇ 'ಅಮ್ಮ ಸಿಕ್ಕಿದ್ದು ಎಂಬ
ಈ ಕಿರು ಕಾದಂಬರಿಯನ್ನು ನಿಮ್ಮ ಕೈಯಲ್ಲಿರಿಸುತ್ತಿದ್ದೇನೆ. ಒಮ್ಮೆ ಓದಿ. ಒಂದು ದಿನ ಸುಮ್ಮನೆ ನಿಮ್ಮ ಅಮ್ಮನೊಂದಿಗಿರಿ. ನಾನೇಕೆ ಇದನ್ನು ಬರೆದೆ ಎಂಬುದು ನಿಮಗೆ ಅರ್ಥವಾಗುತ್ತದೆ.
-ರವಿ ಬೆಳಗೆರೆ
Share

Nice
ಅಮ್ಮ ಸಿಕ್ಕಿದ್ಲು
ಅಮ್ಮ ಸಿಕ್ಕಿದ್ಲು
Nice
Subscribe to our emails
Subscribe to our mailing list for insider news, product launches, and more.