Sa. Harish
ಅಮ್ಮ ಅಂದ್ರೆ ಭೂಮಿ
ಅಮ್ಮ ಅಂದ್ರೆ ಭೂಮಿ
Publisher - Upasana Books
- Free Shipping Above ₹350
- Cash on Delivery (COD) Available*
Pages - 138
Type - Paperback
Couldn't load pickup availability
ಇವರ ಬರವಣಿಗೆಯಲ್ಲಿ ಅಬ್ಬರವಿಲ್ಲದ, ಸೂಕ್ಷ್ಮ ಮನಸ್ಸಿನ ಹಾಗೂ ನವಿರಾಗಿ ಕಥೆಯನ್ನು ಹೇಳುವ ಶೈಲಿ ವಿಶೇಷವಾಗಿದೆ. ಹರೀಶ್ ಅವರ ಹಲವಾರು ಕಥೆಗಳನ್ನು ನಾನು ಪ್ರಕಟಣೆಗೆ ಮುನ್ನವೇ ಓದಿಬಿಟ್ಟಿದ್ದೇನೆ. ಅಲ್ಲದೇ ಬಹಳಷ್ಟು ಓದುಗರಿಗಿಂತ ಮೊದಲೇ ಖುಷಿ ಪಟ್ಟಿದ್ದೇನೆ ಅನ್ನುವ ಹೆಮ್ಮೆ ನನ್ನದು. ಸುಮ್ಮನೆ ಟೈಮ್ ಪಾಸ್ ಗೆ ಓದಿ ಮರೆಯುವಂಥ ಒಂದೇ ಒಂದು ಕಥೆ ಅಥವ ಕಾದಂಬರಿ ಅವರ ಲೇಖನಿಯಿಂದ ಬಂದೇ ಇಲ್ಲ ಎಂದು ನಾನು ಹೇಳಬಲ್ಲೆ. ಓದುಗನನ್ನು ಓದಿನ ನಂತರವೂ ಮನಸ್ಸಿನಲ್ಲಿ ಉಳಿಸುವ ಹಾಗೂ ಯೋಚನೆಗೆ ಹಚ್ಚುವ ಅಪರೂಪದ ಗುಣ ಹರೀಶರ ಬರವಣಿಗೆಯಲ್ಲಿ ಯಾವತ್ತೂ ಕಾಣುತ್ತದೆ. ಅವರ ಬರವಣಿಗೆಯ ಸ್ಥಿರತೆ, ಗಟ್ಟಿತನ ಹಾಗೂ ಬಂಧ ನನಗೆ ಬೆರಗು ಹುಟ್ಟಿಸುತ್ತದೆ. ಬಹುಶ: ಅವರಿಗೆ ಬರವಣಿಗೆಯ ಮೇಲಿನ ಪ್ರೀತಿ, ವ್ಯಾಮೋಹದಿಂದ ಇದು ಸಾಧ್ಯವಾಗಿದೆ ಅನ್ನುವುದೇ ನನ್ನ ಭಾವನೆ. ಅಲ್ಲದೇ ಟೀವಿ, ಸಿನಿಮಾ ಮಾಧ್ಯಮಗಳಿಗೆ ಬರೆದ ಅವರ ಅನುಭವ, ಅವರ ಸಾಹಿತ್ಯದ ಬರವಣಿಗೆಗೆ ಇನ್ನಷ್ಟು ಹೊಳಪು ನೀಡಿದೆ ಎಂದುಕೊಂಡಿದ್ದೇನೆ. ಅವರ ಇನ್ನಷ್ಟು ಕಥೆ, ಕಾದಂಬರಿಗಳನ್ನು ಓದುವ ಸುಖ ನನ್ನದಾಗಲಿ.
-ಬದರಿ ರೂಪನಗುಡಿ
Share

Subscribe to our emails
Subscribe to our mailing list for insider news, product launches, and more.