Hrudaya Shiva
ಅಲ್ಲಿಂದಿಲ್ಲಿಗೆ
ಅಲ್ಲಿಂದಿಲ್ಲಿಗೆ
Publisher - ಹರಿವು ಬುಕ್ಸ್
- Free Shipping Above ₹350
- Cash on Delivery (COD) Available*
Pages - 105
Type - Paperback
Couldn't load pickup availability
ಹೃದಯ ಶಿವ ಕನ್ನಡ ಚಲನಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತರಚನಾಕಾರರು. ಅಷ್ಟು ಮಾತ್ರವಲ್ಲದೆ, ಕನ್ನಡದಲ್ಲಿ ಅತ್ಯುತ್ತಮ ಕವನಗಳನ್ನು ರಚಿಸಿ ಕಾವ್ಯ ಕಣಜವನ್ನು ಸಮೃದ್ಧಗೊಳಿಸಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಕನ್ನಡ ಸಾಹಿತ್ಯದೊಂದಿಗೆ ಗಂಭೀರ ಸೃಜನಶೀಲ ಅನುಸಂಧಾನ ನಡೆಸುತ್ತಲೇ ಇದ್ದಾರೆ. ಚಲನಚಿತ್ರರಂಗದ ಜನಪ್ರಿಯತೆಯ ಪ್ರವಾಹದಲ್ಲಿ ಹರಿದು ಹೋಗುವ ಜಾಯಮಾನ ಇವರದಲ್ಲ.
'ಅಲ್ಲಿಂದಿಲ್ಲಿಗೆ' ಸಂಕಲನದ ಅನುವಾದಿತ ಕವನಗಳು ಹೃದಯ ಶಿವ ಅವರ ಸಾಹಿತ್ಯದ ಶ್ರೇಷ್ಠ ಅಭಿರುಚಿಗೆ ಕನ್ನಡಿಯಂತಿವೆ. ಜಗತ್ತಿನ ಕೆಲವು ಶ್ರೇಷ್ಠ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಹೃದಯ ಶಿವ ಅವರು, ಕಾವ್ಯದ ಆತ್ಮ ಮತ್ತು ಭಾವ ಸಂವೇದನೆಯನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಇವು ಅನುವಾದದಂತೆ ಭಾಸವಾಗದೆ ಕನ್ನಡದ್ದೇ ಕವಿತೆಗಳೆಂಬಂತೆ ಮೂಡಿಬಂದಿವೆ. ಕನ್ನಡ ಕಾವ್ಯದ ಲಾಲಿತ್ಯ ಇಲ್ಲಿನ ಎಲ್ಲ ಕವಿತೆಗಳ ಮೈಗಂಟಿದೆ. 'ಅಲ್ಲಿಂದಿಲ್ಲಿಗೆ' ಸಂಕಲನದ ಬಹುಪಾಲು ಕವಿತೆಗಳು ಮೊದಲ ಓದಿಗೆ ಭಾವಕೋಶದಲ್ಲಿ ಸ್ಥಾಯಿಯಾಗಿ ನೆಲೆ ನಿಲ್ಲುವ ಕಸುವು ಪಡೆದಿವೆ.
- ಡಾ. ರಾಜಶೇಖರ ಹತಗುಂದಿ
Share

Subscribe to our emails
Subscribe to our mailing list for insider news, product launches, and more.