Peggi Mohan, To Kannada : Sanketa Patila
ಅಲೆಮಾರಿಗಲು ಅರಸರು ವರ್ತಕರು
ಅಲೆಮಾರಿಗಲು ಅರಸರು ವರ್ತಕರು
Publisher -
- Free Shipping Above ₹300
- Cash on Delivery (COD) Available
Pages -
Type - Paperback
Couldn't load pickup availability
ಬಹುಪಾಲು ಭಾರತೀಯರು ಇರ್ನುಡಿಗರು; ಹಲವರು ಹಲನುಡಿಗರು ಕೂಡ ಆಗಿದ್ದಾರೆ. ಇದಕ್ಕೆ ಕಾರಣವೇನು? ಪೆಗ್ಗಿ ಮೋಹನ್ ಈ ಕುತೂಹಲ ಕೆರಳಿಸುವ ಪ್ರಶ್ನೆಯ ಆಳಕ್ಕಿಳಿದು ಅರಸುತ್ತ ಹೋದಾಗ ಭಾರತಕ್ಕೆ ಹೊರಗಿನಿಂದ ಆದ ಮತ್ತು ಒಳಗೆಯೇ ನಡೆದ ವಲಸೆಗಳು ನಮ್ಮನ್ನು ರೂಪಿಸಿದ ಬಗೆಗಳನ್ನು ಕಂಡುಕೊಳ್ಳುತ್ತಾರೆ; ನಾವೆಲ್ಲರೂ ಮಿಶ್ರಮೂಲದವರು ಎಂಬುದನ್ನೂ ಅರಿತುಕೊಳ್ಳುತ್ತಾರೆ.
ಆದಿಮ ಸಂಸ್ಕೃತವು ನಾವು ಇಂದು ಸಂಸ್ಕೃತವೆಂದು ಗುರುತಿಸುವ ಭಾಷೆಯಾಗಿ ರೂಪಾಂತರಗೊಂಡ ಕಥೆಯ ಮುಖಾಂತರ ವೈದಿಕ ಜನರು ಸ್ಥಳೀಯ ಸಮುದಾಯದೊಂದಿಗೆ ಬೆರೆತದ್ದನ್ನು ತಿಳಿಯಪಡಿಸುತ್ತಾರೆ. ನಂಬೂದಿರಿ ಬ್ರಾಹ್ಮಣರು ದಕ್ಷಿಣದತ್ತ ವಲಸೆ ಹೋದ ನಂತರ ಮಲಯಾಳಕ್ಕೆ ಸಂಬಂಧಿಸಿದಂತೆಯೂ ಇದೇ ವೃತ್ತಾಂತ ಮರುಕಳಿಸುತ್ತದೆ. ಮರಾಠಿ, ಉರ್ದು ಮತ್ತು ಕೆಲವು ಈಶಾನ್ಯ ಭಾಗದ ಭಾಷೆಗಳು ಕ್ರಮಿಸಿದ ಆಶ್ಚರ್ಯಕರ ಪಥಗಳು ಅವರಿಗೆ ಎದುರಾಗುತ್ತವೆ. ಅವುಗಳ ಮೂಲಕ ಭಾರತದ ಸಾಮಾಜಿಕ ಇತಿಹಾಸದ ಇದುವರೆಗೂ ಗೊತ್ತಿರದ ನೋಟಗಳು ಅನಾವರಣಗೊಳ್ಳುತ್ತವೆ.
ವರ್ತಮಾನದತ್ತ ಗಮನ ಹರಿಸುತ್ತ ಅವರು ಬ್ರಿಟಿಷರ ನಿರ್ಗಮನದ ನಂತರ ಇಂಗ್ಲಿಷ್ ಭಾಷೆಯು ಪ್ರಾಬಲ್ಯ ಪಡೆದ ವಿರೋಧಾಭಾಸದ ಬಗ್ಗೆ ವಿಸ್ತಾರವಾಗಿ ಹೇಳುತ್ತಾರೆ. ಹಿಂದೆ ಆಡಳಿತ ಭಾಷೆಯಾಗಿ ಅದನ್ನು ಅಳವಡಿಸಿಕೊಂಡದ್ದು ಈಗ ಭಾರತದ ಭಾಷೆಗಳ ಅಸ್ತಿತ್ವಕ್ಕೇ ಅಪಾಯ ತಂದೊಡ್ಡಿರುವುದನ್ನು ವಿವರವಾದ ಮತ್ತು ತೀಕ್ಷವಾದ ಅವಲೋಕನದ ಮೂಲಕ ತೋರಿಸಿಕೊಡುತ್ತಾರೆ.
'ಅಲೆಮಾರಿಗಳು ಅರಸರು ವರ್ತಕರು' ಭಾಷೆಗಳ ಸಾಮಾಜಿಕ-ಚಾರಿತ್ರಿಕ ಮೂಲಗಳ ಕುರಿತು ದಶಕಗಳ ಸಂಶೋಧನೆ ಮತ್ತು ಗಾಢವಾದ ಅನುಸಂಧಾನದ ಫಲ, ಹಲವು ಸಹಸ್ರಮಾನಗಳಿಂದ ಭಾರತದಲ್ಲಿ ನಡೆಯುತ್ತಿರುವ ಸಮುದಾಯಗಳ ಪರಸ್ಪರ ಬೆರೆಯುವಿಕೆಯ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ. ಜನಾಂಗೀಯ 'ಪರಿಶುದ್ಧತೆ'ಯ ಕಲ್ಪನೆಯು ಪ್ರಬಲರಾದವರು ತಮ್ಮ ಅನುಕೂಲಕ್ಕಾಗಿ ಹರಡಿದ ಕಟ್ಟುಕತೆಯೆಂದು ಒತ್ತಿಹೇಳುತ್ತದೆ.
Share


Subscribe to our emails
Subscribe to our mailing list for insider news, product launches, and more.