Skip to product information
1 of 2

Santosh Rao Permuda

ಆಹಾರವೇ ಔಷಧ ಅಡುಗೆ ಮನೆಯೇ ಔಷಧಾಲಯ

ಆಹಾರವೇ ಔಷಧ ಅಡುಗೆ ಮನೆಯೇ ಔಷಧಾಲಯ

Publisher - ವಂಶಿ ಪಬ್ಲಿಕೇಷನ್ಸ್

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 195

Type - Paperback

Gift Wrap
Gift Wrap Rs. 15.00

ಕಳೆದ ಹಲವು ವರ್ಷಗಳಿಂದ ಕನ್ನಡದಲ್ಲಿ ನಿರಂತರವಾಗಿ ಬರೆಯುತ್ತಿರುವ ಸಂತೋಷ ರಾವ್ ಪೆರ್ಮುಡ ಅವರ ಈಗ ಪ್ರಕಟಗೊಳ್ಳುತ್ತಿರುವ ಅವರ ಪುಸ್ತಕವು ಆರೋಗ್ಯ ಮತ್ತು ಮನೆಮದ್ದಿಗೆ ಸಂಬಂಧಿಸಿದೆ. 'ಆಹಾರವೇ ಔಷಧ; ಅಡುಗೆ ಮನೆಯೇ ಔಷಧಾಲಯ' ಎಂಬ ಅರ್ಥಪೂರ್ಣ ಹೆಸರನ್ನು ಹೊಂದಿರುವ ಈ ಪುಸ್ತಕವನ್ನು ಓದುತ್ತಾ ಹೋದಂತೆ, ಸಸ್ಯ ಮತ್ತು ನಮ್ಮ ಆರೋಗ್ಯಕ್ಕಿರುವ ಅನುಬಂಧದ ಅರಿವಾಗುತ್ತದೆ. ಪರಿಸರದ ಶಿಶುವಾದ ಜೇನು ಹುಳವು ಪರಿಶ್ರಮಕ್ಕೆ ಹೆಸರುವಾಸಿ; ನೂರಾರು ಹೂವುಗಳ ಬಳಿ ಸಾಗಿ, ತಾಳ್ಮೆಯಿಂದ ಅಲ್ಲಿನ ಮಧುವನ್ನು ಹನಿಯಂತೆ ಸಂಗ್ರಹಿಸಿ, ಗೂಡಿಗೆ ತಂದು ಜೇನುತುಪ್ಪ ಮಾಡುತ್ತದೆ. ಆ ತುಪ್ಪಕ್ಕೆ ಸಿಹಿಯಾದ ರುಚಿ, ಔಷಧೀಯ ಗುಣಗಳಿವೆ. ಅಂತಹ ಶ್ರಮದಾಯಕ ಮತ್ತು ಮಧುವನ್ನೀಯುವ ಮಧುಕರ 'ವೃತ್ತಿ'ಯನ್ನು ಪೆರ್ಮುಡ ಅವರಿಲ್ಲಿ ಮಾಡಿದ್ದಾರೆ. ನಮ್ಮ ನಾಡಿನ ಹಲವಾರು ಸಸ್ಯಗಳ ಔಷಧೀಯ ಗುಣಗಳನ್ನು ಇಲ್ಲಿ ಸಂಗ್ರಹಿಸಿ, ಪ್ರಸ್ತುತಪಡಿಸಿದ್ದಾರೆ. ಈ ಪುಸ್ತಕವನ್ನು ಓದಿದ ರೈತನೊಬ್ಬನು, ಸುಲಭವಾಗಿ ಇಂತಹ ಉತ್ತಮ ಸಸ್ಯಗಳ ಪರಿಚಯ ಮಾಡಿಕೊಂಡು ಅದರ ಕೃಷಿಯನ್ನೂ ಮಾಡಿ, ಅದನ್ನು ಇತರರಿಗೆ ನೀಡುತ್ತಾ ತನ್ನ ಬದುಕನ್ನು ಹಸನು ಮಾಡಿಕೊಳ್ಳಬಲ್ಲ. ಹೀಗಾಗಿ ಗಿಡಮರಗಳ ಪ್ರಾಮಖ್ಯತೆ, ಅವುಗಳನ್ನು ಬೆಳೆಯುವ ವಿಧಾನ ಎರಡನ್ನೂ ಒದಗಿಸುವಲ್ಲಿ ಈ ಪುಸ್ತಕದ ಮಹತ್ವ ಅರಿವಾಗುತ್ತದೆ.

ಹಲವು ಸಸ್ಯಗಳ ಔಷಧೀಯ ಗುಣಗಳನ್ನು ಸಂಗ್ರಹಿಸಿ, ಸರಳವಾಗಿ ಪ್ರಸ್ತುತ ಪಡಿಸಿರುವುದು ಈ ಪುಸ್ತಕದ ಮತ್ತೊಂದು ವಿಶೇಷತೆ. ದಿನನಿತ್ಯ ಬಳಸುವ ನುಗ್ಗೆಕಾಯಿ, ಒಂದೆಲಗ, ಹಾಗಲಕಾಯಿ, ಕರಿಬೇವು, ತುಳಸಿ, ಬೆಳ್ಳುಳ್ಳಿ, ಬೆಂಡೆಕಾಯಿ ಮೊದಲಾದ ಸಸ್ಯಗಳು ಹೇಗೆ ನಮ್ಮ ಆರೋಗ್ಯಕ್ಕೆ ಪೂರಕ ಆಗಬಲ್ಲವು ಎಂಬುದನ್ನು ವಿವರಿಸಲು ಪೆರ್ಮುಡ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರ ಈ ಪರಿಶ್ರಮದ ಫಲವು ಪ್ರತಿ ಪುಟದಲ್ಲೂ ಎದ್ದು ಕಾಣುತ್ತದೆ. ಜತೆಗೆ, ಆಯಾ ಸಸ್ಯದ ಛಾಯಾಚಿತ್ರಗಳನ್ನು ಒದಗಿಸಿದ್ದು ಈ ಪುಸ್ತಕದ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ. ಅಡ್ಡಬಾರೆ, ಕಾನಕಲ್ಲಟೆ ಅಂತಹ ಅತ್ಯಪರೂಪದ ಕಾನನದ ಸಸ್ಯಗಳನ್ನು ಪರಿಚಯಿಸುವ ಲೇಖಕರ ಸದಭಿರುಚಿಯನ್ನು ತೋರುತ್ತದೆ.

ಸಸ್ಯಗಳ ಔಷಧೀಯ ಗುಣಗಳನ್ನು ವಿವರಿಸುವ ಇಲ್ಲಿನ ಹಲವು ಬರಹಗಳು ನಿಮಗೆ ಇಷ್ಟ ಆಗಬಹುದು. ನುಗ್ಗೆ, ಒಂದೆಲಗ, ಬಸಳೆ ಸೊಪ್, ಕೆಸುವು, ನೆಲ್ಲಿಕಾಯಿ ಮೊದಲಾದ ಲೇಖನಗಳನ್ನು ನಾನಂತೂ ಬಹಳ ಮೆಚ್ಚಿದೆ. ಆಯಾ ಸಸ್ಯಗಳ ಔಷಧೀಯ ಗುಣ ತಿಳಿಸುವ ಇಂತಹ ಲೇಖನಗಳು, ಪರೋಕ್ಷವಾಗಿ ಒಟ್ಟು ಸಮಾಜದ ಆರೋಗ್ಯವನ್ನು ಉತ್ತಮಪಡಿಸುವಲ್ಲಿ ಮೌಲ್ಯಯುತ ಕೊಡುಗೆ ನೀಡುತ್ತವೆ. ಇದನ್ನು ಗಮನಿಸಿದಾಗ, 'ಆಹಾರವೇ ಔಷಧ; ಅಡುಗೆ ಮನೆಯೇ ಔಷಧಾಲಯ' ಪುಸ್ತಕದ ಅನನ್ಯತೆ ಅರಿವಾದೀತು. ಸಂತೋಷ್ ರಾವ್ ಪೆರ್ಮುಡ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯಲಿ ಎಂದು ಹಾರೈಸುತ್ತೇನೆ.

-ಶಶಿಧರ ಹಾಲಾಡಿ ಕಾದಂಬರಿಕಾರರು, ಬೆಂಗಳೂರು

ವಂಶಿ ಪಬ್ಲಿಕೇಷನ್ಸ್ ನೆಲಮಂಗಲ, ಬೆಂಗಳೂರು 562123

View full details