Dr. Sukanya Soonagahalli
ಆಧುನಿಕ ಧನ್ವಂತರಿ
ಆಧುನಿಕ ಧನ್ವಂತರಿ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 302
Type - Paperback
ಹೃದಯ ನಮ್ಮ ದೇಹದ ಒಂದು ಮಹತ್ವಪೂರ್ಣವಾದ ಅಂಗ. ಇಂಥ ಹೃದಯಕ್ಕೇನಾದರೂ ಘಾಸಿಯಾದರೆ ಗುಣಪಡಿಸಲು ನೂರಾರು ಆಸ್ಪತ್ರೆಗಳು, ವೈದ್ಯರುಗಳು ಸಿಗಬಹುದು. ಆದರೆ ಅವು ಮಧ್ಯಮ ವರ್ಗದವರಿಗೆ ಬಡವರ ಪಾಲಿಗೆ ಗಗನ ಕುಸುಮ. ಖಾಸಗಿ ಆಸ್ಪತ್ರೆಗಳು ಬಡವರ ಕೈಗೆಟುಕವು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗದು ಎಂಬುದು ಎಲ್ಲರ ಮಾತು. ಏಕೆಂದರೆ, ಒಂದೇ ಸೂರಿನಡಿ 1 ಹೃದಯಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ತಪಾಸಣೆ, ಶುಶ್ರೂಷೆಗಳು ಈ ದೇಶದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಆದರೆ, ಇದಕ್ಕೆ ಅಪವಾದವೆಂಬಂತಿದೆ ಸರ್ಕಾರಿ ಸ್ವಾಯತ್ತ ಸಂಸ್ಥೆಯಾದ 'ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ'. ಅಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಶ್ರೀಮಂತರಿಗೂ ಸಿಗುವ ಗುಣಮಟ್ಟದ ಚಿಕಿತ್ಸೆಗಳೇ ಬಡವರಿಗೂ ಸಿಗುತ್ತದೆ. ಬಡವರಿಗೆ, ನಿರ್ಗತಿಕರಿಗೆ, ಮಧ್ಯಮ ವರ್ಗದವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆಗಳು ದೊರಕಿವೆ. ಇಂದು ಯಾರೇ ಆಗಲಿ, ಹೃದಯದ ಸಮಸ್ಯೆ ಇದ್ದರೆ ತಮ್ಮ ಬಳಿ ಒಂದು ರೂಪಾಯಿ ಹಣವಿಲ್ಲದಿದ್ದರೂ ಚಿಂತಿಸದೆ ಜಯದೇವ ಆಸ್ಪತ್ರೆಯತ್ತ ಧಾವಿಸುತ್ತಾರೆ. ಇದಕ್ಕೆ ಕಾರಣೀಭೂತರು ಹೃದಯವಂತ ಹೃದಯತಜ್ಞರಾದ ಮತ್ತು ಸುಮಾರು 18 ವರ್ಷಗಳ ಕಾಲ ಆ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ 'ಡಾ। ಸಿ.ಎನ್. ಮಂಜುನಾಥ್'ರವರು. ಅವರೊಬ್ಬ ದಾರ್ಶನಿಕ ಪುರುಷ, ಬಡರೋಗಿಗಳ ಪಾಲಿನ ಮಂಜುನಾಥಸ್ವಾಮಿ ಎಂದರೆ ತಪ್ಪಾಗಲಾರದು.
'ರೋಗಿಗಳೇ ನಮ್ಮ ವಿಐಪಿಗಳು' ಎಂದು ಹೇಳಿದ ಮೊತ್ತ ಮೊದಲ ವೈದ್ಯರು ಡಾ| ಸಿ.ಎನ್. ಮಂಜುನಾಥ್ ರವರು ಸಂತ, ಅವಧೂತರ ಸಂವೇದನೆಯನ್ನು ರೂಢಿಸಿ ಕೊಂಡಿರುವ ಅವರು ಸದಾ ಹಸನ್ಮುಖಿಗಳು, ಜಯದೇವ ಆಸ್ಪತ್ರೆಯಲ್ಲಿ ಎತ್ತ ನೋಡಿದರೂ ಅವರ ಹೆಜ್ಜೆಯ ಗುರುತುಗಳಿವೆ. 'ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು' ಎಂದು ಬಸವಣ್ಣನವರು ಸಾರಿದಂತೆ, ಡಾ। ಸಿ.ಎನ್. ಮಂಜುನಾಥ್‌ರವರು ಜಾತಿ, ಕುಲ, ಧರ್ಮ, ಬಡವ ಬಲ್ಲಿದರೆನ್ನದೇ ತಮ್ಮ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೂ ಗುಣಮಟ್ಟದ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷಾಂತರ ಹೃದ್ರೋಗಿಗಳಿಗೆ ಮರುಜೀವ ನೀಡಿದ್ದಾರೆ. ಈ ಮೂಲಕ ಲಕ್ಷಾಂತರ ಕುಟುಂಬಗಳಿಗೆ ನಂದಾದೀಪವಾಗಿದ್ದಾರೆ. ಎಲ್ಲ ನೌಕರರು/ವೈದ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಲ್ಲಿಯೂ ಆತ್ಮವಿಶ್ವಾಸ ಮೂಡಿಸಿದ್ದಾರೆ. ಇದೇ ಇವರ ಕಾರ್ಯ ವೈಖರಿ. ಇಂಥ ಆರಾಧ್ಯ ವೈದ್ಯರೊಬ್ಬರು ನಮ್ಮ ನಡುವೆ ಇರುವುದು ಕರುನಾಡ ಕನ್ನಡಿಗರಾದ ನಮಗೆ ಹೆಮ್ಮೆ.
ಡಾ| ಸಿ.ಎನ್. ಮಂಜುನಾಥ್ ಅವರ ದಿಟ್ಟ ನಿಲುವು, ಕಾರ್ಯ ವೈಖರಿ, ಸಮಾಜಮುಖಿ ಕೆಲಸಗಳು ಸಾಮಾನ್ಯ ಜನರಿಗೂ ಮುಟ್ಟಬೇಕು ಎಂಬ ಉದ್ದೇಶದಿಂದ ಬರೆದ, ಬರೆಸಿದ ಗ್ರಂಥ "ಆಧುನಿಕ ಧನ್ವಂತರಿ", ಈ ಗ್ರಂಥವು ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂಬ ನಂಬಿಕೆ ನಮ್ಮದು.
-ಡಾ. ಸುಕನ್ಯಾ ಸೂನಗಹಳ್ಳಿ
ನೈರೋಬಿ, ಕೀನ್ಯಾ
Introducing "Adhunika Dhanwantari" - a gripping biography written by Dr. Sukanya Suganahalli and published by Sahithyaloka Publications. Learn about the remarkable life of Dhanwantari and gain valuable insights from this renowned writer. Expand your knowledge and understanding with this must-read book.
Share
Subscribe to our emails
Subscribe to our mailing list for insider news, product launches, and more.