Skip to product information
1 of 1

Nagesh Hegde

ಅಭಿವೃದ್ಧಿಯ ಅಂಧಯುಗ

ಅಭಿವೃದ್ಧಿಯ ಅಂಧಯುಗ

Publisher - ಭೂಮಿ ಬುಕ್ಸ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 170

Type - Paperback

'...ಅಂಧಯುಗ'ದ ಒಂದು ನೋಟ
ದೇಶ ಕಟ್ಟುವ ಕೆಲಸವನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸಿದ್ದಾಗಿದೆ. ಕೊಳ್ಳುಬಾಕತನವೇ ಪ್ರಗತಿಯ ಮೂಲಮಂತ್ರವಾಗಿದೆ. ಇದರ ಪರಿಣಾಮವೇನೆಂದರೆ ಕೇವಲ 15 ವರ್ಷಗಳಲ್ಲಿ ನಮ್ಮ ಶತಕೋಟ್ಯಧೀಶರ ಸಂಖ್ಯೆ ಐವತ್ತಕ್ಕೇರಿದೆ. ಗೌರವಯುತ ಬದುಕನ್ನು ನಡೆಸಲಾಗದೆ ಸುಮಾರು ಎರಡು ಲಕ್ಷ ಪ್ರಜೆಗಳು ಇದೇ ಅವಧಿಯಲ್ಲಿ ಜೀವಹರಣ ಮಾಡಿಕೊಂಡಿದ್ದಾರೆ. ಇವೆರಡರ ಮಧ್ಯೆ ನಿತ್ಯದ ಬದುಕಿನಲ್ಲಿ ಗ್ರಹಿಕೆಗೆ ಬಾರದ ಅವೆಷ್ಟೋ ಚಿಕ್ಕದೊಡ್ಡ ಸಂಗತಿಗಳು ನಮ್ಮ ದೇಶವನ್ನು ಹಂತಹಂತವಾಗಿ ಸಂಕಷ್ಟಗಳತ್ತ ತಳ್ಳುತ್ತಿವೆ.
ಅಂಥ ಅವಿತ ಮುಖಗಳನ್ನು ಈ ಕೃತಿಯಲ್ಲಿ ಪುಟ್ಟ ಪುಟ್ಟ ಬರಹಗಳಲ್ಲಿ ತೆರೆದಿಡಲಾಗಿದೆ.

ನಾಗೇಶ ಹೆಗಡೆ

ಐಐಟಿ ಖರಗ್‌ಪುರ್ ಮತ್ತು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ: 'ಪ್ರಜಾವಾಣಿ' ಮತ್ತು 'ಸುಧಾ' ವಾರಪತ್ರಿಕೆಯಲ್ಲಿ ಪತ್ರಕರ್ತನಾಗಿ ನಿವೃತ್ತ: ಕೆಲವು ಕನ್ನಡ ಪತ್ರಿಕೆಗಳಲ್ಲಿ ಅಂಕಣಕಾರ. ವಿಜ್ಞಾನ, ಪರಿಸರ ಮತ್ತು ಅಭಿವೃದ್ಧಿ ವಿಷಯಗಳ ಬರಹಗಳಿಗಾಗಿ ಸಾಹಿತ್ಯ ಅಕಾಡೆಮಿಯಿಂದ ಮೂರು ಬಹುಮಾನ, ಮೀಡಿಯಾ ಅಕಾಡೆಮಿಯಿಂದ ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ ಮತ್ತು ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ. ಈಗ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾ'ದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ಅರೆಕಾಲಿಕ ಪ್ರಾಧ್ಯಾಪಕ; ಅರೆಕಾಲಿಕ ಕೃಷಿಕ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)