1
/
of
1
Shashidhara Haladi
ಅಬ್ಬೆ
ಅಬ್ಬೆ
Publisher - ಅಂಕಿತ ಪುಸ್ತಕ
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಕಟ್ಟುಕಥೆಯ ವ್ಯಾಪ್ತಿಯಿಂದ ಒಟ್ಟು ಕಥೆಯನ್ನು ಹೊರಗಿಡುವ ಎರಡು ಆಯಾಮಗಳನ್ನು ಇಲ್ಲಿನ ಕಥಾಶಿಲ್ಪದಿಂದ ಪ್ರತ್ಯೇಕಿಸಿ ಗುರುತಿಸಿದಾಗ ಶಶಿಧರ ಹಾಲಾಡಿಯವರ ಕಥನಕಲೆಯ ವೈವಿಧ್ಯ ಮತ್ತು ವೈಶಿಷ್ಟ ಮನದಟ್ಟಾಗುತ್ತದೆ. ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಕಲ್ಲೂರಾಯರೊಂದಿಗೋ, ದಡ್ಡ(ನಂತೆ ಕಾಣಿಸುವ) ಭಾಸ್ಕರನೊಂದಿಗೋ ಬೆಟ್ಟ ಗುಡ್ಡಗಳಲ್ಲಿ ಅಲೆಯುತ್ತಾ ನಿರೂಪಕ ಕಾಣುವ ಪುತ್ರಜಾಜಿ ಮೊದಲಾದ ಅಪರೂಪದ ಸಸ್ಯವೈವಿಧ್ಯಗಳೇ ಇರಬಹುದು, ಅಷ್ಟೇ ಅಪರೂಪದ ಪೆಂಗೊಲಿನ್ ರೀತಿಯ ಪ್ರಾಣಿ, ಅಪರಿಚಿತ ಗೂಬೆ, ದಂತಕತೆ- ಯಂತೆ ಇರುವ ಅಬ್ಬೆ ಜೇಡ, ಫ್ಲಾಮಿಂಗೋ ಹಕ್ಕಿಗಳು, ಕಲ್ಕೆರೆಯ ಕೆರೆ ಏರಿಯ ಮರದಲ್ಲಿ ಗೂಡು ಕಟ್ಟಿಕೊಂಡಿರುವ ಕೊಕ್ಕರೆಗಳೇ ಮೊದಲಾದ ಜೀವ ವೈವಿಧ್ಯವೇ ಇರಬಹುದು, ಅವುಗಳನ್ನು ಸೂಕ್ಷ್ಮವಾಗಿ ಅವಲೋಕಿಸುವಲ್ಲಿ ಮತ್ತು ನಿರೂಪಿಸುವಲ್ಲಿ ಬಿಜಿಎಲ್ ಸ್ವಾಮಿ ಮತ್ತು ಪೂಚಂ ತೇಜಸ್ವಿಯವರು ಹಾಕಿಕೊಟ್ಟ ಮಾದರಿಗಳನ್ನು ನೆನಪಿಸುವ ಸೊಗಸಿದೆ. ಕೆಂಚಪ್ಪನ ಗುಡಿಸಲಿನಲ್ಲಿ ಅಡಗಿಸಿಟ್ಟ ಗೋಣಿ ಚೀಲಗಳು, ಬೆಟ್ಟದ ಮೂಲೆಯ ಪುರಾತನ ಕಟ್ಟಡದಲ್ಲಿ ಕಂಡ ಸಂನ್ಯಾಸಿಗಳು, ಸಾಧಕರು, ನಿರ್ಜನ ಹಾದಿಯಲ್ಲಿ ಎದುರಾಗುವ ಸ್ವಾಮಿ, ಆಗಾಗ ಅಬ್ಬೆ ಕಚ್ಚಿ ಸಾಯುವ ಹಳ್ಳಿಗರು ಇವೆಲ್ಲ, ತೇಜಸ್ವಿಯವರು ಸೃಷ್ಟಿಸಿ ಕೈಬಿಟ್ಟ ನಿಗೂಢ ಜಗತ್ತೊಂದರ ಮುಂದುವರಿಕೆಯಂತೆ ಕಾಣಿಸುತ್ತದೆ.
-
ಬೆಳಗೋಡು ರಮೇಶ ಭಟ್
-
ಬೆಳಗೋಡು ರಮೇಶ ಭಟ್
Share

Subscribe to our emails
Subscribe to our mailing list for insider news, product launches, and more.