K. P. Poornachandra Tejaswi
Publisher - ಪುಸ್ತಕ ಪ್ರಕಾಶನ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಯಾವನೋ ದಾರಿಯಲ್ಲಿ ಬರುತ್ತಿದ್ದವನು ಬಣ್ಣವನ್ನು ತಡೆಯಲು ಅಡ್ಡ ಬಂದ, ಬೋಬಣ್ಣನನ್ನು ಝಾಡಿಸಿ ಅವನ ಹೊಟ್ಟೆಗೆ ಒದ್ದು, ಮುಷ್ಟಿಯಿಂದ ಮೋರೆಗೆ ಅಪ್ಪಳಿಸಿದ. ಅವನು ಹೆಚ್ಚು ಕಡಿಮೆ ಉಸಿರೆತ್ತದೆ ನೆಲಕ್ಕೆ ಬಿದ್ದನು, ಅವನ ಹಿಂದೆ ಬರುತ್ತಿದ್ದ ಇನ್ನೊಬ್ಬನು ಮೊದಲವನಿಗಾದ ಗತಿ ನೋಡಿ ಕಾಲಿಗೆ ಬುದ್ದಿ ಹೇಳಿದ, ಎರಡು ಮೂರು ಜನ ರಸ್ತೆಯಲ್ಲಿ ಓಡುತ್ತಿರುವುದನ್ನು ನೋಡಿ ಯಾರನ್ನು ಹಿಡಿಯಬೇಕೋ ಏನು ಕತೆಯೋ ತಿಳಿಯದ ಸುತ್ತಲಿನ ಜನ ಕಂಗಾಲಾಗಿ ನಿಂತರು. ಕೋಪದ ಕೆಂಡವಾಗಿದ್ದ ಬೋಬಣ್ಣ ಅಡ್ಡ ಬಂದ ನೊಗ ಹೊತ್ತಿದ್ದ ಎರಡೆತ್ತುಗಳಲ್ಲಿ ಒಂದಕ್ಕೆ ಹೊಟ್ಟೆಯಲ್ಲಿದ್ದುದೆಲ್ಲಾ ಕಕ್ಕಿಕೊಳ್ಳುವಂತೆ ಒದ್ದನು. ಅವಕ್ಕೆ ತಲೆ ಕೆಟ್ಟು ನೊಗದ ಸರ ಗುಂಪಿನ ಮೇಲೆ ನುಗ್ಗಿ, ನಾಲ್ಕಾರು ಅಪ್ಪಳಿಸಿ ನೆಲಕ್ಕೆ ಬಿದ್ದರು. ಬೋಬಣ್ಣ ಹಿಂದಿರುಗಿ ನೋಡದೆ ಓಡಿ ಓಡಿ ಕತ್ತಲಲ್ಲಿ ಕರಗಿಹೋದನು.
