Asha Raghu
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 190.00
Regular price
Rs. 190.00
Sale price
Rs. 190.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
...ದಾಸಿಯರಿಗೆ ತಕ್ಕಹಾಗೆ, ಮಹಾರಾಜರೊಂದಿಗೆ ದುರ್ಗದ ಪರಿವಾರದ ಸಹಾಯಕರು ಬಂದಿದ್ದ ಬಂಡಿಯಲ್ಲಿ ಕೂರಲು ಹೋದೆ. ಆದರೆ ಮಹಾರಾಜರು ನನ್ನ ಅವರ ರಥದಲ್ಲಿಯೇ ಕೂರಿಸಿಕೊಂಡರು. ಈ ದೃಶ್ಯವನ್ನು ಅರಮನೆಯ ಸಮಸ್ತ ದಾಸದಾಸಿಯರೂ ನಿಂತು ನೋಡುತ್ತಿದ್ದರು. ಮಹಾರಾಜರನ್ನು ಬೀಳ್ಕೊಡಲು ಬಂದಿದ್ದ ತಿಮ್ಮಣ್ಣರಾಯರಿಗೆ, ರಾಣೀವಾಸದವರಿಗೆ, ಏನನ್ನಿಸಿತೋ, ಅವರ ಮುಖಗಳನ್ನು ನೋಡಲು ನನಗೆ ಧೈರ್ಯವಾಗಲಿಲ್ಲ. ನನ್ನ ತಾಯಿಗೆ ಅದು ಹೇಗೋ ಸುದ್ದಿ ತಲುಪಿ, ಆಕೆಯೂ ಬಂದಿದ್ದಳಂತೆ. ಇತ್ತೀಚೆಗೆ ನನ್ನ ನೋಡಲು ದುರ್ಗಕ್ಕೆ ಬಂದಿದ್ದಾಗ ಹೇಳಿದಳು. ಆದರೆ, ಮಹಾರಾಜರ ಪಕ್ಕದಲ್ಲಿ ಕೂತಿದ್ದ ನನ್ನ ಜೊತೆ ಮಾತನಾಡಿಸಲು ಸಂಕೋಚದ ಜೊತೆ, ಸಾಮಂತರಾಜನ ಪರಿವಾರದ ಎದುರು ಮಾತನಾಡಿಸಲು ತುಸು ಭಯವೂ ಇದ್ದದ್ದರಿಂದ, ಗುಂಪಿನ ನಡುವೆ ದೂರದಲ್ಲಿ ನಿಂತು ಕಣ್ಣೀರು ಹಾಕಿದಳಂತೆ, ದಾರಿಯಲ್ಲಿ ಮಹಾರಾಜರು ನನ್ನ ಕೈಗಳನ್ನು ಅವರ ಕೈಗಳಲ್ಲಿ ಹಿಡಿದಿದ್ದರು.. ಸಾರಥಿಗೆ ಕೇಳದಂತೆ ಮೆಲ್ಲಗೆ ಹೇಳಿದರು.. 'ಪಾಣಿಗ್ರಹಣ ಮಾಡಿದ್ದೇನೆ.. ನೀನು ನನ್ನ ರಾಣಿ..' ರಥವು ವೇಗವೂ ಅಲ್ಲದ, ನಿಧಾನವೂ ಅಲ್ಲದ, ನಮ್ಮ ಕೋಮಲ ಭಾವಗಳಿಗೆ ಭಂಗ ತರದಂತೆ ನಿಧಾನಗತಿಯಲ್ಲಿ ಚಲಿಸುತ್ತಿತ್ತು, ದಾಸಿಯರೂ ಕನಸು ಕಾಣಬಹುದು..!
('ಪುಷಗಂಧಿ' ಕಥೆಯ ಸಾಲುಗಳು...)
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
('ಪುಷಗಂಧಿ' ಕಥೆಯ ಸಾಲುಗಳು...)
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
