Skip to product information
1 of 1

Dr. G. Purushottam

ಆಲಿಕೆ ಸಮಸ್ಯೆ-ಪರಿಹಾರ

ಆಲಿಕೆ ಸಮಸ್ಯೆ-ಪರಿಹಾರ

Publisher -

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಕಿವಿಯ ತೊಂದರೆಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸರಳವಲ್ಲ. ಕಿವಿಯ ಕೇಳಿಸುವ ತೊಂದರೆ ಮಾತ್ರವೇ ಅಲ್ಲದೆ ಬೇರೆಯವೂ ಇರಲು ಸಾಧ್ಯ. ಇತರ ಎಲ್ಲ ತೊಂದರೆಗಳಿಗಿಂತ ಮುಖ್ಯವಾದದ್ದು ಕಿವುಡು, ಇದು ಹುಟ್ಟಿನಿಂದಲೇ ಬರಬಹುದು ಅಥವಾ ಬಾಹ್ಯ ಕಾರಣಗಳಿಂದ, ಅಪಘಾತಗಳಿಂದ ಕಿವುಡು ಸಂಭವಿಸಬಹುದು. ಕಿವುಡಿನ ಅತಿ ಹೆಚ್ಚಿನ ಹಾನಿಯೆಂದರೆ ಎಳೆಯ ಮಕ್ಕಳು ಮಾತು ಕಲಿಯುವುದಕ್ಕೆ ಅದು ಅಡ್ಡಿಯಾಗುತ್ತದೆ. ಹೊರಗಿನ ಯಾವುದೇ ಶಬ್ದ, ಮನುಷ್ಯರ ಮಾತುಗಳನ್ನು ಕೇಳಿಸಿಕೊಳ್ಳಲಾಗದೆ, ಒಂದು ಬಗೆಯ ನಿಶ್ಯಬ್ದ ವಾತಾವರಣದಲ್ಲಿ ಆತನ ಬದುಕು ಸಾಗಬೇಕಾಗುತ್ತದೆ.

ಆಧುನಿಕ ವೈದ್ಯಕೀಯ ವಿಜ್ಞಾನದ ಸಹಾಯದಿಂದ ಕಿವಿಯ ಬಗ್ಗೆ, ಕಿವುಡಿನ ಬಗ್ಗೆ ಆಮೂಲಾಗ್ರ ತಿಳಿದುಕೊಳ್ಳುವುದು ಸಾಧ್ಯವಾಗಿದೆ. ಶ್ರವಣ ಸಾಧನಗಳ ಸಹಾಯದಿಂದ ಸ್ವಲ್ಪ ಮಟ್ಟಿಗೆ ಕಿವುಡನ್ನು ನಿವಾರಿಸಿಕೊಳ್ಳಬಹುದು.

ಡಾ|| ಪುರುಷೋತ್ತಮ ಅವರು ಈ ಕೃತಿಯಲ್ಲಿ ತೊಂದರೆಗಳು ಮತ್ತು ಅವಕ್ಕೆ ಪರಿಹಾರಗಳನ್ನು ಸೂಚಿಸಿದ್ದಾರೆ. ಪೂರಕವಾಗಿ ಸಾಕಷ್ಟು ಚಿತ್ರಗಳಿವೆ. ಇವರ 'ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು', 'ಕಿವಿ ಮೊರೆತ, ತಲೆಸುತ್ತು' ಹಾಗೂ 'ತೊದಲು ಮಾತಿನ ತೊಂದರೆ ಉಗ್ಗು ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
View full details