Dr. A. O. Avala Murthy
ಆಕಸ್ಮಿಕ ಆವಿಷ್ಕಾರಗಳು
ಆಕಸ್ಮಿಕ ಆವಿಷ್ಕಾರಗಳು
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 116
Type - Paperback
Couldn't load pickup availability
ಬೆಂಕಿ ಕಡ್ಡಿ, ವ್ಯಾಸಲೀನ್, ವೆಲ್ಕ್ರೊ, ಚ್ಯೂಯಿಂಗ್ ಗಮ್, ಸೇಫ್ಟಿ ಪಿನ್, ಐಸ್ ಕ್ರೀಂ ಕೋನ್, ಪೆನಿಸಿಲಿನ್ ಮುಂತಾದ ಆವಿಷ್ಕಾರಗಳು ನಮ್ಮ ಬದುಕನ್ನು ಸುಲಭಗೊಳಿಸಿವೆ, ಹೆಚ್ಚು ಸಹ್ಯಗೊಳಿಸಿವೆ ಮತ್ತು ಆನಂದಮಯವಾಗಿಸಿವೆ. ಆಶ್ಚರ್ಯವೆಂದರೆ ಈ ಚತುರ ಉಪಜ್ಞೆಗಳೆಲ್ಲ ಉದ್ದೇಶಪೂರ್ವಕವಾಗಿ, ಪುನಃ ಪುನಃ ಪ್ರಯತ್ನಿಸಿ, ಕಂಡುಹಿಡಿದವುಗಳಲ್ಲ. ಇವುಗಳೆಲ್ಲ ಏನನ್ನೋ ಕಂಡುಹಿಡಿಯಲು ಹೋಗಿ, ಆಕಸ್ಮಿಕವಾಗಿ ಮತ್ತೇನೋ ಉಪಯುಕ್ತವಾದದ್ದನ್ನು ಕಂಡುಹಿಡಿದದ್ದರ ಫಲವಾಗಿವೆ-ಅದೃಷ್ಟದ ಝಲಕ್ಕೇನೋ ಎಂಬಂತೆ!
ಖಚಿತ ದಾರಿಯಲ್ಲಿ ನಡೆಯುವ ವಿಜ್ಞಾನದ ಅನ್ವೇಷಣೆಯಲ್ಲಿ ಅದೃಷ್ಟದಂಥ ಅತೀಂದ್ರಿಯ ಪರಿಕಲ್ಪನೆಗೆ ಯಾವುದಾದರೂ ಸ್ಥಾನವಿದೆಯೆ? ಕೇವಲ ಅದೃಷ್ಟದಿಂದಲೇ ಮಹತ್ತರವಾದದ್ದನ್ನು ಕಂಡು ಹಿಡಿಯುವುದು ಸಾಧ್ಯವೆ? ಮೇಲ್ನೋಟಕ್ಕೆ ಅವೈಜ್ಞಾನಿಕ ರೀತಿಯಲ್ಲಾದ ಈ ವೈಜ್ಞಾನಿಕ ಅನ್ವೇಷಣೆಗಳನ್ನು ವಿವರಿಸುವುದು ಹೇಗೆ? ವಿಜ್ಞಾನಿಗಳ ಮತ್ತು ವಿಜ್ಞಾನದ ಇತಿಹಾಸಕಾರರ ಕುತೂಹಲವನ್ನು ಸಮನಾಗಿ ಕೆರಳಿಸಿರುವ, ವಿಜ್ಞಾನದ ಅಡಿಗಲ್ಲುಗಳನ್ನೇ ಅಲ್ಲಾಡಿಸಿ ಮಾನವ ಕೋಟಿಯ ಬದುಕನ್ನೆ ಬದಲಿಸಿರುವ ಈ ಆಕಸ್ಮಿಕ ಪತ್ತೆಗಳ ಹಿಂದಿನ ತಾಕತ್ತು ಅಡಗಿರುವುದೆಲ್ಲಿ?
ಓದುಗರ ಕುತೂಹಲವನ್ನು ಕೆರಳಿಸಬಲ್ಲ ಇಂಥ ೫೦ ಆಕಸ್ಮಿಕ ಆವಿಷ್ಕಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ.
Share


Subscribe to our emails
Subscribe to our mailing list for insider news, product launches, and more.