Mugil, To Kannada : K. Nallathambi
ಆಹಾರ ಚರಿತೆ
ಆಹಾರ ಚರಿತೆ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹250
- Cash on Delivery (COD) Available
Pages - 312
Type - Paperback
Couldn't load pickup availability
ಮುಗಿಲ್ ಅವರ ಆಹಾರ ಚರಿತೆ' ತನ್ನ ವಸ್ತು ಮತ್ತು ಶೈಲಿಯಲ್ಲಿ ಬಿ.ಜಿ.ಎಲ್.ಸ್ವಾಮಿ ಅವರ 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ' ಪುಸ್ತಕವನ್ನು ನೆನಪಿಸುತ್ತದೆಯಾದರೂ, ತನ್ನ ವಿಷಯ ಮಂಡನೆಯಲ್ಲಿ ಮತ್ತು ನಿರೂಪಣಾ ವಿಧಾನದಲ್ಲಿ ಅದಕ್ಕಿಂತಲೂ ಭಿನ್ನವಾಗಿದೆ. ಊಟದ ಎಲೆಯಲ್ಲಿ ಮೊದಲು ಬೀಳುವ ಉಪ್ಪಿನಿಂದ ಹಿಡಿದು, ಕಡೆಗೆ ಹಾಕಿಕೊಳ್ಳುವ ಎಲೆ-ಅಡಿಕೆಯವರೆಗೆ ಲೇಖಕರು ಇಲ್ಲಿ ನಮಗೆ ಭರ್ಜರಿ ಔತಣವನ್ನೇ ಬಡಿಸಿದ್ದಾರೆ! ನಾವು ತಿನ್ನುವ ಆಹಾರ ಎಲ್ಲಿಂದ ಬಂದಿದೆ? ಹಾಗೆ ಬರುವಾಗ ಅದು ಹಾಯ್ದು ಬಂದ ದಾರಿ ಯಾವುದು? ಯಾವ ಕತೆಗಳನ್ನು ಹೊತ್ತು ತಂದಿದೆ? ನಮ್ಮ ಆಹಾರಗಳ ವೈಜ್ಞಾನಿಕ ವಿವರಗಳಿಂದ ಹಿಡಿದು, ಅವುಗಳ ಕುರಿತು ಇರುವ ಜಾನಪದ ಕತೆಗಳ ಬಗ್ಗೆ ವಿಪುಲವಾದ ಮಾಹಿತಿ ಇದೆ. ಅಲ್ಲದೆ, ಇಲ್ಲಿನ ಕಥನ ಕ್ರಮದಲ್ಲಿ ಒಂದು ಹೊಸತನವಿದೆ; ಲವಲವಿಕೆಯ ನಿರೂಪಣಾ ಶೈಲಿಯಲ್ಲಿ ಒಂದು ಆಪ್ತತೆ ಇದೆ. ಓದುಗರ ಜತೆ ಹರಟೆ ಹೊಡೆಯುತ್ತಲೇ ಆಹಾರದ ಚರಿತೆಯನ್ನು ಹೇಳುವ ಕ್ರಮ ಚೇತೋಹಾರಿಯಾಗಿದೆ.
ಅಷ್ಟೇ ಅಲ್ಲ, ಈ ಕೃತಿಗೆ ಇನ್ನೊಂದು ಮಹತ್ವವೂ ಇದೆ. ವಸಾಹತುಶಾಹಿ ಪೂರ್ವದಲ್ಲಿ ನಡೆಯುತ್ತಿದ್ದ ಆಹಾರ-ವಿಚಾರಗಳ ವಿನಿಮಯ ಹೇಗಿರುತ್ತಿತ್ತು ಎನ್ನುವ ಕತೆಯನ್ನು ಈ ಕೃತಿ ಹೇಳುತ್ತದೆ. ಲಾಗಾಯ್ತಿನಿಂದಲೂ ದೇಶ-ಕಾಲಗಳನ್ನು ಮೀರಿ ನಮ್ಮ ಆಹಾರಗಳು ಏಳು ಸಮುದ್ರಗಳನ್ನು ದಾಟಿವೆ, ಖಂಡಾಂತರ ವಲಸೆ ಬಂದಿವೆ.ಹಾಗೆ ಬರುವಾಗ ತಮ್ಮ ಮೂಲ ಗುಣಗಳನ್ನು ಉಳಿಸಿಕೊಂಡೇ ತಾವು ನೆಲೆ ನಿಂತ ಪಾಕ ಸಂಸ್ಕೃತಿಯ ಭಾಗವೇ ಆಗಿ ಬಿಟ್ಟಿವೆ. ಇಂದು ನಮ್ಮ ಆಹಾರ, ಉಡುಪು ಮತ್ತು ಬದುಕುವ ಶೈಲಿಯಿಂದ ಹಿಡಿದು ನಮ್ಮ ಆಲೋಚನಾ ಕ್ರಮಗಳವರೆಗೆ ಪಶ್ಚಿಮಮುಖಿಯಾಗಿಬಿಟ್ಟಿದ್ದೇವೆ ಎಂಬ ಮಾತಿದೆ. ಅದು ಬಹುಮಟ್ಟಿಗೆ ನಿಜವೂ ಕೂಡ. ಇದರಿಂದಾಗಿ ನಮಗೆ ನಮ್ಮ ಸಂಸ್ಕೃತಿ ಬಗ್ಗೆ ಒಂದು ವಿಸ್ಕೃತಿ ಉಂಟಾಗಿದೆ. ಪಶ್ಚಿಮದ ಪ್ರಭಾವದಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವರು ನಮ್ಮಲ್ಲಿ ಪ್ಲಾಸ್ಟಿಕ್ ಸರ್ಜರಿಯಿಂದ ಹಿಡಿದು ವಿಮಾನದವರೆಗೆ ಎಲ್ಲವೂ ನಮ್ಮಲ್ಲೇ ಇತ್ತು ಎನ್ನುವ ಭ್ರಮೆಗೆ ಸಿಲುಕಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಕೂಡ ಇನ್ನೊಂದು ರೀತಿಯ ವಿಸ್ಕೃತಿಯೇ ಸರಿ. ಇವೆರಡೂ ರೀತಿಯ ವಿಸ್ಕೃತಿಗಳ ಅತಿಯಿಂದ ಪಾರಾಗುವ ಪರಿಯನ್ನು ಈ ಪುಸ್ತಕ ಪರಿಚಯಿಸುತ್ತದೆ.
-ವಿ.ಎಸ್.ಶ್ರೀಧರ
Share


Subscribe to our emails
Subscribe to our mailing list for insider news, product launches, and more.