Skip to product information
1 of 2

Dr. N. Mogasale

ಆಗು ನೀ ಅನಿಕೇತನ

ಆಗು ನೀ ಅನಿಕೇತನ

Publisher - ಸಾಹಿತ್ಯ ಭಂಡಾರ

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 168

Type - Paperback

ಡಾ. ನಾ. ಮೊಗಸಾಲೆ ಅವರು ಇಲ್ಲಿ ತಮ್ಮ ಸಣ್ಣಕಥೆಗಳನ್ನು ಆ ರೂಪದ ಹದಿನೈದು ವೃತ್ತಾಂತಗಳೆಂದು ಉಪಶೀರ್ಷಿಕೆಯ ಮೂಲಕ ಪರಿಚಯಿಸಿದ್ದಾರೆ. ಎಲ್ಲಾ ಕಥೆಗಳೂ ಮೂಲತಃ ವೃತ್ತಾಂತಗಳೇ ಆದರೂ ವೃತ್ತಾಂತಗಳೆಲ್ಲವೂ ಕಥೆಗಳಾದಾವು ಎನ್ನಲಿಕ್ಕೆ ಬಾರದು. 'ಹೀಗಾಯಿತು. ನೋಡಿ' ಎನ್ನುವುದು ವೃತ್ತಾಂತದ ಸ್ವರೂಪ. ನಮ್ಮ ಸಮೂಹ ಮಾಧ್ಯಮಗಳು ಇಂದು ಸುದ್ದಿಗಳನ್ನೇ (ವೃತ್ತಾಂತಗಳನ್ನೆ) ಕಥೆಗಳೆಂದು ಕರೆಯಲು ತೊಡಗಿವೆ ('ಹೀಗಿತ್ತು ಇಂದಿನ ಸ್ಟೋರಿ'). ಪದಗಳ ಅರ್ಥ ವ್ಯತ್ಯಾಸವಾಗತೊಡಗಿರುವ ಕಾಲದಲ್ಲಿ ತಮ್ಮ ಸಣ್ಣಕಥೆಗಳನ್ನು ವೃತ್ತಾಂತಗಳೆಂದು ಮೊಗಸಾಲೆಯವರು ವಿನಯಪೂರ್ವಕವಾಗಿ ಕರೆದಿದ್ದಾರೆ. ಹಾಗೆ ನೋಡಿದರೆ ಇವು ವೃತ್ತಾಂತಗಳಾಗಲು ಸಾಧ್ಯವೇ ಇಲ್ಲ. ಏಕೆಂದರೆ ಸೀತಾಪುರವೆಂಬ ಹಳ್ಳಿಯೇ ಇಲ್ಲ!

ಸೀತಾಪುರ ಒಂದು ಕಲ್ಪಿತ ಹಳ್ಳಿ. ಆ ಊರನ್ನು ಕಥೆಗಾರರು ಕಲ್ಪಿಸಿಕೊಂಡಿರುವುದು ದಕ್ಷಿಣಕನ್ನಡದ
ಕರಾವಳಿಯಲ್ಲಿ. ಮೊಗಸಾಲೆ, ಕಾಂತಾವರ ಮುಂತಾದ ಊರುಗಳ ನಡುವೆ ಎಲ್ಲೋ ಒಂದೆಡೆ ಆ ಊರು
ಇದೆ. ಆ ಊರಿನ ಕೇಂದ್ರಭಾಗದಲ್ಲಿರುವ 'ದುರ್ಗಾಭವನ' ಹೊಟೇಲ್ ಕುಪ್ಪಣ್ಣಯ್ಯನವರದು. ಅವರ
ಹೊಟೇಲಿನಲ್ಲಿ ಚಹಾ, ತಿಂಡಿ ತಿನ್ನದ ಯಾವೊಬ್ಬನೂ ಸೀತಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಲ್ಲ
ಎಂದು ಧೈರ್ಯವಾಗಿ ಹೇಳಬಹುದು. ಹಾಗಾಗಿ ಇಲ್ಲಿನ ಕೆಲವು ಕಥೆಗಳನ್ನು ಹೊರತುಪಡಿಸಿದರೆ, ಬೇರೆಲ್ಲ
ಕಥೆಗಳಲ್ಲೂ ಕುಪ್ಪಣ್ಣಯ್ಯನವರು ಕಾಣಿಸಿಕೊಳ್ಳುತ್ತಾರೆ. ಅವರು ಕಾಣಿಸಿಕೊಳ್ಳದ ಕಥೆಗಳೂ ಬಹುಮಟ್ಟಿಗೆ
ಸೀತಾಪುರದಲ್ಲೇ ನಡೆಯುವುದರಿಂದ ಅಪ್ರತ್ಯಕ್ಷವಾಗಿ ಅವರು ಆ ಕಥೆಗಳಲ್ಲೂ ಇದ್ದಾರೆ.

 ಕುಪ್ಪಣ್ಣಯ್ಯನವರ ಹೊಟೇಲಿನ ಹಾಲಿನಲ್ಲಿ ಕಥೆಗಾರರೊಡನೆ ಕುಳಿತು ಕಾಫಿ, ತಿಂಡಿ ತಿನ್ನಬೇಕು ಎಂಬ ಆಸೆಹುಟ್ಟುವ ಮಟ್ಟಿಗೆ ಇಲ್ಲಿಯ ಕತೆಗಳು ನಮ್ಮನ್ನು ಒಳಕ್ಕೆ ಕರೆದುಕೊಳ್ಳುತ್ತವೆ. ಹಲವು ಜಾತಿ, ಮತ, ಬಣ್ಣಗಳ ಕಾರಣದಿಂದ ಮನಸುಗಳು ನೊಂದಿರುವ, ದೇಹಗಳು ಬೆಂದಿರುವ ಮಣ್ಣಿದು. ಇಲ್ಲಿ ಪ್ರೀತಿ, ಸ್ನೇಹದ ಮಾತುಗಳು ಇಂದು ಮತ್ತೆ ಹೊಸದಾಗಿ ಕೇಳಬೇಕಾಗಿವೆ. ಅನಿಕೇತನ ಪ್ರಜ್ಞೆಯ ಹೊಸ ಸಂಭವಗಳನ್ನು ತೋರಬಲ್ಲ ಕಥೆಗಳನ್ನು ರಚಿಸಿದ ಮೊಗಸಾಲೆಯವರಿಗೆ ಅಭಿನಂದನೆ ಮತ್ತು ನಮಸ್ಕಾರಗಳು.

-ಡಾ. ಚಿಂತಾಮಣಿ ಕೊಡ್ಲೆಕೆರೆ (ಮುನ್ನುಡಿಯಿಂದ)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)