Skip to product information
1 of 2

Shridhar Balagar

ಆಡುಕಳ

ಆಡುಕಳ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 232

Type - Paperback

Gift Wrap
Gift Wrap Rs. 15.00

ಒಂದು ಪುಟ್ಟ ಊರಿನಲ್ಲಿ ಜಗತ್ತಿನ ಎಲ್ಲ ತಲ್ಲಣಗಳು, ಸ್ಥಿತ್ಯಂತರಗಳು, ನಾನಾ ಬಗೆಯ ದುರಂತಗಳು ಸಂಭವಿಸುವುದನ್ನು ಚಿತ್ರಿಸುವ, ಇತಿಹಾಸ ಚಲಿಸುವ ರೀತಿಗಳನ್ನು ಆ ಮೂಲಕ ಅನಾವರಣ ಗೊಳಿಸುವ ಅನನ್ಯ ಕೃತಿ "ಆಡುಕಳ", ಮಹಾನಗರಗಳ ರೀತಿನೀತಿಗಳಿಗೂ ಸಣ್ಣ ಪ್ರದೇಶದ ಬದುಕಿನ ಕ್ರಮಗಳಿಗೂ ದೊಡ್ಡ ವ್ಯತ್ಯಾಸಗಳು ರಾಜಕೀಯ, ಆರ್ಥಿಕ ವಿಷಯಗಳಲ್ಲಿರಬಹುದೇ ಹೊರತು ಮನುಷ್ಯರ ಪ್ರಜ್ಞೆಯಲ್ಲಿ ಅಲ್ಲ ಎಂಬ ಸತ್ಯವನ್ನು ಅನುಭವದ ನೆಲೆಗಳಲ್ಲಿ ಮನೋಜ್ಞವಾಗಿ "ಆಡುಕಳ" ಅಭಿವ್ಯಕ್ತಿಸುತ್ತದೆ. ಭೂ ಒಡೆತನದ ವಿಷಯದಲ್ಲಿ ಆಗುವ ದಾಯಾದಿ ಕಲಹಗಳು, ಆ ಕಲಹಗಳು ನಾನಾ ರೀತಿಗಳಲ್ಲಿ ಮನುಷ್ಯರನ್ನು, ಅವರ ಅಂತಃ ಸತ್ವವನ್ನು ಹೇಗೆ ನಾಶಪಡಿಸುತ್ತವೆ ಎಂಬುದನ್ನು ಕೃತಿ ಹಂತಹಂತವಾಗಿ ನಮ್ಮ ಮುಂದೆ ಬಿಚ್ಚಿಡುತ್ತ ಹೋಗುತ್ತದೆ. ಒಂದು ಸಣ್ಣ ಸಮುದಾಯದ ಜೀವನಕ್ರಮಗಳು, ಅನೇಕ ಸಾಂಸ್ಕೃತಿಕ ಆಚರಣೆಗಳು, ವ್ಯಕ್ತಿಗಳ ಅನೇಕ ಬಗೆಯ ಮನೋವ್ಯಾಪಾರಗಳಿಂದ ಬರಡಾಗುತ್ತ, ಮೋಸ ತಟವಟದ ಅಂಶಗಳಾಗುತ್ತ ಕೊನೆಗೆ ಎಲ್ಲರ ದುರಂತಗಳನ್ನು ಸೃಷ್ಟಿಸುವ "ಆಡುಕಳ" ಅತ್ಯದ್ಭುತವಾಗಿ ಪ್ರಕ್ರಿಯೆಗಳನ್ನು ಹೋಗುತ್ತದೆ. ನಿರೂಪಿಸುತ್ತ

ಇಲ್ಲಿ ಲಾಭಕ್ಕಾಗಿ ಎಲ್ಲರನ್ನು ಬಳಸುವ, ಅನೇಕರ ದುರಂತಗಳನ್ನು ಹುಟ್ಟಿಸುವವರಿಂದ ಹಿಡಿದು ಮುಗ್ಧರು, ಅಮಾಯಕರು ಎಲ್ಲರೂ ಒಂದಲ್ಲ ಒಂದು ರೀತಿ ಬದುಕಿನ ದೊಡ್ಡ ದುರಂತ ಸತ್ಯಗಳನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದು ಪ್ರಕಟಿಸಿರುವ "ಎಪಿಕ್"ಗಳ ಗುಣವನ್ನು "ಆಡುಕಳ" ತನ್ನ ಗರ್ಭದಲ್ಲೇ ಇಟ್ಟುಕೊಂಡು ಹಂತಹಂತವಾಗಿ ನಾನಾ ಬಗೆಗಳಲ್ಲಿ ಅದನ್ನು ಎಲ್ಲರ ಅನುಭವಕ್ಕೆ ಸಂವಹನ ಮಾಡುವ ಶ್ರೇಷ್ಠ ಕೃತಿ.

ಮನು ಚಕ್ರವರ್ತಿ

View full details