Skip to product information
1 of 2

Shoodra Srinivas

ಆ ದಿನ

ಆ ದಿನ

Publisher - ಅಭಿನವ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 156

Type - Paperback

Gift Wrap
Gift Wrap Rs. 15.00

ಬದುಕಿನ ಕೆಡುಕನ್ನು ಒಪ್ಪಿಕೊಂಡೂ ಇರುವ ಒಳಿತನ್ನು ಮರೆಯದೆ, ಮನುಷ್ಯ ಸಂಬಂಧ, ಸಂಪರ್ಕ, ಸಹವಾಸಗಳ ಮೌಲ್ಯವನ್ನು ಎತ್ತಿ ಹಿಡಿಯುತ್ತ ಆರೋಗ್ಯಪೂರ್ಣವಾಗಿರುವ ಈ ಕಾದಂಬರಿ ಶೂದ್ರ ಶ್ರೀನಿವಾಸರು ಇನ್ನಷ್ಟು ಕಾದಂಬರಿಗಳನ್ನು ಬರೆಯಲಿ ಎಂಬ ಆಸೆಯನ್ನು ಓದುಗರಲ್ಲಿ ಹುಟ್ಟಿಸುತ್ತದೆ.

ಓ. ಎಲ್. ನಾಗಭೂಷಣ ಸ್ವಾಮಿ (ಮುನ್ನುಡಿಯಿಂದ)

ಇಲ್ಲಿನ ಮುಖ್ಯ ಪಾತ್ರವಾದ ಅಧ್ಯಾಪಿಕೆಯು ತನ್ನ ಅನುಭವವನ್ನು ತಾನು ಕಂಡದ್ದನ್ನು ತಾನೇ ಹೇಳಿಕೊಳ್ಳುವುದರಿಂದ ಕಾದಂಬರಿಯಲ್ಲಿಯ ಅನುಭವಕ್ಕೆ ವೈಯಕ್ತಿಕವಾದ ತೀವ್ರತೆ ಮತ್ತು ಪ್ರಾಮಾಣಿಕತೆ ಬಂದಿದೆ. ಅಷ್ಟೇ ಅಲ್ಲ ಈ ಕಾದಂಬರಿಯಲ್ಲಿ ವ್ಯಕ್ತವಾಗುವ ಆಧುನಿಕ ನಾಗರಿಕತೆಯ ಸಂವೇದನೆಯ ಯಾತನೆ, ಏಕಾಂಗಿತನ, ಅನಾಥ ಪ್ರಜ್ಞೆಗಳಿಗೆ ಈ ತಂತ್ರ ಬಹಳ ಚೆನ್ನಾಗಿ ಹೊಂದಿಕೆಯಾಗಿದೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ಅನಿಶ್ಚಯತೆ ತೊಳಲಾಟ ತೀವ್ರವಾಗಿ ಓದುಗನ ಮನಸ್ಸಿಗೆ ತಟ್ಟುವುದರಿಂದ ಅವನಲ್ಲಿ ಸಹಾನುಭೂತಿ ಹುಟ್ಟಿ ಕಾದಂಬರಿಯ ಅನುಭವಗಳ ಕ್ರಿಯೆಯಲ್ಲಿ ತಾನೂ ಒಂದಾಗುತ್ತಾನೆ. ಇದು ಉತ್ತಮ ಕಾದಂಬರಿಯ ಪ್ರಮುಖವಾದ ಲಕ್ಷಣ ಓದುಗನಿಗೆ ಅನುಭವಜನ್ಯವಾದ ಬದುಕಿನ ಜ್ಞಾನವನ್ನು ಕೊಡುವುದು ಕಾದಂಬರಿಯ ಪ್ರಮುಖವಾದ ಗುರಿಯಾಗಿರುವುದರಿಂದ ಈ ಕಾದಂಬರಿ ಉತ್ತಮ ಕಲಾಕೃತಿಯಾಗಿರುವುದರಲ್ಲಿ ತನ್ನ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಹೆಚ್. ದಂಡಪ್ಪ (ಮುನ್ನುಡಿಯಿಂದ)

ಅತ್ಯಂತ ಸಂವೇದನಾಸೀಲ ಸಾಹಿತ್ಯದ ಅಧ್ಯಾಪಕಿಯಾಗಿರುವ ನಿರೂಪಕಿಯು ತನ್ನ ಸಂಕಟದ ಘಳಿಗೆಗಳನ್ನು ಎದುರಿಸುವ ಹಾಗೂ ರೂಪಿಸಿಕೊಳ್ಳಲು ಹೆಣಗುತ್ತಿರುವ ಬಗೆಯನ್ನು ತೆರೆದಿಡಲು ಶೂದ್ರ ಅವರು ಬಳಸಿಕೊಳ್ಳುವ ಬರವಣಿಗೆಯ ತಂತ್ರವು ವಿಭಿನ್ನ ಹೆಣ್ಣಿನ ವ್ಯಕ್ತಿತ್ವದೊಡನೆ ಸಮೀಕರಿಸುವ ಹೊತ್ತಿನಲ್ಲಿ ಜಗತ್ತಿನ ಹಲವು ಕ್ಲಾಸಿಕ್ ಕೃತಿಗಳ ಹಿನ್ನೆಲೆಯನ್ನು ಉಪಯೋಗಿಸಿಕೊಂಡಿದ್ದಾರೆ. ಒಬ್ಬ ಸೂಕ್ಷ್ಮ ಮನಸ್ಸಿನ ಅಧ್ಯಾಪಕಿಯಾದ ನಿರೂಪಕಿಯೊಡನೆ ಇಂಥ ಪುಸ್ತಕಗಳ ಆವರಣ ಸಹಜವಾಗಿಯೇ ನಿರೀಕ್ಷಿಸುವಂತಹದ್ದು, ಕ್ಲಿಯೋಪಾತ್ರ, ದೌಪದಿ, ಮಿಥ್ ಆಫ್ ಸಿಫಿಸಿಸ್, ವೋಲ್ಟಾಗಂಗಾ, ಚೆಮ್ಮಿನ್ ಮುಂತಾದವುಗಳನ್ನು ನಿರೂಪಕಿಯ ಲೋಕದೊಡನೆ ಮುಖಾಮುಖಿಯಾಗಿಸಲಾಗಿದೆ. ಆದರೆ, ಕಡೆಗೂ ನಿರೂಪಕಿಯೂ ತನ್ನ ಅಸ್ಥಿತ್ವದ ಅನನ್ಯತೆಯನ್ನ ಕಂಡುಕೊಳ್ಳುವುದು ತನ್ನ ಸುತ್ತಲಿನ ಅನುಭವದೊಂದಿಗೇ! ಇವು ಒಟ್ಟಾರೆಯಾಗಿ ಕಾದಂಬರಿಯ ವಸ್ತುವನ್ನು ಹೊರತೆಗೆಯುವಲ್ಲಿ ಸಶಕ್ತವಾಗಿ ಕೆಲಸ ಮಾಡಿವೆ.

ಎಚ್. ಶಶಿಕಲಾ (ಹಿನ್ನುಡಿಯಿಂದ)

Aa Dina is a compelling novel by acclaimed writer Shoodra Srinivas, published by Abhinava. This English translation brings a captivating story to readers seeking meaningful literary fiction. Explore the depth of character development and narrative richness that defines this work. Perfect for book lovers who appreciate thoughtfully crafted storytelling and cultural narratives. Discover why Aa Dina resonates with readers looking for engaging, well-written fiction that offers both entertainment and insight.

View full details