Yandamoori Veerendranath and Yandamoori Kamalendranath | Kannada: Ganesha Bhatta Koppalatota
21 ಒಳ್ಳೆಯ(ತನದ) ಕಥೆಗಳು
21 ಒಳ್ಳೆಯ(ತನದ) ಕಥೆಗಳು
Publisher - Sahithya Prakashana
- Free Shipping Above ₹350
- Cash on Delivery (COD) Available*
Pages - 184
Type - Paperback
Couldn't load pickup availability
ಬಿಸಿಲು-ಮಳೆಗಳನ್ನು ಕಾಣದ ಸುಕುಮಾರಿ ನೀನು ಪಾದರಕ್ಷೆಯೂ ಇಲ್ಲದೇ ಆ ಅಡವಿಯಲ್ಲಿ ಅಷ್ಟೊಂದು ಕ್ರೋಶಗಳ ದೂರವನ್ನು ಹೇಗೆ ನಡೆದುಕೊಂಡು ಬಂದೆ?" ಎಂದು ಕೇಳಿದಳು ತ್ರಿಜಟೆ.
ಸೀತೆ ನಾಚಿಕೆಯಿಂದ ತಲೆ ತಗ್ಗಿಸಿಕೊಂಡಳು. ಅದರಲ್ಲಿ ನಾಚಿಕೆ ಪಡುವಂತಹ ವಿಷಯವೇನಿದೆಯೆಂದು ಆ ರಾಕ್ಷಸಿಗೆ ಅರ್ಥವಾಗಲಿಲ್ಲ. ಪ್ರಶ್ನೆ ಮತ್ತಷ್ಟು ಬಿಗಿಯೆನಿಸಿತು. ಆದರೂ ಹೇಳಲಿಲ್ಲ.
"ನನಗೆ ಗೊತ್ತಿದೆ. ಮಗಳು ಕಷ್ಟಪಡುತ್ತಿದ್ದರೆ ಯಾವ ತಾಯಿ ತಾನೆ ನೋಡಿಕೊಂಡು ಸುಮ್ಮನಿರುತ್ತಾಳೆ. ಕಾಲಿಗೆ ಮುಳ್ಳು ಚುಚ್ಚಿಕೊಳ್ಳದಂತೆ ಹಸುರಿನ ರತ್ನಗಂಬಳಿಯನ್ನೇ ಹಾಸುವುದಿಲ್ಲವೇ?"
ಸೀತೆ ಆಶ್ಚರ್ಯಪಟ್ಟಳು. ಅವಳಿಗೆ ಆ ಆಲೋಚನೆಯೇ ಬಂದಿರಲಿಲ್ಲ. ಆದರೆ ಅದು ನಿಜವೇ. ಅಡವಿಯಲ್ಲಿ ಗ್ರೀಷ್ಠಹೇಮಂತಗಳ ಅಬ್ಬರವನ್ನು ಸ್ವಲ್ಪ ಕಡಿಮೆ ಮಾಡಲು ಇಂದ್ರನನ್ನು ಕೇಳಿಕೊಂಡಿದ್ದಳು ವಿಶ್ವಂಭರೆ, ಕಾತೃಪಿಯ ಮಾತನ್ನು ಇಲ್ಲವೆನ್ನುವ ಧೈರ್ಯ ಇಂದ್ರನಿಗೆಲ್ಲಿಯದು? "ಸ್ವಲ್ಪ, ನೋಡಿದರೂ ನೋಡದಂತೆ ಇದ್ದುಬಿಡು", ಎಂದು ಕಾಲಧರ್ಮಕ್ಕೆ ಹೇಳಿದನು. ಅದರಿಂದ ಕಾಲವೇ ನಿಂತಿತ್ತು.
ಋತುಗಳು ಧರ್ಮ ತಪ್ಪಿದವು ಎಂದು ಋಷಿಗಳು ಕಂಗಾಲಾಗಿ ದಿವ್ಯದೃಷ್ಟಿಯಿಂದ ನೋಡಿದರೆ.. ಏನಾಗಿದೆ? ಅಲ್ಲಿರುವ ವೃಕ್ಷಗಳೂ ವನಸಂತತಿಗಳೂ ವಸಂತವೂ ಅವನಿಜಾತೆಯನ್ನು ನೋಡುತ್ತಾ ತಮ್ಮ ಕೆಲಸವನ್ನು ಬಿಟ್ಟು ಅಲ್ಲಿಯೇ ನಿಂತುಬಿಟ್ಟಿದೆಯಂತೆ.
...ಹೀಗೆಂದುಕೊಂಡಳು ತ್ರಿಜಟೆ. ಆದರೆ ನಿಜವಾದ ವಿಷಯ ಅದಲ್ಲ.
(ಅನುಬಂಧದಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರ
"ಕೈಕಾದೇವಿಯ ನಾಲ್ಕನೇ ಕೋರಿಕೆ" ಹಾಗೂ ಐದು ಕಥೆಗಳು)
Share

Subscribe to our emails
Subscribe to our mailing list for insider news, product launches, and more.