Rangaswamy Mookanahalli
Publisher - ಸಾವಣ್ಣ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ ಅದೇನು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿರುವುದಿಲ್ಲ. ಎಲ್ಲರ ಬಾಯಲ್ಲಿ 'ಎಕಾನಮಿ' ಬಿದ್ದೋಗಿದೆ ಅಥವಾ ಎಕಾನಮಿ ರಿಕವರಿ ಆಗಿದೆ ಎನ್ನುವ ಮಾತನ್ನ ಕೇಳಿರುತ್ತೀರಿ. ಆದರೆ ಯಾರಾದರೂ ವಾಟ್ ಇಸ್ ಎಕಾನಮಿ? ಎಂದಾಗ ತಬ್ಬಿಬ್ಬಾಗುತ್ತೇವೆ ಅಲ್ಲವೇ?
ಗ್ರೋಥ್ ರೇಟ್, ಬಯ್ ಬ್ಯಾಕ್ ಆಫ್ ಶೇರ್ಸ್, ಮ್ಯೂಚುಯಲ್ ಫಂಡ್, ನೆಗೆಟಿವ್ ರೇಟ್ ಆಫ್ ಇಂಟರೆಸ್ಟ್, ಮಾಡರ್ನ್ ಮನಿ ಥಿಯರಿಗಳು ಏನು ಹೇಳುತ್ತವೆ? ಯೂನಿವರ್ಸಲ್ ಬೇಸಿಕ್ ಇನ್ನಮ್ ಸಿದ್ಧಾಂತವೇನು? ಇವಕ್ಕೆಲ್ಲ ಚುಟುಕಾದ ಉತ್ತರಗಳು ಇಲ್ಲಿವೆ. ವುಕಾ ಎಕಾನಮಿ, ಗಿಗ್ ಎಕಾನಮಿ, ವಾರ್ ಎಕಾನಮಿ, ಜೊತೆಗೆ ಎಸ್ಬಿಐ, ಜಿಡಿಪಿ, ಎಫ್ ಆರ್ ಡಿ ಐಗಳ ಜೊತೆಗೆ ಕರೆನ್ಸಿ ವಾರ್, ಟ್ರೇಡ್ ವಾರ್, ಬಯೋ ವಾರ್ ಹೀಗೆ ಸಾಕಷ್ಟು ಪದಪುಂಜಗಳನ್ನ ಉಚ್ಚರಿಸುವುದ ಕೇಳುವುದು ಜೊತೆಗೆ ಕೆಲವೊಮ್ಮೆ ಮಾತಿನಲ್ಲಿ ಬಳಸಿರುತ್ತೇವೆ.
ಸಾವಣ್ಣ ಪ್ರಕಾಶನ
