Goruru Ramaswamy Iyengar
ಹೇಮಾವತಿಯ ತೀರದಲ್ಲಿ
ಹೇಮಾವತಿಯ ತೀರದಲ್ಲಿ
Publisher - ಐಬಿಹೆಚ್ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 143
Type - Paperback
Couldn't load pickup availability
ಜಗತ್ತಿನ ನಾಗರಿಕತೆ, ನೀರನ್ನು ಅವಲಂಬಿಸಿ ಬೆಳೆದ ನಾಗರಿಕತೆ, ಭಾರತಕ್ಕೆ ಈ ಮಾತು ಇನ್ನೂ ಹೆಚ್ಚಾಗಿ ಅನ್ವಯಿಸುತ್ತದೆ. ನದಿ ಇರುವ ಹಳ್ಳಿಯ ಜನಜೀವನ, ನದಿಯ ಕಾರಣದಿಂದಲೇ, ನದಿಯಿಲ್ಲದ ಗ್ರಾಮದ ಜನತೆಯ ಬಾಳಿನಿಂದ ಬೇರೆಯೂ, ಹೆಚ್ಚು ಸುಗಂಧಪೂರಿತವೂ ಮೆರುಗುಳ್ಳದುದೂ ಆಗುತ್ತದೆ, ನದಿಯೇ ಹೀಗೆ ಒಂದು ಗ್ರಾಮಕ್ಕೆ ನಾಯಕಿಯಾಗುತ್ತಾಳೆ ಎಂಬುದರ ವರ್ಣನೆಯಿದೆ. ಹೇಮಾವತಿಯ ತೀರದಲ್ಲಿ, ಈ ಪ್ರಬಂಧದಲ್ಲಿ ಬರುವ “ಹೇಮಾವತಿ ನಮ್ಮೂರ ಬೀದಿ” ಎಂಬ ವಾಕ್ಯದಲ್ಲಿಯೇ ಈ ಪ್ರಬಂಧದ ತಿರುಳು ಅಡಕವಾಗಿದೆ.
“ಬಿಂದಿಗಮ್ಮನ ಜಾತ್ರೆ" ನಮ್ಮ ಗ್ರಾಮಗಳ ಜನರ ದೈವಭಕ್ತಿ, ಆ ಭಕ್ತಿಯ ಅನುಷ್ಠಾನ, ಅವಿದ್ಯಾವಂತ ಪೂಜಾರಿಯಲ್ಲಿ, ವಿದ್ಯಾವಂತರಲ್ಲಿ ಸಹ ಇಲ್ಲದಿರುವ ತೈಲಾಧಾರಾವಚ್ಛಿನ್ನ ಏಕಾಗ್ರತೆ, ಆ ಸಾಧನೆಯಲ್ಲಿ ಅವನು ನಿಷ್ಠನಾಗಿ ಸಿದ್ಧಿಯನ್ನು ಪಡೆದುದು, ಇವುಗಳ ನಿಜಚಿತ್ರಣವಿದೆ.
ನಾವು ಡೆಮಾಕ್ರಸಿಯಲ್ಲಿ ಬಾಳುತ್ತಿದ್ದೇವೆ. ಈಗ ಎಲ್ಲರೂ ಪ್ರಜಾಪ್ರಭುತ್ವದ ಕಟ್ಟುಪಾಡುಗಳಿಗೆ ಒಳಪಡಬೇಕು, ಈ ನಿಬಂಧನೆ ದೇವರಿಗೆ ಸಹ ತಪ್ಪಿದ್ದಲ್ಲ.
ಪ್ರಾಣಿಗಳಿಗೆ ಬುದ್ಧಿ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆತ್ಮವಿಲ್ಲ ಎಂದು ಕೆಲವರು ಹೇಳುತ್ತಾರೆ. ಮನುಷ್ಯ ತನ್ನ ಅಹಂಕಾರವನ್ನು ಮರೆತು ಪ್ರಾಣಿಯನ್ನು ಸಮಾನಸ್ಕಂದನಂತೆ ಭಾವಿಸಿ, ಅದರ ಚಲನವಲನಗಳನ್ನು ನಿರೀಕ್ಷಿಸಿದರೆ, ಎಮ್ಮೆಯೂ ಸಹ ನಮ್ಮ ಮಾತನ್ನು ಅರಿತು ಅದರಂತೆ ನಡೆಯಬಲ್ಲದು, ಎಂಬುದು ಗೊತ್ತಾಗುತ್ತದೆ.
- ಗೊರೂರು ರಾಮಸ್ವಾಮಿ ಅಯ್ಯಂಗಾ
Share

Subscribe to our emails
Subscribe to our mailing list for insider news, product launches, and more.