Goruru Ramaswamy Iyengar
ಹಳ್ಳಿಯ ಬಾಳು
ಹಳ್ಳಿಯ ಬಾಳು
Publisher - ಐಬಿಹೆಚ್ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 150
Type - Paperback
Couldn't load pickup availability
ಶ್ರೀಮಾನ್ ಗೊರೂರು ಹಳ್ಳಿಗರ ಬಾಳನ್ನು ಸ್ವಂತವಾಗಿ ಕಂಡಿದ್ದಾರೆ. ಅನುಭವಿಸಿದ್ದಾರೆ. ಅವರ ರಸಿಕತೆಯನ್ನು ಗುರುತಿಸಿದ್ದಾರೆ. ಅವರ ಸಂಸ್ಕೃತಿಯನ್ನು ಮೆಚ್ಚಿದ್ದಾರೆ. ಅವರ ಸಾಹಿತ್ಯವನ್ನು ಅರಿತಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಹಳ್ಳಿಗರ ಬಗೆಗೆ ಅಪಾರವಾದ ಸಹಾನುಭೂತಿಯಿದೆ. ಇವೆಲ್ಲವುಗಳ ಫಲವಾಗಿ ಅವರು ಹಳ್ಳಿಯ ಬಾಳಿನ ಸೊಗಸನ್ನು ಸರಿಯಾಗಿ ಚಿತ್ರಿಸಬಲ್ಲರು. ಅದಕ್ಕೆ ಬೇಕಾದ ಲೇಖನ ಕಲೆಯೂ ಅವರಿಗೆ ಸಾಧಿಸಿದೆ.
“ಲೋಕದ ಬಂಧುವಾದ ರೈತನ ಕಣದಲ್ಲಿ ರಾಶಿ ನಡೆದಿರುವಾಗ ಶ್ಯಾನುಭೋಗರು, ಪಟೇಲರು, ಜೋಯಿಸರು, ಮೇಟರು, ಪೂಜಾರಿ, ಶೇಕದಾರ, ಹಾವಾಡಿಗ, ದೊಂಬ, ಅಗಸ, ಹಜಾಮ; ಮುಂದೆ ಕುರಿಯವ, ಹಂದಿಚೀಕ, ಉಳ್ಳಹಾಕುವವನು, ಚಿತ್ರಗೊಂಬೆ, ಮುತ್ತಿಗೊಂಬೆ 'ಮಿರಾಸೆ'ಗೆ ಬರುತ್ತಾರೆ. ಇವರಲ್ಲದೆ ಮಹಾರಾಷ್ಟ್ರದ ಬುರುಡೆ ಬೆಸ್ತರು, ಉತ್ತರ ಕರ್ನಾಟಕದ ಜೋಗವ್ವಗಳು ಬೊಂಬಾಯಿ ತಮಾಷೆ ಇವರೂ ಮೈಸೂರಿನ ಹಳ್ಳಿಗಳಿಗೆ ನುಗ್ಗುವುದುಂಟು. ಇವರೆಲ್ಲರ ಮೆರವಣಿಗೆಯನ್ನು ಗ್ರಂಥಕರ್ತರು ನಮಗೆ ತೋರಿಸಿದ್ದಾರೆ. ಜನಪದ ಸಾಹಿತ್ಯದ 'ಜೇನುಸೋರುವ ಹಾಗೂ ಮಾಣಿಕ್ಯದಂತಹ ಮಾತುಗಳನ್ನು ವಿಫುಲವಾಗಿ ಬಳಿಸಿಕೊಳ್ಳಲಾಗಿದೆ.
ಶ್ರೀ ಸ.ಸ. ಮಾಳವಾಡ, ಪ್ರಬುದ್ಧ ಕರ್ನಾಟಕ
Share

Subscribe to our emails
Subscribe to our mailing list for insider news, product launches, and more.