ಕಥೆಗಳ ಕುರಿತು The more personal it is, the more creative it will be ಎನ್ನುವ ಮಾತಿದೆ.
ಮೇಘನಾ ಅವರ ಹೊಸ ಪುಸ್ತಕ ಓದಿದ ನಂತರ ನನಗೆ ಈ ಮಾತು ಮತ್ತೆ ನೆನಪಾಯಿತು. ಅವರ ಹಿಂದಿನ ಕೆಲವು ಪುಸ್ತಕಗಳನ್ನು ಓದುವಾಗ ಕಥೆ ಹೇಳುವಾಗ ಅಲ್ಲಲ್ಲಿ ತಡವರಿಸುವಂತೆ ಭಾಸವಾಗುತ್ತಿತ್ತು, ಆದರೆ ತಮ್ಮ pregnancy ಜರ್ನಿಯ ಕಥೆಗಳನ್ನು ಹೇಳವಾಗ ಅವರ ಸ್ಪೀಡು ನೋಡಿ ಬೆರಗಾಯಿತು. ಹಾಗೆಯೇ ತಮ್ಮದೆ ಜರ್ನಿಯನ್ನು ಕೊಂಚ ಬದಿಗೆ ಸರಿದು ನಿಂತು objective ಆಗಿ ಬರೆದಿದ್ದಾರೆ.

ಈ ಅನುಭವಗಳನ್ನು ಬರೆಯುವಾದ ತೀರಾ ಎಮೋಷನಲ್ ಆಗಿಯೂ ಅಕಾಡೆಮಿಕ್ ಆಗಿಯೂ ಬರೆಯುವ ಅಪಾಯವಿರುತ್ತದೆ. ಇವೆರಡನ್ನೂ ಮಾಡದೆ ಒಂದು ಕಥೆ ಬರೆದಂತೆ ಬರೆದು, ಇಡೀ ಚಿತ್ರಗಳನ್ನು ಕಣ್ಣುಂದೆ ಹರುವಂತೆ ಬರೆದು ಆ ಅಪಾಯದಿಂದ ಪಾರಾಗಿದ್ದಾರೆ.
ವೈಚಾರಿಕತೆ ಮತ್ತು ನಂಬಿಕೆಗಳ ನಡುವಿನ ತೊಳಲಾಟ, ಪರಂಪರೆಯನ್ನು ಸಂಭಾಳಿಸುವ ಸವಾಲು, ಪ್ರಯೋಗಕ್ಕೆ ಹಾತೊರೆಯುವ impulsive ಮನಸ್ಸು, ಅನಿಶ್ಚಿತತೆ, ಭಯ, ಕೊನೆಯಿರದ ಒಂದು ಹೋಪ್, ತಲುಪಿದ ನಂತರದ ನಿರಾಳತೆ…ಎಲ್ಲಾ ಮಿಲಿನಿಯಲ್ಗಳ ಅನುಭವಿಸುವ ತಳಮಳಗಳನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಹಾಗಾಗಿ ಈ ಅನುಭವ ಗುಚ್ಛಕ್ಕೆ ‘ಮಿಲೆನಿಯಮ್ ಅಮ್ಮ’ ಎನ್ನುವುದು ಸೂಕ್ತವಾದ ಟೈಟಲ್. ಈ ಪುಸ್ತಕ ಓದಿದ ನಂತರ ಮಕ್ಕಳನ್ನು ಹೆರುವುದಕ್ಕೆ ಎಂತಹ ನಿಸ್ವಾರ್ಥತೆ, ತಾಳ್ಮೆ, empathy tolerance ಬೇಕು ಎನ್ನಿಸಿ, ನನ್ನಂತಹ self centered ಮನುಷ್ಯನನ್ನು ಗಂಡಾಗಿ ಹುಟ್ಟಿಸಿದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಿದೆ.
ಬದುಕಿನ ಒಂದು ಸವಾಲಿನ ಘಟ್ಟವನ್ನು ಹೀಗೆ ಪುಟ್ಟದಾಗಿ ಡಾಕ್ಯಮೆಂಟಾಗಿ ಮಾಡಿಡುವುದು ಎಷ್ಟು ಚೆಂದ! Very much impressed and Appreciate your efforts.
ಈ ಪುಸ್ತಕವನ್ನು ಕೊಳ್ಳಲು ಭೇಟಿ ಕೊಡಿ: ಮಿಲೇನಿಯಲ್ ಅಮ್ಮ