Harivu Books
ಅಮರಾಪುರ ಎಸ್ಟೇಟ್
ಅಮರಾಪುರ ಎಸ್ಟೇಟ್
Publisher -
- Free Shipping Above ₹350
- Cash on Delivery (COD) Available*
Pages -
Type -
Couldn't load pickup availability
'ಅಮರಾಪುರ ಎಸ್ಟೇಟ್' ಕಾದಂಬರಿಯ ಲೇಖಕಿ ಸೌಮ್ಯ (ಸೋನು) ನನಗೆ ಪರಿಚಯವಾದದ್ದು ಎರಡು ವರ್ಷದ ಹಿಂದೆ ಹುಬ್ಬಳ್ಳಿಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ. ಅದೇನೋ, ಅಮ್ಮ-ಮಗಳಾಗಿ ಬಿಟ್ಟೆವು; ಇದೀಗ ಇವಳ ಈ ಕಾದಂಬರಿಗೆ ಬೆನ್ನುಡಿ ಬರೆಯುವ ಅವಕಾಶ ನನಗೆ.
ಕೇವಲ 27 ವರ್ಷ ವಯಸ್ಸಿನ ಸೋನು ಎಂ.ಕಾಂ, ಎಂ.ಬಿ.ಎ ಮಾಡಿದ್ದರೂ, ಸಾಹಿತ್ಯ ಕ್ಷೇತ್ರಕ್ಕೆ ಅಡಿಯಿಟ್ಟ ಮೂರು ವರ್ಷದಲ್ಲಿ 600 ಕವನ, 50 ಲೇಖನ, 45ಕ್ಕೂ ಹೆಚ್ಚು ಸಣ್ಣ ಕಥೆಗಳು ಹಾಗೂ 6 ಕಾದಂಬರಿಗಳನ್ನು ಬರೆದಿದ್ದಾಳೆ. ಅವಳ 7ನೇ ಕೃತಿ ಈ 'ಅಮರಾಪುರ ಎಸ್ಟೇಟ್' ಆದರೆ, 8ನೇ ಕೃತಿ ಈಗಾಗಲೇ ಅಚ್ಚಿನಲ್ಲಿದೆ. ಇವಳ ಬರಹದ ವೇಗಕ್ಕೆ ನಾನು ಸದಾ ಬೆರಗು. ಚೂರು-ಪಾರು ಬರೆಯಲು ಹೊಯ್ದಾಡುವ ನಾವು ಇವಳನ್ನು ನೋಡಿ ಬರೆಯುವುದನ್ನು ಕಲಿಯಬೇಕು ಅನಿಸುತ್ತದೆ.
'ಅಮರಾಪುರ ಎಸ್ಟೇಟ್' ಒಂಥರಾ ಪತ್ತೇದಾರಿ ಕಾದಂಬರಿ. ಹಲವು ಕೋನಗಳಲ್ಲಿ, ಹಲವು ವಿಧವಾಗಿ ಗೋಚರಿಸುವ ಇವಳ ಕೈಯಲ್ಲಿ ಅಮರಾಪುರ ಎಸ್ಟೇಟ್ ಕೊನೆಯವರೆಗೂ ತನ್ನ ನಿಗೂಢತೆಯನ್ನು ಬಿಟ್ಟುಕೊಡುವುದಿಲ್ಲ. ಪ್ರತಿ ಹಂತದಲ್ಲೂ ಹೊಸದೇನಕ್ಕೋ ಮಗ್ಗುಲಾಗುವ ಕಥೆ, ಎಲ್ಲ ತಿರುವುಗಳಲ್ಲೂ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ವಿಭಿನ್ನ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುವುದರಲ್ಲಿ ಸಂಶಯವಿಲ್ಲ. ಗೆದ್ದು ಬರುವ ಎಲ್ಲಾ ಅರ್ಹತೆ ಈ ಕಾದಂಬರಿಗಿದೆ. ಪ್ರೀತಿಯ ಮಗಳು ಸೌಮ್ಯ ಉತ್ತಮ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸುವೆ.
- ಪದ್ಮಜಾ ಜೋಯ್ಸ್, ತೀರ್ಥಹಳ್ಳಿ
Share

Subscribe to our emails
Subscribe to our mailing list for insider news, product launches, and more.