Skip to product information
1 of 1

ಮಲ್ಲಿಕಾರ್ಜುನ. ಡಿ. ಜಿ.

ಯೋರ‍್ದಾನ್ ಪಿರೆಮಸ್ - ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ

ಯೋರ‍್ದಾನ್ ಪಿರೆಮಸ್ - ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ

Publisher: ನವಕರ್ನಾಟಕ ಪ್ರಕಾಶನ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

 “ರಂಜನೆಯ, ಜ್ಞಾನಾರ್ಜನೆಯ, ಅನುಭವಗಳ ಗಣಿಯಾದ ಲೋಕ ಸಂಚಾರದ ಪ್ರಥಮನೆಂದರೆ, ನಾರದನೇ ಇರಬೇಕು. ದಾರಿಯನ್ನು ಇಂದಿಗೂ ಅನುಸರಿಸುವವರೇ ಆಗಿದ್ದೇವೆ. ನಾರದ ಭೂಮಾರ್ಗ, ಗಗನಮಾರ್ಗ, ನೀರು ದಾರಿಗಳಲ್ಲಿ ಸಂಚರಿಸಿದಂತೆ, ನಾವೂ ಅದೇ ಮಾರ್ಗಗಳಲ್ಲಿ ಪ್ರವಾಸ ಮಾಡುತ್ತೇವೆ. ಆದರೆ ಹಾಲ್ಗಡಲಿನ ಸಂಚಾರದ ವಿಷಯಕ್ಕೆ ಬಂದರೆ, ಅವನದು ನಾಲ್ಕನೇ ಮಾರ್ಗ”. ಈ ಮಾತುಗಳು ಈ ಕೃತಿಯ ಲೇಖಕರದ್ದು.

ಇವರು ಇತ್ತೀಚೆಗೆ ಕೈಗೊಂಡ ಈಜಿಪ್ಟ್ ಪ್ರವಾಸ ಕಥನದ ಬಗ್ಗೆ ಇಲ್ಲಿ ಓದಬಹುದು. ಈ ಕೃತಿಯ ವಿಶೇಷವೆಂದರೆ ವೈಯಕ್ತಿಕ ಪ್ರವರಗಳನ್ನು ಬದಿಗಿಟ್ಟು ಸಂದರ್ಶಿಸಿದ ಸ್ಥಳಗಳ ಚಾರಿತ್ರಿಕ ಮಹತ್ವಗಳನ್ನು ಹೇಳಲಾಗಿದೆ. ಜಗತ್ತಿನ ಹಲವು ರೀತಿ ನೀತಿಗಳು ನಮಗಿಲ್ಲಿ ತಿಳಿಯುತ್ತವೆ. ನೈಲ್ ನದಿಯ ಅಗಾಧತೆ ಮುಂದೆ ಮೂಕ ವಿಸ್ಮಿತರಾಗುತ್ತೇವೆ. ತಾಯಿ ತನ್ನ ಸಂತಾನಕ್ಕೆ ಎಲ್ಲ ವಯಸ್ಸಿನಲ್ಲೂ ಪ್ರೀತಿಪಾತ್ರಳಾದಂತೆ, ಜೀವಸೃಷ್ಟಿಯ ಈ ನೆಲವು ಆಶ್ರಯಿಸಿದ ಎಲ್ಲವುದರ ಪ್ರೀತಿಗೂ ಪಾತ್ರವಾಗಿದೆ. ಇದರಲ್ಲಿ ಸಂಚರಿಸುವುದೇ ಒಂದು ಮಹಾನುಭವ, ರೋಮಾಂಚನ, ಈ ಅನುಭವ ಪ್ರತಿಯೊಂದು ಪ್ರವಾಸವನ್ನು ಹೊಸತೆಂಬಂತೆ ಮಾಡುತ್ತದೆ. ಈ ಹೊಸತಿಗಾಗಿ ಹಂಬಲಿಸುವ ಮನಸ್ಸುಗಳು ಪ್ರವಾಸಕ್ಕಾಗಿ ಅನುಕೂಲ ಮಾಡಿಕೊಳ್ಳುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರಾಣಿಗಳೂ ಸಂಚಾರ ಪ್ರಿಯವೆಂಬುದು ತಿಳಿಯುತ್ತದೆ.

View full details