Skip to product information
1 of 1

V. S. Khandekar

ಯಯಾತಿ

ಯಯಾತಿ

Publisher - ಅಂಕಿತ ಪುಸ್ತಕ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping

- Cash on Delivery (COD) Available

ಮಹಾಭಾರತದ ಮೂಲಕಥೆಯಲ್ಲಿ ಕಾಣಿಸಿಕೊಳ್ಳುವ ಯಯಾತಿಯ ಚಿತ್ರಣ ಅತ್ಯಂತ ಪ್ರಾತಿನಿಧಿಕವಾಗಿದೆ. ಯಯಾತಿ ಇಂದಿನ ಸರ್ವಸಾಮಾನ್ಯ ಮನುಷ್ಯನ ಪುರಾಣ ಕಾಲದಲ್ಲಿಯ ಪ್ರತಿಷ್ಠಿತ ಪ್ರತಿನಿಧಿಯಾಗಿದ್ದಾನೆ. ವಿಧ-ವಿಧವಾದ ಸುಖಗಳು ಕೈಗೆ ಬಂದರೂ ಸದಾಕಾಲವೂ ಆತ ಅತೃಪ್ತನಾಗಿಯೇ ಇದ್ದಾನೆ. ಕ್ಷಣಿಕವಾದ ಶರೀರಸುಖ, ಚಿರಂತನವಾದದ್ದೆಂದು ಭಾವಿಸಿ ಅದು ನಿತ್ಯವೂ ತನಗೆ ಹೇಗೆ ಸಿಕ್ಕಬಹುದು ಎಂದು ಚಿಂತಿಸುತ್ತಿದ್ದಾನೆ. ಆತನ ಭಾವಪ್ರಪಂಚದಲ್ಲಿ ಬೇರೆ ಯಾವ ಮೌಲ್ಯಕ್ಕೂ ಸ್ಥಾನವಿಲ್ಲ. ಹಳೆಯ ಕಾಲದ ಮೌಲ್ಯಗಳು ಉಧ್ವಸ್ತವಾಗಿ ಹೊಸಕಾಲದ ಮೌಲ್ಯಗಳು ಏರ್ಪಡದಿದ್ದ ಸಂಧಿಕಾಲದಲ್ಲಿ, ಸಾಮಾನ್ಯ ಮನುಷ್ಯ ಯಯಾತಿಯಂತೆ ತಡಕಾಡುತ್ತಿದ್ದಾನೆ. ಸುಖಕ್ಕಾಗಿ ನಡೆಸುವ ಕುರುಡು ಶೋಧವೇ ಆತನ ಧರ್ಮವಾಗುವುದರಲ್ಲಿದೆ. ಒಂದು ದೃಷ್ಟಿಯಿಂದ ಇದು ಸ್ವಾಭಾವಿಕವೇ ಎನ್ನಬೇಕು, ಯಾವ ಕಾಲದಲ್ಲಿಯಾದರೂ ಲೋಕದಲ್ಲಿ ಕಚನಂಥವರು ಕಡಿಮೆ; ಯಯಾತಿ ಯಂಥವರೇ ಹೆಚ್ಚು!
ಈ ಕಾದಂಬರಿ ಯಯಾತಿಯ ಕಾಮದ ಕಥೆಯಾಗಿದೆ. ದೇವಯಾನಿಯ ಸಂಸಾರದ ಕಥೆಯಾಗಿದೆ, ಶರ್ಮಿಷ್ಠೆಯ ಪ್ರೀತಿಯ ಕಥೆಯಾಗಿದೆ ಮತ್ತು ಕಚನ ಭಕ್ತಿಯ ಪ್ರಗಾಥವಾಗಿದೆ. 'ಯಯಾತಿ' ಶುದ್ಧ ಪೌರಾಣಿಕ ಕಾದಂಬರಿಯಲ್ಲ, ಪುರಾಣದಲ್ಲಿಯ ಒಂದು ಉಪಾಖ್ಯಾನದ ಕಥೆಯನ್ನಾಧರಿಸಿ ಬರೆಯಲಾದ ಒಂದು ಸ್ವತಂತ್ರ ಕಾದಂಬರಿ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)