Babu Krishnamurthy
Publisher - ವಸಂತ ಪ್ರಕಾಶನ
Regular price
Rs. 340.00
Regular price
Rs. 340.00
Sale price
Rs. 340.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಜಗತ್ತಿನಲ್ಲಿ ಇರುವುದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ್ದು ಜಗತ್ತಿನಲ್ಲಿಲ್ಲ...' ಎಂಬಂತೆ ಕಾಲಾನುಕಾಲದಲ್ಲಿ ನಿರಂತರವಾಗಿ ಬೆಳೆದು ನಿಂತಿರುವ ಮಹಾಭಾರತದ ಅಸಂಖ್ಯ ಪಾತ್ರ-ಪ್ರಸಂಗಗಳ ವಿವರ ಈ ಕೃತಿಯಲ್ಲಿದೆ. ವಿಖ್ಯಾತ ವಿದ್ವಾಂಸರಾದ ಪ್ರೊ. ಅ.ರಾ. ಮಿತ್ರ ಅವರು ಮುಖ್ಯ ಪಾತ್ರಗಳನ್ನು ಕೈಬಿಟ್ಟು ಸಾಮಾನ್ಯ ಪಾತ್ರಗಳನ್ನು ಪರಿಚಯಿಸುವ ಸಾಹಸದ ಕೆಲಸವನ್ನು ಇಲ್ಲಿ ಮಾಡಿದ್ದಾರೆ. ಈ ಎಲ್ಲ ಉಪಪಾತ್ರಗಳ ಸಂಗತಿ ಮತ್ತು ಪೂರ್ವಾಪರಗಳನ್ನು ಗಮನಿಸುತ್ತಾ ಹೋದಂತೆ ಓದುಗರಿಗೆ ವ್ಯಾಸಭಾರತದ ಸ್ಕೂಲ ಕಥೆಯ ಪರಿಚಯವೇ ಆಗಿಬಿಡುತ್ತದೆ. ಆ ಹಿನ್ನೆಲೆಯಲ್ಲಿ ಅವರು ಕೊಡುವ ವಿಪುಲ, ವಿಶಿಷ್ಟ ಮಾಹಿತಿ ಸಾಹಿತ್ಯಾಸಕ್ತರಿಗೆ, ಸಂಸ್ಕೃತಿ ಚಿಂತಕರಿಗೆ, ಸಂಶೋಧಕರಿಗೆ ನೆರವಾಗುತ್ತದೆ. ಜನರು, ರಾಜರು, ಋಷಿಗಳ ಜೊತೆಗೆ ಪ್ರಾಣಿಕಥೆ, ಭಾರತದ ನದಿಗಳು, ಸಪ್ತಸಾಗರ, ಸ್ಥಳ ಐತಿಹ್ಯ ಇತ್ಯಾದಿಯನ್ನೂ ಲೇಖಕರು ಪರಿಚಯಿಸಿದ್ದಾರೆ. ಹೀಗಾಗಿ ಮಹಾಭಾರತದ ವಿಸ್ಕೃತ ಪಾತ್ರಪ್ರಪಂಚ ಕುರಿತಂತೆ ಇದೊಂದು ವಿಶ್ವಕೋಶವೇ ಆಗಿದ್ದು, ಸಂಗ್ರಾಹ್ಯ ಕೃತಿಯಾಗಿದೆ.
