K. P. Poornachandra Tejaswi
Publisher - ಪುಸ್ತಕ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
“ವ್ಯಕ್ತಿ ವಿಶಿಷ್ಟ ಸಿದ್ಧಾಂತ” (1964) ತೇಜಸ್ವಿ ಅವರು ಬರೆದ ಮೊದಲ ವೈಚಾರಿಕ ಕೃತಿ. ವ್ಯಕ್ತಿ ವಿಶಿಷ್ಟ ವಾದವು ನಾಸ್ತಿಕ ವಾದ, ಆಸ್ತಿಕ ವಾದ ಇತ್ಯಾದಿ ಎಲ್ಲ ವಾದಗಳಿಗಿಂತ ಮೂಲಭೂತವಾದುದು. ಅದು ಯಾವೊಂದು ನಿರ್ಣಯಕ್ಕೂ ವ್ಯಕ್ತಿಯೇ ಬರುವಂಥ ಅನಂತ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ. ಪರಿಸರ ಮತ್ತು ವ್ಯಕ್ತಿತ್ವ ಸಂಘರ್ಷಣೆಯಾದ ಜೀವನದಲ್ಲಿ ಸಂವೇದನೆಯನ್ನು ಮಾತ್ರ ಸ್ವಂತವೂ, ಸ್ವತಂತ್ರವೂ ಆಗಿ ಉಳಿಸಿಕೊಂಡು ಹೋಗುವುದೇ ಅದರ ಕರ್ತವ್ಯ ಎಂಬ ತತ್ವವನ್ನು ಕಾಣುತ್ತೇವೆ.
“ಯಮಳ ಪ್ರಶ್ನೆ” (1964) ನಾಟಕ, ರಸ್ತೆಯಲ್ಲಿ ಕೆಟ್ಟುನಿಂತ ಮೋಟಾರು ಬೈಕು ಮತ್ತು ತರುಣರಿಬ್ಬರ ಸಂವಾದದ ಸುತ್ತಾ ಸಾಗುವ ಏಕಾಂಕ. ಜೀವನದ ಸಂಕೀರ್ಣತೆ ಹಾಗೂ ಅಸಂಗತತೆಯನ್ನು ಬಿಂಬಿಸುತ್ತದೆ ಈ ನಾಟಕ. ನಾಟಕದಲ್ಲಿ ಬರುವ ಮೋಟಾರು ಸೈಕಲ್, ಚಿಕಿತ್ಸೆಗೆ ಗುಣಪಡಿಸಲಾರದ ನಮ್ಮ ರಾಜಕೀಯ, ಸಾಮಾಜಿಕ, ಧಾರ್ಮಿಕ ವ್ಯವಸ್ಥೆಯ ಸಂಕೇತವಾಗಿ ಕಾಣುತ್ತದೆ.
ಇಂಥ ಹಲವು ಕಾರಣಗಳಿಗಾಗಿ ಕನ್ನಡ ರಂಗಭೂಮಿಯಲ್ಲಿ ಈ ನಾಟಕಕ್ಕೆ ವಿಶಿಷ್ಟ ಸ್ತಾನ ಪ್ರಾಪ್ತವಾಗಿದೆ.
