ಕೆ. ದಾಮೋದರ ಐತಾಳ
Publisher:
Couldn't load pickup availability
ಭಾಷೆ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಪರ್ಕ ಸಾಧನ. ಭಾಷಾ ತಿಳಿವಳಿಕೆ ಹೆಚ್ಚಿದಂತೆ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವೂ ಹೆಚ್ಚುತ್ತದೆ, ಭಾಷೆಯ ಕಲಿಕೆಯಂತೆಯೇ ವ್ಯಾಕರಣ ಕಲಿಕೆ ಸಹ ಮುಖ್ಯವಾದದ್ದು. ಒಂದು ಭಾಷೆಯನ್ನು ಸರಿಯಾಗಿ ತಿಳಿದು ಸಮರ್ಥವಾಗಿ ಅದನ್ನು ದುಡಿಸಿಕೊಳ್ಳಬೇಕಾದರೆ ವ್ಯಾಕರಣ, ಛಂದಸ್ಸು, ಅಲಂಕಾರಗಳ ಪರಿಚಯ ಮಾಡಿಕೊಡುವುದು ಅಗತ್ಯವಾಗುತ್ತದೆ.
ಶಾಲೆಯಲ್ಲಿ ವ್ಯಾಕರಣದ ಬಗ್ಗೆ ಅನೇಕರಿಗೆ ಒಂದು ಬಗೆಯ ಹಿಂಜರಿಕೆ, ವ್ಯಾಕರಣದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದನ್ನು ಅನೇಕರು ಒಂದು ಹೊರೆಯೆಂದು ಭಾವಿಸುತ್ತಾರೆ. ಆದರೆ ಈ ಹಿಂಜರಿಕೆ ನಿರಾಧಾರವಾದುದು. ವ್ಯಾಕರಣವಾಗಲಿ, ಛಂದಸ್ಸಾಗಲಿ ಒಂದು ಆಸಕ್ತಿದಾಯಕ ಕಲಿಕೆಯೆಂದು ವಿವರಿಸುವ ಪ್ರಯತ್ನವೇ ಈ 'ನವಕರ್ನಾಟಕ ವ್ಯಾಕರಣ ಕೈಗನ್ನಡಿ'.
ಇದನ್ನು ರಚಿಸಿರುವ ಶ್ರೀ ಕೆ. ದಾಮೋದರ ಐತಾಳರು ಹಲವು ವರ್ಷ ಕನ್ನಡ ಪಂಡಿತರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜೊತೆಗೆ ಪತ್ರಕರ್ತರಾಗಿ, ಬಳಕೆದಾರರ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ, 'ಬಳಕೆದಾರರ ವೇದಿಕೆ' ಪಾಕ್ಷಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
