B. M. Sharma
Publisher - ನವಕರ್ನಾಟಕ ಪ್ರಕಾಶನ
Regular price
Rs. 290.00
Regular price
Rs. 290.00
Sale price
Rs. 290.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
'ವೋಲ್ಗಾ-ಗಂಗಾ'ದಲ್ಲಿ ಮಾನವ ಜೀವನದ ಸಂಘರ್ಷಗಳ ಚಿತ್ರಣವಿದೆ. ವಿಶ್ವದ ಎಂಟು ಸಾವಿರ ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ರೂಪವಿದೆ. ಕತೆಗಳ ರೂಪದಲ್ಲಿ ರಷ್ಯದ ವೋಲ್ಗಾದಿಂದ ಭಾರತದ ಗಂಗೆಯ ತನಕ ನೆಲೆಸಿರುವ ಜನಾಂಗಗಳ ಉತ್ಪಾನ-ಪತನ, ಸುಖ-ದುಃಖ, ವಿರಹ ಮಿಲನಗಳ ಜೀವಂತ ಹಾಗೂ ಪ್ರಾಮಾಣಿಕ ಚಿತ್ರಣ ದಿವಂಗತ ರಾಹುಲ ಸಾಂಕೃತ್ಯಾಯನರ ನವೀನ ಶೈಲಿಯಾಗಿದ್ದು, ಭಾರತೀಯ ಸಾಹಿತ್ಯದಲ್ಲೇ ಹೊಸ ವಸ್ತುವಾಗಿದೆ. 'ವೋಲ್ಗಾ-ಗಂಗಾ' ರಾಜನೈತಿಕ, ಆರ್ಥಿಕ ಆಧಾರಗಳ ಮೇಲೆ ಚಿತ್ರಿತವಾಗಿದ್ದರೂ ಇದರಲ್ಲಿ ಹೃದಯಸ್ಪರ್ಶಿ ಚಿತ್ರಣಗಳಿವೆ. ಇದೇ ಈ ಕೃತಿಯ ವಿಶೇಷತೆ. ಪ್ರಪಂಚದ ಯಾವ ಭಾಷೆಯಲ್ಲಿಯೂ ಈ ತನಕ ಇದಕ್ಕೆ ಸಮಾನವಾದ ಇನ್ನೊಂದು ಕೃತಿ ಪ್ರಕಟವಾಗಿಲ್ಲ.
ರಾಹುಲ ಸಾಂಕೃತ್ಯಾಯನರು (1893-1963) 'ಮಹಾಪಂಡಿತ' ಎಂದು ಪ್ರಖ್ಯಾತರು. ಅವರು ಖ್ಯಾತ ಲೇಖಕ, ಪ್ರವಾಸಿ, ಸಮಾಜಶಾಸ್ತ್ರಜ್ಞ, ಭಾಷಾಶಾಸ್ತ್ರಜ್ಞ, ದಾರ್ಶನಿಕ, ವ್ಯಾಕರಣ ಹಾಗೂ ನಿಘಂಟು ತಜ್ಞ, ಜಾನಪದ ತಜ್ಞ, ನಾಟಕ, ರಾಜಕೀಯ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅಸಾಧಾರಣ ಪಾಂಡಿತ್ಯವಿದ್ದ ಬಹುಭಾಷಾ ನಿಪುಣರು. ಅವರ 'ಸಿಂಹ ಸೇನಾಪತಿ', 'ಜಯ ಯೌಧೇಯ', 'ದಿವೋದಾಸ' ಮುಂತಾದ ಕೃತಿಗಳ ಕನ್ನಡಾನುವಾದವನ್ನು ನವಕರ್ನಾಟಕ ಪ್ರಕಟಿಸಿದೆ.
ಅನುವಾದಕ ಬಿ. ಎಂ. ಶರ್ಮಾ (1915-1988) ಕಾಸರಗೋಡು ಜಿಲ್ಲೆಯ ಕೋಳ್ಳೂರು ಗ್ರಾಮದವರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಾಲೆಯೊಂದರಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಇವರು ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಹಲವಾರು ಮಕ್ಕಳ ಕೃತಿಗಳನ್ನು ರಚಿಸಿದ್ದಾರೆ.