ರವಿ ಬೆಳಗೆರೆ
Publisher:
Couldn't load pickup availability
ಅತ್ಯಂತ ಆಧುನಿಕ ನಾಗರಿಕ ಸಮಾಜದಿಂದ ಹಿಡಿದು ದುರ್ಗಮ ಅರಣ್ಯದಲ್ಲಿ ವಾಸಿಸುವ ಆದಿವಾಸಿ ಸಮಾಜದವರೆಗೆ ಈ ವಿವಾಹ ಎಂಬ ವ್ಯವಸ್ಥೆ ರೂಢಿಸಿದೆ. ಆದಿಮ ಸಮಾಜದಲ್ಲಿ ಹೆಣ್ಣು ಸರ್ವರ ಆಸ್ತಿಯಾಗಿದ್ದಳು. ಮುಂದೆ ಒಂದು ಗುಂಪಿನವರ ಆಸ್ತಿಯಾಗಿ, ಕಾಲ ಕಳೆದಂತೆ ಒಂದು ಗಂಡಿನ ಆಸ್ತಿಯಾದಳು. ಇದು ವಿವಾಹ ವ್ಯವಸ್ಥೆಗೆ ನಾಂದಿಯಾಯಿತು. ಮುಂದೆ ಧಾರ್ಮಿಕ ಒಪ್ಪಿಗೆಯ ಮುದ್ರೆ ಪಡೆದು ಸುಭದ್ರವಾಯಿತು. ಈಗ ಮದುವೆ ಎಂದರೆ 'ವರದಕ್ಷಿಣೆ' ನೆನಪು ಜೊತೆಗೇ ಬರುವಂತಾಗಿದೆ. ಸಾಧಾರಣ ಮದುವೆಗಳಿಂದ ಹಿಡಿದು ಅತ್ಯಂತ ಆಡಂಬರದ ಮದುವೆಗಳವರೆಗೆ ಎಷ್ಟು ಬಗೆಯ ಮದುವೆಗಳು !
ಅಂದಿನಿಂದ ಇಂದಿನವರೆಗೆ ವಿವಾಹದ ಹುಟ್ಟು ಮತ್ತು ಪೂರ್ವೋತ್ತರ ಗಳ ರೋಚಕ ಇತಿಹಾಸವನ್ನು ಸ್ವಾರಸ್ಯಕರವಾಗಿ ಹೇಳುವ ಕೃತಿ ಇದು.
ಇದನ್ನು ರಚಿಸಿರುವವರು ದಿವಂಗತ ತಾಪಿ ಧರ್ಮಾರಾವ್ (1887-1973). ವೇಗು ಚುಕ್ಕ ಗ್ರಂಥಮಾಲೆ, ಸ್ಥಾಪಿಸಿ ತಮ್ಮ ವಿಚಾರಪೂರ್ಣ ಸಾಹಿತ್ಯ ಕೃತಿಗಳ ಮೂಲಕ ಆಂಧ್ರದಲ್ಲಿ ವಿಚಾರಕ್ರಾಂತಿಯನ್ನು ಹರಡಲು ಬದುಕಿನ ಕೊನೆಯ ದಿನಗಳವರೆಗೂ ಶ್ರಮಿಸಿದವರು. ಬಹುಮುಖ ಪ್ರತಿಭಾಶಾಲಿ, ಕವಿ, ಪಂಡಿತ, ವಿಮರ್ಶಕ, ನಾಟಕಕಾರ ಹಾಗೂ ವಿಚಾರವಾದಿ.
ಪತ್ರಕರ್ತ ರವಿ ಬೆಳಗೆರೆ ಇದನ್ನು ತೆಲುಗಿನಿಂದ ಅನುವಾದಿಸಿದ್ದಾರೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
