Skip to product information
1 of 2

Hariprakasha Konemane

ವಿಸ್ತಾರ ಭಾಗ-1 ಹೊಸ ತಿಳಿವಿನ ಬಾಗಿಲು

ವಿಸ್ತಾರ ಭಾಗ-1 ಹೊಸ ತಿಳಿವಿನ ಬಾಗಿಲು

Publisher - ವಿಸ್ತಾರ ಪ್ರಕಾಶನ

Regular price Rs. 260.00
Regular price Rs. 260.00 Sale price Rs. 260.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 212

Type - Paperback

ಪತ್ರಿಕೋದ್ಯಮದ ಬರಹರೆಂದರೆ ಒಂದು ಬಗೆಯ ಅಸಿಧಾರಾವ್ರತ, ಆದರೆ, ಇದನ್ನು ಲಿಲಾವಿಲಾಸಂದಿಂದ ನಡೆಸಬಲ್ಲವರು ಕೆಲವಲರಿರುತ್ತಾರೆ. ನೈತಿಕ ಶುದ್ಧತೆಯು ಅವರ ಬರಹಕ್ಕೆ ಶಕ್ತಿಯನ್ನು ನೀಡುತ್ತದೆ. ನಾನು ಮೆಚ್ಚುವ ಪತ್ರಕರ್ತರಲ್ಲಿ ಶ್ರೀ ಹರಿಪ್ರಕಾಶ್ ಕೋಣೆಮನೆಯವರು ಒಬ್ಬರು, ಅವರು ಸಾಮಾಜಿಕ-ರಾಜಕೀಯ ಹಾಗೂ ಸಾಂಸ್ಕೃತಿಕ ನೈತಿಕತೆಗೆ ಬೆಲೆ ಕೊಡುವವರು! ಇಲ್ಲಿಯ ಒಟ್ಟು ಬರಹಗಳಲ್ಲಿ "ನೈತಿಕತೆಯ ವಿಸ್ತಾರ "ನಮಗೆ ಕಂಡು ಬರುತ್ತದೆ. ಶುದ್ಧ ನೈತಿಕತೆಯ ಒಡಲೊಳಗೆ ಇದ್ದ 1ಟಿ.ಎನ್.ಶೇಷನ್, ನ್ಯಾಯಮೂರ್ತಿ
ಎನ್.ವೆಂಕಟಚಲಯ್ಯ, ಇಂಥವರನ್ನು ಕುರಿತ ಬರಹಗಳಲ್ಲಿ ನೈತಿಕ ಮೌಲ್ಯವನ್ನು ಎತ್ತಿಹೇಳುತ್ತಾರೆ. ಅದೇ ಸಮಯದಲ್ಲಿ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿ ಗೊಗೊಯ್ ಅವರ ನೈತಿಕ ಪಾವಿತ್ರ್ಯವನ್ನೂ ಪ್ರಶ್ನಿಸುತ್ತಾರೆ. ಇಲ್ಲಿ ಲಾಕ್ಡೌನ್ ಸಮಯದ ವಿವರಗಳಿದ್ದು, ಸುರಕ್ಷತೆಯ ಪ್ರಮೇಯವನ್ನು ಜನಕ್ಕೆ ನೀಡುತ್ತಾರೆ. ನಾವೀಗ ಜಾಗತೀಕರಣದ ಕಬಂಧದಲ್ಲಿ ಇದ್ದೇವೆ. ಇನ್ನೊಂದೆಡೆ ಸ್ವದೇಶಿ ಪರಿಕಲ್ಪನೆಯೂ ನಮ್ಮ ಬೆನ್ನ ಹಿಂದಿದೆ. ಇವೆರಡರಲ್ಲಿ ನಮ್ಮ ಆಯ್ಕೆ ಯಾವುದು? ಇಂಥ ಮಹತ್ವದ ಪ್ರಶ್ನೆಗಳನ್ನು ಇವರು ಎತ್ತಬಲ್ಲರು! ಹರಿಪ್ರಕಾಶ್ ಕೋಣೆಮನೆಯವರು ವ್ಯಕ್ತಿ, ಸಮುದಾಯ, ಸಮಾಜ, ರಾಜ್ಯ, ರಾಷ್ಟ್ರ-ಇವುಗಳೂಳಗಿನ ಹತ್ತಾರು ವಿಷಯಗಳನ್ನು ಇಲ್ಲಿಯ ಲೇಖನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇಲ್ಲಿ ವಿಶ್ಲೇಷಣೆ ಉಂಟೇ ಹೊರತು, ತೀರ್ಮಾನಕ್ಕೆ ಹೋಗುವುದಿಲ್ಲ, ಅವರು ಎಡವನ್ನೂ ನೋಡಬಲ್ಲರು; ಬಲವನ್ನೂ ಬಲ್ಲರು. ಆದರೆ, ಇವೆರಡರ ನಡುವಿನ ಆ ತತ್ವದ ಹುಡುಕಾಟವೂ ಇಲ್ಲುಂಟು. ಇದು ಬುದ್ಧನು ತೊರಿಸಿದ ಮಧ್ಯಮ ಮಾರ್ಗವೇ? ಬರಹಗಳ ವಿಸ್ತಾರ ಸಂಸ್ಕೃತದಲ್ಲಿ ಹೇಳುವಂತೆ "ನಾತಿ ಪ್ರಸ್ವಂ ದೀರ್ಘಂ” ಇದು ಅವರು ವಿಶ್ಲೇಷಣೆಗೆ ಎತ್ತಿಕೊಳ್ಳುವ ವಸ್ತುವಿಗೂ ಭಾಷೆಗೂ ಅಭಿವ್ಯಕ್ತಿಯ ಕ್ರಮಕ್ಕೂ ಚೆನ್ನಾಗಿ ಅನ್ವಯಗೊಳ್ಳುತ್ತದೆ. ಇದು 'ವಿಸ್ತಾರದ ಒಟ್ಟು ತಿರುಳೆಂದು ನಾನು ಬಗೆಯುತ್ತೇನೆ. ಇಲ್ಲಿಯ ಬರಹಗಳು ಎಲ್ಲವನ್ನು ಒಳಗೊಳ್ಳುವ ವಿಚಾರಧಾರೆಗಳನ್ನು ಹೊಕ್ಕು ಬಳಕೆ ಮಾಡಿಕೊಂಡಿವೆ. ವಿಸ್ತಾರದ ಬೆಳಕನ್ನು ಓದುಗರಿಗೆ ತೋರಿಸುತ್ತಲೇ ಅರ್ಥಪೂರ್ಣ ತಥ್ಯದತ್ತ ನಮ್ಮನ್ನು
ಹೊಗಿಸುತ್ತಾರೆ.

-ಪ್ರೊ.ಮಲ್ಲೇಪುರಂ, ಜಿ.ವೆಂಕಟೇಶ ವಿಶ್ರಾಂತ ಕುಲಪತಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)