Kiran Upadhyaya
ವಿಶ್ವತೋಮುಖ
ವಿಶ್ವತೋಮುಖ
Publisher -
Regular price
Rs. 350.00
Regular price
Rs. 350.00
Sale price
Rs. 350.00
Unit price
/
per
- Free Shipping Above ₹250
- Cash on Delivery (COD) Available
Pages -
Type -
'ವಿಶ್ವತೋಮುಖ' ಬಹಳ ಪ್ರೀತಿಯಿಂದ ಬರೆದ ಅಪರೂಪದ ಕೃತಿ, ಬರಹಗಾರ ಮಿತ್ರ ಕಿರಣ್ ಉಪಾಧ್ಯಾಯ ಈ ಪುಸ್ತಕ ಬರೆದಿರುವುದು ತನ್ನ ಆತ್ಮೀಯ ಸ್ನೇಹಿತ, ಅಣ್ಣ, ಗುರು, ಅಂಕಣ ಬ್ರಹ್ಮ ಶ್ರೀ ವಿಶ್ವೇಶ್ವರ ಭಟ್ ಎಂಬ ಸ್ಫೂರ್ತಿಯ ಕುರಿತು. ಇದನ್ನು ಓದುತ್ತಿದ್ದರೆ, ಹೃದಯಾಂತರಾಳದಲ್ಲಿ ಮಥಿಸಿ ಬರೆದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಕಿರಣ್ ಉಪಾಧ್ಯಾಯ ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ಟರ ಹುಟ್ಟೂರಾದ ಮೂರೂರಿನಿಂದ ಹಿಡಿದು, ಅವರ ಈಗಿನ ಕಾರ್ಯಭೂಮಿ, ಕರ್ಮಭೂಮಿಯಾದ ಬೆಂಗಳೂರಿನವರೆಗೆ, ಭಟ್ಟರ ಸುದೀರ್ಘ ಪಯಣವನ್ನು ದಾಖಲಿಸಿದ್ದಾರೆ. ಭಟ್ಟರ ಕುರಿತು ಬರೆದ ಬರಹಗಳು ಎಷ್ಟು ಚೆನ್ನಾಗಿವೆ ಎಂದರೆ, ನೀವು ಅವುಗಳನ್ನು ಓದಬೇಕಿಲ್ಲ. ಅವೇ ಓದಿಸಿಕೊಂಡು ಹೋಗುತ್ತವೆ. ಈ ಪುಸ್ತಕ ವಿಶ್ವೇಶ್ವರ ಭಟ್ಟರ ಬದುಕಿನ ಸಮಗ್ರ ಪರಿಚಯವನ್ನು ಮಾಡಿಕೊಡುತ್ತದೆ. ನಾನೂ ಭಟ್ಟರನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಬಲ್ಲೆ. ಆದರೆ ಈ ಪುಸ್ತಕ ಓದಿದ ಮೇಲೆ ಅವರ ಪರಿಚಯ ಇನ್ನೂ ಹೆಚ್ಚಾದಂತೆ ಭಾಸವಾಗುತ್ತದೆ. ವಿಶ್ವೇಶ್ವರ ಭಟ್ಟರ ವ್ಯಕ್ತಿತ್ವದ, ಹವ್ಯಾಸದ, ಸಾಧನೆಯ ಸಂಪೂರ್ಣ ಪರಿಚಯ ಆಗುತ್ತದೆ. ಬರಹದ ಜತೆಗೆ ಆಯ್ದಭಾವಚಿತ್ರಗಳು, ಅವರ ದಾರಿದೀಪೋಕ್ತಿಗಳು, ವಕ್ರತುಂಡೋಕ್ತಿಗಳು, ಸದ್ಯ ಶೋಧನೆಯ ಲೇಖನಗಳು ಮತ್ತು ಭಟ್ಟರ್ ಸ್ಕಾಚ್ ಪ್ರಶೋತ್ತರಗಳು ಪುಸ್ತಕದ ಮೆರುಗನ್ನು ಹೆಚ್ಚಿಸಿವೆ. ವಿಶ್ವೇಶ್ವರ ಭಟ್ಟರು ಮತ್ತು ಅವರ ಕುರಿತು ಇಂತಹ ಅಪರೂಪದ ಪುಸ್ತಕ ಬರೆದ ಕಿರಣ್ ಉಪಾಧ್ಯಾಯ ಇಬ್ಬರಿಗೂ ಅಭಿನಂದನೆಗಳು.
ಎಸ್. ಷಡಕ್ಷರಿ
ಎಸ್. ಷಡಕ್ಷರಿ
Share
Subscribe to our emails
Subscribe to our mailing list for insider news, product launches, and more.