Skip to product information
1 of 1

Gowritanaya

ವಿಜ್ಞಾನ ತಿಳಿಯಿರಿ

ವಿಜ್ಞಾನ ತಿಳಿಯಿರಿ

Publisher - ಸಪ್ನ ಬುಕ್ ಹೌಸ್

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 53

Type - Paperback

ಈ ಪುಸ್ತಕದ ಮುಖ್ಯ ಉದ್ದೇಶ, 10ರಿಂದ 13 ವಯೋಮಿತಿಯೊಳಗಿನ ವಿದ್ಯಾರ್ಥಿ ಸಮೂಹಕ್ಕೆ ತಮ್ಮ ವೈಜ್ಞಾನಿಕ ಜ್ಞಾನವನ್ನು ಕ್ರೋಢೀಕರಿಸಿಕೊಳ್ಳುವುದರ ಜೊತೆಗೆ ಅಭಿವೃದ್ಧಿ ಪಡಿಸಿಕೊಳ್ಳುವುದು. ಇದುವರೆಗೆ ಕಲಿತಿರುವ ಮೂಲ ವೈಜ್ಞಾನಿಕ ವಿಷಯಗಳನ್ನು, ಕಾರಣಾಂತರಗಳಿಂದ ಮರೆತಿರಬಹುದಾದುದನ್ನು ಬೇಗ ಪುನರಾವರ್ತನೆ ಮಾಡಿ ಪ್ರೌಢಶಾಲಾ ಮಟ್ಟದ ಜಯಪ್ರದ ಜೀವನಕ್ಕೆ ತಕ್ಕಷ್ಟು ತಯಾರಾಗಿದ್ದಾರೆಂದು ಖಾತ್ರಿ ಮಾಡಿಕೊಳ್ಳುವುದಾಗಿದೆ.

ಯಾವ ರೀತಿಯಲ್ಲೂ ಕಡಿಮೆಯಲ್ಲದ ಇನ್ನೊಂದು ಉದ್ದೇಶವೆಂದರೆ, ಆಂತರಿಕ ಪರೀಕ್ಷೆಗಳಿಗೆ ತಯಾರುಮಾಡುವುದು, ಬಾಯಿಪಾಠದಿಂದ ಬೇಸರ ಉಂಟಾಗದಂತೆ ನೋಡಿಕೊಳ್ಳುವುದು ಮತ್ತು ಸರಳ ಸಂಶೋಧನೆಗೆ ಅವಕಾಶ ಕಲ್ಪಿಸುವುದು, ಹಾಗೂ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುವುದಾಗಿದೆ.

“ನೀವೇ ಮಾಡಿ ನೋಡಿ” ಎಂಬ ತೀವ್ರ ಪುನರಾವರ್ತನೆ ಶ್ರೇಣಿ ಎಂದು ಪರಿಗಣಿಸಬಹುದಾದ ಈ ಪುಸ್ತಕದಲ್ಲಿ 890 ಪ್ರಶ್ನೆಗಳನ್ನು 89 ಬೇರೆ ಬೇರೆ ಗುಂಪುಗಳಲ್ಲಿ ಕೊಟ್ಟಿದೆ. ಪ್ರತಿಗುಂಪಿನಲ್ಲಿ 10 ಪ್ರಶ್ನೆಗಳಿದ್ದು, ಅವು ಸಾಮಾನ್ಯವಾಗಿ ಒಂದು ಪದದ ನಿರ್ದಿಷ್ಟ ಉತ್ತರ ಕೋರುತ್ತದೆ.

ಈ ಪ್ರಶ್ನೆಗಳನ್ನು ಪರೀಕ್ಷಾ ಪ್ರಶ್ನೆಗಳಾಗಿ ಉಪಯೋಗಿಸುವ ಉದ್ದೇಶವಿಲ್ಲ. ಅವುಗಳ ಉದ್ದೇಶ ಜ್ಞಾನವನ್ನು ಹೆಚ್ಚಿಸುವುದು, ಜ್ಞಾನವನ್ನು ಪರೀಕ್ಷಿಸುವುದಲ್ಲ, ಹಲವು ಪ್ರಶ್ನೆಗಳಲ್ಲಿ ಉತ್ತರಕ್ಕಿಂತ ಹೆಚ್ಚಾಗಿ ಪ್ರಶ್ನೆಯಲ್ಲಿನ ವಿಷಯವೇ ಪ್ರಮುಖವಾಗಿರುತ್ತದೆ.

ಈ ಪುಸ್ತಕದಲ್ಲಿ ವಿದ್ಯಾರ್ಥಿಗಳು ಕೆಳಗಿನ ಅಂಶಗಳಿಗೆ ಸಂಪನ್ಮೂಲಗಳನ್ನು ಪಡೆಯುತ್ತಾರೆ.

• ಮೂಲ ವಿಷಯಗಳ ಕ್ರೋಢೀಕರಣ ಮತ್ತು ತೀವ್ರ ಪುನರಾವರ್ತನೆ

• ಪರೀಕ್ಷೆಗಾಗಿ ಪುನರಾವರ್ತನೆ ಮತ್ತು ತಯಾರಿ

• ಜ್ಞಾನದ ಅಭಿವೃದ್ಧಿ

• ಸರಳ ಸಂಶೋಧನೆ

= ಕ್ಲುಪ್ತ ಮತ್ತು ನಿರ್ದಿಷ್ಟ ವೈಜ್ಞಾನಿಕ ಭಾಷೆಯ ಬಗ್ಗೆ ಚರ್ಚೆ ಮತ್ತು ಬಾಯಿಪಾಠದ ಕೆಲಸ • ಉಪಯೋಗಕರ ಮತ್ತು ಕುತೂಹಲಕರ ಹಿನ್ನೆಲೆ ವಿಷಯ

• ಕ್ವಿಜ್ ಮತ್ತು ಕ್ವಿಜ್ ಆಟಗಳು

ಪ್ರತಿ ವಿದ್ಯಾರ್ಥಿಗೆ ಈ ಪುಸ್ತಕದ ಪ್ರತಿಯೊಂದನ್ನು ಸೂಚನೆಗಳ ಸಹಿತ ಒದಗಿಸಿ ಹಲವು ಗುಂಪಿನ ಪ್ರಶ್ನೆಗಳನ್ನು ಪ್ರತಿವಾರ ಮನೆಕೆಲಸವಾಗಿ ಉತ್ತರಿಸುವುದು ಲಾಭಕರ ಎಂದು ಅನುಭವದಿಂದ ತಿಳಿದು ಬಂದಿದೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)