C. N. R. Rao
ವಿಜ್ಞಾನ ಕಲಿಯೋಣ - ಸಂಪುಟ 2
ವಿಜ್ಞಾನ ಕಲಿಯೋಣ - ಸಂಪುಟ 2
Publisher - ನ್ಯಾಶನಲ್ ಬುಕ್ ಟ್ರಸ್ಟ್
Regular price
Rs. 340.00
Regular price
Rs. 340.00
Sale price
Rs. 340.00
Unit price
/
per
- Free Shipping Above ₹250
- Cash on Delivery (COD) Available
Pages - 163
Type - Paperback
ಶ್ರೀಮತಿ ಇಂದುಮತಿ ರಾವ್‌ರವರು ಮೈಸೂರು, ಕಾನಪುರ, ಪರ್ ಡ್ಯೂ (U.S.A.) ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಗಳಿಂದ ಪದವಿಗಳನ್ನು ಪಡೆದಿದ್ದಾರೆ. ಅವರು ಸುಮಾರು ನಾಲ್ಕು ದಶಕಗಳಿಂದಲೂ ವಿದ್ಯಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದಲ್ಲಿ ನವೀನತೆಯನ್ನು ತರಲು ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಶ್ರೀಮತಿ ರಾವ್‌ರವರು ಭೂಗೋಳಶಾಸ್ತ್ರದ ತಜ್ಞರಾಗಿ ಅನೇಕ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. DSERT ಸಂಸ್ಥೆಯು ನೆರವೇರಿಸುವ ಶಿಕ್ಷಕರ ತರಬೇತಿ ಕಾರ್ಯಗಾರಗಳಲ್ಲಿ ಭಾಗವಹಿಸಿದ್ದಾರೆ. ಅವರು ಭೂಗೋಳಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.
ಈಗ ಅವರು ಜವಾಹರಲಾಲ್ ನೆಹರೂ ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಮಲ್ಟಿಮೀಡಿಯಾ ತಂಡದ ಗೌರವ ಸಮಾನಾಧಿಕಾರಿಣಿಯಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರೊ. ಸಿ.ಎನ್.ಆರ್.ರಾವ್‌ರವರು ಲೈನಸ್ ಪಾಲಿಂಗ್ ಸಂಶೋಧನಾ ಪ್ರಾಚಾರ್ಯರು ಹಾಗೂ ಜವಾಹರಲಾಲ್ ನೆಹರೂ ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇದಕ್ಕೂ ಹಿಂದೆ ಇವರು ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರಾಗಿದ್ದರು. ಇವರು ಹಲವಾರು ಪ್ರತಿಷ್ಠಿತ ಸಂಸ್ಥೆಗಳಾದ ರಾಯಲ್ ಸೊಸೈಟಿ, ಲಂಡನ್, ನ್ಯಾಷನಲ್ ಅಕ್ಯಾಡಮಿ ಆಫ್ ಸೈನ್ಸ್, ಯು.ಎಸ್.ಎ., ರಷ್ಯನ್ ಅಕ್ಯಾಡಮಿ ಆಫ್ ಸೈನ್ಸ್, ಫೋಂಟಿಫಿಕಲ್ ಅಕ್ಯಾಡಮಿ ಹಾಗೂ ಜಪಾನ್ ಅಕ್ಯಾಡಮಿಗಳ ಸದಸ್ಯರಾಗಿರುತ್ತಾರೆ. ಇವರು ಟ್ರಿಯಸ್ಟೆ (ಇಟಲಿ)ಯಲ್ಲಿರುವ ತೃತೀಯ ಜಗತ್ತಿನ ವಿಜ್ಞಾನ ಅಕ್ಯಾಡಮಿಯ ಸ್ಥಾಪಕ ಸದಸ್ಯರು ಹಾಗೂ ಈಗ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರೊ. ಸಿ.ಎನ್.ಆರ್. ರಾವ್‌ರವರು ಹಲವಾರು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವುಗಳಲ್ಲಿ ಫ್ಯಾರಡೆ ಸೊಸೈಟಿಯ ಮಾರ್ಲೊ ಪದಕ, ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ (ಲಂಡನ್) ನ್ಯೂಸ್ ಪದಕ ಹಾಗೂ ಯುನೆಸ್ಕೋದ ಆಲ್ಬರ್ಟ್ ಐನ್‌ಸ್ಟೈನ್ ಚಿನ್ನದ ಪದಕ ಬಹಳ ಶ್ರೇಷ್ಠ. ಇವರು ಕೆಮಿಕಲ್ ಸ್ಪೆಕ್ಟ್ರೊಸ್ಕೋಪಿ, ಮಾಲಿಕ್ಯೂಲಾರ್ ಸ್ಪೆಕ್ಟರ್ (ಅಣು ವಿನ್ಯಾಸ) ಹಾಗೂ ಕೆಮಿಸ್ಟ್ರಿ ಆಫ್ ಅಡ್ವಾನ್ಸ್‌ಡ್ ಮೆಟೀರಿಯಲ್ ವಿಷಯಗಳ ಮೇಲೆ 1400ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದಾರೆ. ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಗಣನೀಯ ಸೇವೆಗಾಗಿ ಕರ್ನಾಟಕ ಸರ್ಕಾರವು ತನ್ನ ಅತ್ಯುನ್ನತ ಪ್ರಶಸ್ತಿಯಾದ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪ್ರೊ.ಸಿ.ಎನ್.ಆರ್. ಅವರಿಗೆ 2001ನೇ ಇಸವಿಯಲ್ಲಿ ನೀಡಿ ಗೌರವಿಸಿದೆ. ಶ್ರೀಯುತರು ಈ ರೀತಿ ಗೌರವಿಸಲ್ಪಟ್ಟ ಪ್ರಥಮ ವಿಜ್ಞಾನಿ. ಭಾರತ ಸರ್ಕಾರವು ಇತ್ತೀಚೆಗೆ ಪ್ರತಿಷ್ಠಾಪಿಸಿದ ಅತ್ಯುನ್ನತ ಪ್ರಶಸ್ತಿಯಾದ India Science Prize ಅನ್ನು 2005ನೇ ಇಸವಿಯಲ್ಲಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ನೀಡಿ ಗೌರವಿಸಿದೆ. ಅವರು ಈ ಪ್ರಶಸ್ತಿಯನ್ನು ಪಡೆದ ಪ್ರಥಮ ವಿಜ್ಞಾನಿ, ಪ್ರೊ, ರಾವ್‌ರವರಿಗೆ ಇಸ್ರೇಲಿನ ಡಾನ್ ಡೇವಿಡ್ ಅಂತರರಾಷ್ಟ್ರೀಯ ವಿಜ್ಞಾನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ. ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ನೀಡಿ ಗೌರವಿಸಲಾಗಿದೆ.
ಮೂಲ ಇಂಗ್ಲಿಷ್‌ನಲ್ಲಿ ಬರೆಯಲಾದ ಈ ಪುಸ್ತಕದ ಕನ್ನಡಾನುವಾದವನ್ನು ಸಹ ಲೇಖಕರೇ ಒದಗಿಸಿದ್ದಾರೆ.

Share
Subscribe to our emails
Subscribe to our mailing list for insider news, product launches, and more.