M. V. Nagaraja Rao
Publisher - ವಸಂತ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಇಂಗ್ಲಿಷಿನ 'ESSAY' ಎಂಬುದಕ್ಕೆ ಸಂವಾದಿಯಾಗಿ 'ಪ್ರಬಂಧ' ಎಂಬ ಪದವನ್ನು ಬಳಸಲಾಗುತ್ತದೆ. ಯಾವುದೇ ಒಂದು ವಿಷಯವನ್ನು ಕುರಿತ ಸರಳ, ಸುಲಭ ಶೈಲಿಯನ್ನು ಒಳಗೊಂಡ ರಚನೆಯನ್ನು 'ಪ್ರಬಂಧ' ಎನ್ನಬಹುದು. ಇದರಲ್ಲಿ ಲೇಖಕನ ಸುಸಂಸ್ಕೃತ ಚಿಂತನೆ, ಉತ್ತಮ ಅಭಿರುಚಿ, ನಾಗರಿಕ ಸಂವೇದನೆ ಮತ್ತು ದಿನನಿತ್ಯದ ಅನುಭವಗಳು ದಟ್ಟವಾಗುತ್ತಾ ಹೋಗುತ್ತದೆ.
ಮಕ್ಕಳ ಆಲೋಚನಾಶಕ್ತಿ, ಮಾತನಾಡುವ ಕೌಶಲ್ಯದ ಬೆಳವಣಿಗೆ, ವಿಷಯಗಳ ಮೇಲೆ ಸರಳವಾಗಿ, ಸ್ವತಃ ಬರೆಯುವ ಮತ್ತು ಅರ್ಥಮಾಡಿಕೊಳ್ಳುವ ಕೌಶಲ್ಯವನ್ನು ಬೆಳೆಸುವ ಸಲುವಾಗಿ ಹಲವಾರು ವಿಷಯಗಳನ್ನು ಇಲ್ಲ ಸೇರಿಸಲಾಗಿದೆ.
ವಿದ್ಯಾರ್ಥಿಗಳು ಸ್ವತಂತ್ರವಾಗಿ ಪ್ರಬಂಧ ಬರೆಯುವ ಶಕ್ತಿಯನ್ನು ಕಾಗುಣಿತ ತಪ್ಪುಗಳಿಲ್ಲದ, ಸುಲಭವೂ, ಸ್ಪಷ್ಟವೂ ಆದ ಶುದ್ಧ ಭಾಷೆಯನ್ನು ಬಳಸುವಲ್ಲಿ ಕುಶಲರಾಗುವಂತೆ ಮಾಡುವ ಉದ್ದೇಶವನ್ನು ಹೊಂದಿರಬೇಕು. ಅಕ್ಷರಗಳು ದುಂಡಾಗಿ, ಸುಂದರವಾಗಿ, ಲೇಖನ ಚಿಹ್ನೆಗಳನ್ನು ಒಳಗೊಂಡಿರಬೇಕು. ವಿಷಯವ್ಯಾಪ್ತಿಗಿಂತ ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಬೆಳೆಸುವುದಕ್ಕೆ ಹೆಚ್ಚು ಒತ್ತು ನೀಡಬೇಕು. ಮೂರು ದಶಕಗಳಿಗಿಂತಲೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಬೋಧಿಸಿದ ಶ್ರೀ ಎಂ. ವಿ. ನಾಗರಾಜರಾವ್ ಈ ಎಲ್ಲಾ ಆಶಯವನ್ನು ಈ ಪ್ರಬಂಧ ಪುಸ್ತಕದಲ್ಲಿ ಸಮರ್ಪಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
