ಶ್ರೀನಿವಾಸ ಮೂರ್ತಿ ಎನ್. ಸುಂಡ್ರಹಳ್ಳಿ
Publisher: ಸಾವಣ್ಣ ಪ್ರಕಾಶನ
Couldn't load pickup availability
ಜೀವನದ ಪಯಣದಲ್ಲಿ ಸೋಲುವುದು ಮತ್ತು ಗೆಲ್ಲುವುದು ನಿರಂತರವಾಗಿ ನಡೆದೇ ಇರುತ್ತದೆ. ಗೆದ್ದಾಗ ಬೀಗುವವ, ಸೋತಾಗ ಬಾಗುವುದೇನು? ಹೂತು ಹೋಗುತ್ತಾನೆ. ಆಗೆಲ್ಲಾ ಅವನಿಗೆ ಹೊರಗಿನಿಂದ ಒಂದಷ್ಟು ಶಕ್ತಿ ಪ್ರವಾಹ ಆಗಲೇಬೇಕು. ಪ್ರೇರಣೆ ಯಾರಿಗೆ ಬೇಡ ಹೇಳಿ? ಮೊಬೈಲ್ ಕೂಡ ದಿನಕ್ಕೊಮ್ಮೆ ರೀಚಾರ್ಜ್ ಮಾಡಿಸಿರೆಂದು ದುಂಬಾಲು ಬೀಳುತ್ತದೆ. ಬದುಕು ನೆಲ ಕಚ್ಚಿದಾಗ ಮೇಲೆತ್ತಲು ಪ್ರೇರಣೆ ಬೇಡವಾ? ಅನೇಕ ಬಾರಿ ಸೋಲು ಕಂಡ ನಂತರ, ಮುಂದಿನ ದಾರಿ ಕಾಣುವುದಿಲ್ಲ. ಎಂಥಾ ಅಂಧಕಾರ ತುಂಬಿದ್ದಾಗಲೂ ಬೆಳಕು ಹುಡುಕಿ ಗೆಲುವು ಕಂಡವರ ಬದುಕು, ಶಕ್ತಿ ತಂದುಕೊಡುತ್ತದೆ. ಅವುಗಳನ್ನು ಓದುವುದರಿಂದ, ಆ ಬದುಕಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತವಾಗುತ್ತದೆ ಮತ್ತು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ.
ಈ ನಿಟ್ಟಿನಲ್ಲಿ ವಿಧಿಯ ಬೆನ್ನೇರಿ ಕೃತಿಯು ಪ್ರೇರಣೆ ಕೊಡುವಂತಹದ್ದು. ಇಲ್ಲಿನ ಒಬ್ಬೊಬ್ಬರನ್ನೇ ಓದುತ್ತಾ ಹೋದಂತೆ ಸ್ಫೂರ್ತಿಯ ಸೆಲೆ ಪುಟಿಯುವುದರಲ್ಲಿ ಅನುಮಾನವೇ ಇಲ್ಲ. ವಿಧಿಯ ಬೆನ್ನೇರಿ ಕೃತಿಯನ್ನು ಓದಿದ ಮೇಲೆ ಹೊಸದೊಂದು ಸಾಧನೆಗೆ ನಿಮ್ಮ ಮನಸ್ಸು ಅಣಿಯಾದರೆ, ಲೇಖಕರ ಬರಹದ ಶ್ರಮ ಸಾರ್ಥಕ.
