Satish Chapparike
Publisher -
Regular price
Rs. 120.00
Regular price
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಎರಡನೆಯ ಕಥಾ ಸಂಕಲನ 'ವರ್ಜಿನ್ ಮೊಹಿತೊ', ಈ ಸಂಕಲನದಲ್ಲಿನ ಏಳೂ ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವ ರೀತಿ, ತಂತ್ರ, ಭಾಷೆ, ನೇಯ್ದೆಗಳಲ್ಲಿಯೂ ವೈವಿಧ್ಯ ಸಾಧಿಸಲು ಸಾಧ್ಯವಾಗಿರುವುದು ವಿಶೇಷ. ಒಂದರ ಹೆಜ್ಜೆ ಜಾಡಿನಲ್ಲಿ ಮತ್ತೊಂದು ಸಾಗದೇ ಇರುವ ಹಾಗೆ ಕತೆ ಕಟ್ಟುವ ರೀತಿ ಗಮನ ಸೆಳೆಯುತ್ತದೆ. 'ವರದಿ'ಯಾಗದೇ 'ಕತೆ'ಯಾಗಿಸುವ ಕಸುಬುಗಾರಿಕೆ ಕಾಣಿಸುತ್ತದೆ. ಅತೀ ಎನ್ನಿಸದ ಭಾವನಾತ್ಮಕ ಅಂಶ ಈ ಕತೆಗಳ ಕೇಂದ್ರದಲ್ಲಿವೆ. ನವ್ಯೋತ್ತರ ಕಾಲಘಟ್ಟದ ಕನ್ನಡದ ಕತೆಗಳ ಮುಂದುವರಿಕೆಯಂತಿರುವ ಈ ಸಂಕಲನದ ಕತೆಗಳು ವರ್ತಮಾನಕ್ಕೆ ಮಿಡಿಯುತ್ತವೆ. ಅಷ್ಟು ಮಾತ್ರವಲ್ಲದೇ ಸಮಕಾಲೀನ ಸಂಕೀರ್ಣ ಬದುಕಿನ ಸಂಘರ್ಷವನ್ನು ತಣ್ಣನೆಯ ಧಾಟಿಯಲ್ಲಿ ಕಟ್ಟಿಕೊಡುತ್ತವೆ. ಇಲ್ಲಿನ ಕತೆಗಳಲ್ಲಿನ ವ್ಯಕ್ತಿಗಳು-ವ್ಯಕ್ತಿತ್ವಗಳು 'ಮಾನವೀಯ' ನೆಲೆಯಲ್ಲಿ ಮಿಡಿಯುವುದು 'ತಂತ್ರ' ಅಲ್ಲ. ಬದಲಿಗೆ ಲೇಖಕರ ಬದುಕಿನ ಬಗೆಗಿನ ಕಾಳಜಿ'ಯು ಪಾತ್ರಗಳ ರೂಪದಲ್ಲಿ ಕತೆಗಳಾಗಿವೆ.
