Skip to product information
1 of 1

Lokesh Agasanakatti

ವೈಷ್ಣವ ಜನತೋ

ವೈಷ್ಣವ ಜನತೋ

Publisher - ಅಹರ್ನಿಶಿ ಪ್ರಕಾಶನ

Regular price Rs. 365.00
Regular price Rs. 365.00 Sale price Rs. 365.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಬನನಕಟ್ಟೆ ಎಂಬ ಹಳ್ಳಿಯ ಈ ಆಧುನಿಕ ಗ್ರಾಮಾಯಣವು ಜಾತಿ, ಉಪಜಾತಿ, ಅಸ್ಪೃಶ್ಯತೆಯ ಗೋಜಲುಗಳಲ್ಲಿ ಕಳೆದುಹೋಗುತ್ತಿರುವ ಮನುಷ್ಯತ್ವದ ಬಗ್ಗೆ ವಿವಾದವನ್ನು ಆದರೆ ಅದಕ್ಕಿಂತ ಹೆಚ್ಚಾಗಿ ಗಟ್ಟಿ ಭಾವುಕತೆಯ ಆದರ್ಶಪರ ನೆಲೆಯಲ್ಲಿ ಒಳ್ಳೆಯತನದ ಸಾಧ್ಯತೆಯನ್ನು ಶೋಧಿಸುತ್ತದೆ. ವಿಶೇಷವೆಂದರೆ ಎರಡೂ ಬತ್ತಿಗಳನ್ನು ಏಕಕಾಲಕ್ಕೆ ಹಚ್ಚದಿದ್ದರೆ ಬೆಳಕು ನೀಡದ ದೀಪದ ಅದ್ಭುತ ರೂಪಕದ ಮೂಲಕ ಗಾಂಧಿ, ಅಂಬೇಡ್ಕರ್ ಇಬ್ಬರಿಗಾಗಿ ಹಂಬಲಿಸುವ, ಈ ಇಬ್ಬರೂ ಮಹಾತ್ಮರ ಹಠಮಾರಿ' ಹಿಂಬಾಲಕರು ಒಂದುಗೂಡಬೇಕೆಂದು ಒತ್ತಾಯಿಸುತ್ತಾ, ಪ್ರಧಾನವಾಗಿ ಭಾವನಾತ್ಮಕ ನೆಲೆಯಲ್ಲಿ ಬರೆಯಲಾದ ಈ ಕಾದಂಬರಿ ತನ್ನ ಗಟ್ಟಿಯಾದ ವಾಸ್ತವತೆ ಹಾಗೂ ಅನುಭಾವಿ ಸ್ಪರ್ಶವುಳ್ಳ ಕಾವ್ಯಗುಣಗಳನ್ನು ಹದವಾಗಿ ಬೆರೆತುಕೊಂಡು ತನ್ನ ಕಥನಶಕ್ತಿಯ ರಭಸದೊಂದಿಗೆ ಓದುಗರನ್ನು ಕರೆದೊಯ್ಯುತ್ತದೆ. ಕಾದಂಬರಿಯ ಆಳದಲ್ಲಿ ಹರಿಯುವ ಧಾರೆಯೆಂದರೆ ಮನುಷ್ಯರ ಒಳ್ಳೆಯತನದಲ್ಲಿ ಕಾದಂಬರಿಕಾರರಿಗೆ ಇರುವ ಗಾಢವಾದ ಶ್ರದ್ಧೆ ಮತ್ತು ಬದಲಾವಣೆಯ ಬಗ್ಗೆ ಇರುವ ನೈತಿಕ ಆಶಾವಾದ, ನಮ್ಮ ಕಾಲದ ಜನಮಾನಸವು ಕಳೆದುಕೊಂಡು ಪರಿತಪಿಸುತ್ತಿರುವ ಇವುಗಳನ್ನು ಭಾವುಕ ನೆಲೆಯಲ್ಲಿ ನಮ್ಮೆದುರಿಗಿಡುವ ಈ ಕಾದಂಬರಿ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)