Santosh Kumar Mehandele
ವೈಜಯಂತಿಪುರ
ವೈಜಯಂತಿಪುರ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 327
Type - Paperback
Couldn't load pickup availability
ಇತಿಹಾಸವು ದಾರಿದೀಪವಿದ್ದಂತೆ. ತನ್ನನ್ನು ತಾನು ತೋರಿಸಿಕೊಳ್ಳುತ್ತಾ ಸಾಧನಾ ಪಥದಲ್ಲಿ ಮುನ್ನಡೆಯುವವರಿಗೆ ಇತಿಹಾಸವು ಮಾರ್ಗದರ್ಶಕ ದೀಪವಾಗುತ್ತದೆ. ಇತಿಹಾಸದ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಳ್ಳುವವನು ತಾನೂ ಇತಿಹಾಸ ಸೃಷ್ಟಿಸಬಲ್ಲವನಾಗುತ್ತಾನೆ. ನಮ್ಮ ನಾಡಿನ ಹೆಮ್ಮೆಯ ಕದಂಬ ವಂಶದ ಮಹೋನ್ನತ ಇತಿಹಾಸದ ಪ್ರತಿಯೊಂದು ಪುಟದಲ್ಲಿಯೂ ಸ್ವರ್ಣಾಕ್ಷರದಿಂದ ಕಂಗೊಳಿಸಬೇಕಾದ ಹೆಸರು "ಮಯೂರವರ್ಮ"
-ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ
ಮಿತ್ರ ಸಂತೋಷಕುಮಾರ ಮೆಹೆಂದಳೆಯವರ "ವೈಜಯಂತಿಪುರ" ಕಾದಂಬರಿಯು ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ. ಕಾದಂಬರಿ ರಚನೆಗೆ ಮುನ್ನ ಮೆಹೆಂದಳೆಯವರು ಸಾಕಷ್ಟು ಸಂಶೋಧನಾತ್ಮಕ ಓದಿಗೆ ತೆರೆದುಕೊಂಡಿರುವುದು ಮಹತ್ವದ ಸಂಗತಿಯಾಗಿದೆ. ಶಾಸನಗಳನ್ನೂ ಒಳಗೊಂಡಂತೆ, ಸಂಶೋಧನಾ ಕೃತಿಗಳನ್ನು ಅಧ್ಯಯನ ಮಾಡಿರುವುದಕ್ಕೆ ಸಾಕ್ಷವೆಂಬಂತೆ ಅಡಿ ಟಿಪ್ಪಣಿಯಲ್ಲಿ ಕೃತಿ ಸೂಚಿಯನ್ನು ಕೊಡಲಾಗಿದೆ. ಅಂದರೆ ಮೂಲ ಎಳೆಯಿಂದಲೇ ಕಾದಂಬರಿ ಬೆಳೆ ಬಂದಿದೆ ಎಂಬುವುದನ್ನೂ ಖಚಿತಪಡಿಸಲಾಗಿದೆ. ಮೆಹೆಂದಳೆಯವರ ನಿರೂಪಣಾ ಶೈಲಿಯಲ್ಲಿ ಅಯಸ್ಕಾಂತದ ಗುಣವೊಂದು ಹಾಸುಹೊಕ್ಕಾಗಿದೆ. ಓದುಗರನ್ನು ಒಳಗೆಳೆದುಕೊಳ್ಳುವ ವಿವರಣಾತ್ಮಕ ಸರಳ ಸ್ಪರ್ಶದಿಂದ, ಕಾದಂಬರಿ ಬೆಳೆಯುತ್ತ ಹೋಗುತ್ತದೆ. ಮೂಲ ಆಕರದೊಂದಿಗೆ ಸಾಹಿತ್ಯ ಸಂಕರವೊಂದು ಇಲ್ಲಿ ಸಾಧ್ಯವಾಗಿದೆ.
-ಬರಗೂರು ರಾಮಚಂದ್ರಪ್ಪ
ಖ್ಯಾತ ಸಾಹಿತಿಗಳು
Share


Subscribe to our emails
Subscribe to our mailing list for insider news, product launches, and more.