Skip to product information
1 of 1

Veena Bannanje

ವಚನ ತ್ರಿಮೂರ್ತಿಗಳು

ವಚನ ತ್ರಿಮೂರ್ತಿಗಳು

Publisher - ರವೀಂದ್ರ ಪುಸ್ತಕಾಲಯ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ವಚನಸಾಹಿತ್ಯಕ್ಕೆ ಸಂಬಂಧಿಸಿದಂತೆ ಶ್ರೀಮತಿ ವೀಣಾ ಅವರ 'ವಚನ ತ್ರಿಮೂರ್ತಿಗಳು' ಕೃತಿ ಬಸವ-ಅಕ್ಕ-ಅಲ್ಲಮರ ಕುರಿತ ಒಂದು ಪರಿಚಯಾತ್ಮಕ ಕೃತಿಯಾಗಿದೆ. ಶ್ರೀಮತಿ ವೀಣಾ ಅವರು ಇಲ್ಲಿ ವಚನಗಳಲ್ಲಿ ವ್ಯಕ್ತವಾಗುವ ವಿಚಾರಗಳ ಕುರಿತು ಹೊಸ ಹೊಳಹುಗಳನ್ನು ಇದುವರೆಗೆ ಚರ್ಚಿತವಾಗದ ಹೊಸ ಅಂಶಗಳನ್ನು ನಮ್ಮ ಮುಂದೆ ಮಂಡಿಸುತ್ತಾರೆ ಎನ್ನುವುದಕ್ಕೆ ಬದುಕಿನ ಸಪ್ತ ಸೂತ್ರಗಳೆಂದೇ ಪರಿಗಣಿಸಿರುವ ವಚನ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ.. ಇದೇ ನಮ್ಮ ಕೂಡಲ ಸಂಗಮ ದೇವನೊಲಿಸುವ ಪರಿ", ಬಹಳ ಸರಳವಾದ ವಚನ ಇದು. ಈ ವಚನದ ಸಾಲುಗಳನ್ನು ಚರ್ಚಿಸುತ್ತಾ ಈ ವಚನ ಕುರಿತು ನಮ್ಮಲ್ಲಿ ಮತ್ತೊಂದು ಬಗೆಯ ಆಳವಾದ, ಭಿನ್ನವಾದ ಮತ್ತು ವಿನೂತನವಾದ ಹೊಸತನದಿಂದ ಕೂಡಿದ ಚಿಂತನೆಯತ್ತ ನಮ್ಮನ್ನು ಕರೆದೊಯ್ಯುವಲ್ಲಿ ಶ್ರೀಮತಿ ವೀಣಾ ಅವರು ಹಂಬಲಿಸಿ ಯಶಸ್ವಿಯಾಗಿದ್ದಾರೆ.

ಹಾಗೆಯೇ ಅಲ್ಲಮಪ್ರಭು, ಅಕ್ಕನ ವಚನಗಳ ವಿಸ್ತಾರವಾದ ಓದಿನತ್ತ ನಮ್ಮನ್ನು ಸೆಳೆದೊಯ್ಯುತ್ತಾರೆ. ಪ್ರತಿ ಓದಿಗೂ ಹೊಸ ಹೊಳಹುಗಳನ್ನು ಅವರು ಮುಂದಿಡಬಲ್ಲರೆನ್ನುವುದಕ್ಕೆ ಹೇರಳವಾದ ನಿದರ್ಶನಗಳಿವೆ.

ವಚನಗಳ ಗಾಢವಾದ ಅಧ್ಯಯನಕ್ಕಷ್ಟೇ ಅಲ್ಲದೆ ವಚನಗಳ ಮತ್ತೊಂದು ಒಳನೋಟದತ್ತ ನಮ್ಮನ್ನು ಎಳೆದೊಯ್ಯುವುದರಿಂದ ಈ ಕೃತಿ ಮಹತ್ವದ್ದಾಗಿದೆ.

-ಪ್ರಕಾಶಕರು
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)