Bengaluru Niranjana Babu
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ವೇದ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದ ನಿರಂಜನ್ ಬಾಬು ಬೆಂಗಳೂರು, ಅವರು ವಿವಿಧ ದೇಶ ಸಂಸ್ಕೃತಿಗಳಿಗೆ ಸಂಬಂಧಿಸಿದ ದೇವಾಲಯಗಳು, ಸಂಕೀರ್ಣಗಳಿಗೆ ವಾಸ್ತು ಸಲಹೆ ನೀಡಿದ ಖ್ಯಾತಿ ಇವರಿಗಿದೆ. ಈ ವಿಷಯವಾಗಿ ಉಪನ್ಯಾಸಗಳನ್ನು ನೀಡುವುದು, ಕಮ್ಮಟಗಳನ್ನು ನಡೆಸುವುದು ಇವರ ಮಹತ್ವದ ಕಾರ್ಯಗಳಾಗಿವೆ. ಭಾರತವಲ್ಲದೆ ಉತ್ತರ ಅಮೇರಿಕಾ, ಯೂರೋಪ್ ಹೀಗೆ ವಿಶ್ವದ ಅನೇಕ ಭಾಗಗಳಲ್ಲಿ ವಾಸ್ತು ಸಲಹೆ ನೀಡಿ ಪ್ರಖ್ಯಾತಿಯನ್ನು ಪಡೆದಿದ್ದಾರೆ.
'ದಿ ಅಸ್ಟ್ರಾಲಜಿಕಲ್ ಈ ಮ್ಯಾಗಜಿನ್'ನ ಪ್ರಧಾನ ಸಂಪಾದಕರಾಗಿರುವ ನಿರಂಜನ ಬಾಬು ಅವರು 'ರಾಮನ್ ಅಂಡ್ ರಾಜೇಶ್ವರಿ ರಿಸರ್ಚ್ ಫೌಂಡೇಶನ್ (ರಿ)'ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ರಚಿಸಿದ ಕೃತಿಗಳು ಆಂಗ್ಲಭಾಷೆಯಲ್ಲದೆ ಭಾರತದ ಪ್ರಾಂತೀಯ ಭಾಷೆಗಳಾದ ಕನ್ನಡ, ಮಲಯಾಳಂನಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ.
ವೇದ ಜ್ಯೋತಿಷ್ಯದ ಖ್ಯಾತ ವಿದ್ವಾಂಸರಾದ ಡಾ. ಬಿ.ವಿ. ರಾಮನ್ ಅವರ ಪುತ್ರ ನಿರಂಜನ್ ಬಾಬು ಅವರು ತಮ್ಮ ತಂದೆಯ ಬಳಿ ಮೂವತ್ತೈದು ವರ್ಷಗಳ ಕಾಲ ಅಭ್ಯಾಸ ಮಾಡಿರುತ್ತಾರೆ. ಮಗನ ವಿದ್ವತ್ತನ್ನು ನಿರಂಜನ ಬಾಬು ಅಸ್ತಿತ್ವದಲ್ಲಿರುವ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದ್ದಲ್ಲದೆ ಆ ವಿಷಯದಲ್ಲಿ ಪಾಂಡಿತ್ಯವನ್ನು ಪಡೆದವರಾಗಿದ್ದಾರೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರಿನ ದತ್ತ ಪೀಠಾಧಿಪತಿ ಜಗದ್ಗುರು ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ 'ದತ್ತ ಪೀಠಂ ಆಸ್ಥಾನ ವಿದ್ವಾನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರ ಶ್ರೀ ಮಂಜುನಾಥೇಶ್ವರ ಧರ್ಮೋತ್ತಮ ಟ್ರಸ್ಟಿನ ಸಲಹಾ ಮಂಡಳಿಯ ಸದಸ್ಯರಾಗಿದ್ದಲ್ಲದೆ, ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಇಸ್ಕಾನ್ ಯೋಜನೆಗಳಿಗೆ ಸಲಹೆಗಳನ್ನು ನೀಡಿದ ಖ್ಯಾತಿ ಇವರಿಗಿದೆ.
