C. S. Chellappa
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ – ಜಲ್ಲಿಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದು ಬಂದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು "ಏರು ತಳುವುದಲ್". ಏರು ಎಂಬ ಶಬ್ದಕ್ಕೆ ಎತ್ತು ಅಥವಾ ಗೂಳಿ ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಗಳ ಬಗ್ಗೆ ಚಿತ್ರಣಗಳಿವೆ. ಅದನ್ನು ಕಥಾವಸ್ತುವಾಗಿ ಬಳಸಿಕೊಂಡು ಬರೆದ ಕಥೆ ಇದು. ಚಿ.ಸು. ಚೆಲ್ಲಪ್ಪ ವಿವರಿಸುವ ವಿಧಾನ, ಪಾತ್ರಗಳನ್ನು ಬೆಳೆಸುವ ರೀತಿ, ಕಟ್ಟಿಕೊಡುವ ನೈಜ ಚಿತ್ರಣ - ಇವುಗಳಿಂದ ಅವರು ಎಂತಹ ಶ್ರೇಷ್ಠ ಸಾಹಿತಿಯೆಂಬುದು ಗೊತ್ತಾಗುತ್ತದೆ. ವಾಡಿವಾಸಲ್‌ನಲ್ಲಿ ಮನುಷ್ಯನ ರಕ್ತ ಬೀಳಬಹುದು, ಆದರೆ ಗೂಳಿಯ ರಕ್ತ ಬೀಳುವಂತಿಲ್ಲ. ಮನುಷ್ಯನಿಗೆ ಇದು ಆಟವೇ ಆಗಿರಬಹುದು, ಆದರೆ ಗೂಳಿಗೆ ಇದು ಆಟವಲ್ಲ. ಜಲ್ಲಿಕಟ್ಟು ಮೃಗವನ್ನು ಹಿಂಸಿಸುವ ಕ್ರೀಡೆಯೆಂದು ವಿಮರ್ಶಿಸುವ ಪ್ರಾಣಿದಯಾ ಗುಂಪಿನವರು, ಒಮ್ಮೆ “ವಾಡಿವಾಸಲ್” ಅನ್ನು ಓದಬೇಕು. ಈ ಕಥೆಯ ಮೂಲಕ ಹೊಸ ಜಗತ್ತನ್ನು ನಿಮಗೆ ಪರಿಚಯಿಸುತ್ತಾರೆ ಲೇಖಕರು.
