ಶಾಂತರಸ
Publisher: ನವಕರ್ನಾಟಕ ಪ್ರಕಾಶನ
Regular price
Rs. 80.00
Regular price
Sale price
Rs. 80.00
Unit price
per
Shipping calculated at checkout.
Couldn't load pickup availability
*ಉರಿದ ಬದುಕು' ಶ್ರೀ ಶಾಂತರಸರ ಕಥೆಗಳ ಸಂಕಲನ. ತಮ್ಮ ಕಥೆಗಳ ಬಗ್ಗೆ ಲೇಖಕರು ಹೀಗೆನ್ನುತ್ತಾರೆ :
'ನನ್ನ ಕಥೆಗಳು ಕಾಲ್ಪನಿಕವೆಂದು, ಎಲ್ಲ ಪಾತ್ರಗಳೂ ಕೇವಲ ಕಲ್ಪನೆಯಲ್ಲಿ ಮೈದಳೆದುವೆಂದು ನಾನು ಸುಳ್ಳು ಹೇಳಲಾರೆ. ಸತ್ಯಘಟನೆಗಳ ಚಿಕ್ಕ ಚಿಕ್ಕ ಎಳೆಗಳು ಅವು ಎಲ್ಲೆಲ್ಲಿಂದಲೋ ಸಂಗ್ರಹವಾಗಿರುತ್ತವೆ – ಕೂಡಿ ಒಂದು ಕಥೆ ಕಟ್ಟಿಕೊಳ್ಳುತ್ತದೆ.
ಯಾವ 'ಮಠ' ಕ್ಕೂ ನಾನು ಸೇರಿಲ್ಲ; ಯಾವ ಪಂಥದ ಗುರುತೂ ನನ್ನ ಹಣೆಯ ಮೇಲಿಲ್ಲ; ಯಾವ ಪ್ರಭಾವ ಪ್ರೇರಣೆಗಳಿಗೂ ನಾನು ಒಳಗಾಗಿಲ್ಲ. ನನ್ನ ದಾರಿಯಲ್ಲಿ ನಾನು ನಡೆದಿದ್ದೇನೆ. ತಂತ್ರದ ಬಗ್ಗೆ ನಾನೆ೦ದೂ ತಲೆಕೆಡಿಸಿಕೊಂಡಿಲ್ಲ. ನೇರವೋ ಬಳಸಿಯೋ ಅಂಕುಡೊಂಕಾಗಿಯೋ ಹೇಗೆ ಬಂತೋ ಹಾಗೆ ಕಥೆ ಮುಕ್ಕಾಗದಂತೆ, ಅದರ ಕೇಂದ್ರ ಕೆಡದಂತೆ ಪ್ರಾಮಾಣಿಕವಾಗಿ ಕಥೆ ಕಟ್ಟುತ್ತೇನೆ.
ನನ್ನ ಭಾಷೆ ನನ್ನ ಹಳ್ಳಿ ಪಟ್ಟಣಗಳ ಭಾಷೆ. ಅದನ್ನು ಬಳಸುವಾಗ ನನಗೆ ಅತ್ಯಂತ ಖುಷಿಯಾಗುತ್ತದೆ. ನನ್ನ ರಕ್ತ, ಮಚ್ಚೆ, ಮಾಂಸ, ಜೀವದಿಂದ ಕೂಡಿದ್ದು ಈ ಭಾಷೆ.''
ಹೀಗೆ ಇವು ಬದುಕಿನಿಂದ ಆಯ್ದುಕೊಂಡ, ಜನಪರವಾದ, ಮಾನವೀಯತೆಯ ತುಡಿತವಿರುವ ಕಥೆಗಳು: