Sadashiva Shenoy
Publisher -
- Free Shipping
- Cash on Delivery (COD) Available
Couldn't load pickup availability
ಸದಾಶಿವ ಶೆಣೈ ರಚಿತ ಉಪ್ಪಿ ಅನ್‍ಲಿಮಿಟೆಡ್ ಎಂಬ ಕೃತಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಈ ಪುಸ್ತಕವನ್ನು ನಟ ಉಪೇಂದ್ರ ಅವರ ಜೀವನ ಚರಿತ್ರೆ ಕುರಿತು ಬರೆಯಲಾಗಿದೆ ಎಂದು ತಿಳಿಸಿದರು.
ಅವರ ಬಾಲ್ಯದಲ್ಲಿ ಅನುಭವಿಸಿದ ಕಷ್ಟ, ಸುಖ, ತುಂಟಾಟ, ಅವರ ವಿದ್ಯಾಭ್ಯಾಸ, ಕಾಲೇಜು ದಿನಗಳಲ್ಲಿ ಅವರು ಯಾವ ರೀತಿ ವಿದ್ಯಾಭ್ಯಾಸ ನಡೆಸುತ್ತಿದ್ದರು, ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲು ಅವರು ಪಟ್ಟ ಶ್ರಮದ ಬಗ್ಗೆ ಹೇಳಲಾಗಿದೆ. ಉಪ್ಪಿ ಜೀವನ ಚರಿತ್ರೆ ಕುರಿತು ಪುಸ್ತಕ ಬರೆಯುವಾಗ ಅವರ ಬಗ್ಗೆ ಮಾಹಿತಿ ಕಲೆಹಾಕಲು ತುಂಬಾ ಕಷ್ಟಪಟ್ಟಿದ್ದೇನೆ. ಆ ವೇಳೆ ಅವರು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಮುಂಜಾನೆ 5 ಗಂಟೆಗೆ ಅವರ ಮನೆಗೆ ಹೋಗಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೆ. ಸುಮಾರು 16 ವರ್ಷಗಳ ಹಿಂದೆಯೇ ಪುಸ್ತಕವನ್ನು ಬರೆಯಲು ಮುಂದಾದೆ.
ಈ ಪುಸ್ತಕದಲ್ಲಿ ಅವರ ಬಾಲ್ಯ, ವಿದ್ಯಾಬ್ಯಾಸ, ಚಿತ್ರರಂಗಕ್ಕೆ ಬಂದಿದ್ದ ಮಾತ್ರ ವಿಷಯವೂ ಇದ್ದು, ಈಗ ರಾಜಕೀಯಕ್ಕೆ ಬಂದ ವಿಷಯ ಈ ಪುಸ್ತಕದಲ್ಲಿ ಇಲ್ಲ. ಇದು ಅವರ ವೈಯಕ್ತಿಕ ಜೀವನದ ಮಾಹಿತಿ ಮಾತ್ರ ಇದರಲ್ಲಿದೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಸೌರಭ ಪ್ರಕಾಶನದವರು ಪುಸ್ತಕ ಹೊರತಂದಿರುವ ಈ ಕೃತಿಗೆ ಉಪ್ಪಿ ಅನ್‍ಲಿಮಿಟೆಡ್ ಎಂಬ ಹೆಸರನ್ನು ಹಿರಿಯ ಪತ್ರಕರ್ತ ಜೋಗಿ ನೀಡಿದ್ದರು. ಅವರು ನಮಗೆ ಆತ್ಮೀಯ ಗೆಳೆಯರಾಗಿದ್ದಾರೆ ಎಂದು ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಕೃತಿ ಬಿಡುಗಡೆ ಮಾಡಿ ಮಾತನಾಡಿ, ಕೃತಿ ಬಿಡುಗಡೆ ಮಾಡುವುದು ಸಣ್ಣ ವಿಚಾರವಲ್ಲ. ಒಬ್ಬ ವ್ಯಕ್ತಿ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿದ್ದು, ಆತ್ಮೀಯರಾಗಿದ್ದಾರೆ ಮಾತ್ರ ಕೃತಿ ಬರೆಯಲು ಸಾಧ್ಯ ಎಂದರು.
ಸೌರವ್ ಪ್ರಕಾಶನ
