Shreerangarajan, Gururaja Shastri
ತುಂತುರು
ತುಂತುರು
Publisher - ಸ್ನೇಹ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 212
Type - Paperback
2024 ರ ಶ್ರಾವಣದ ತುರುಸಿನ 99 "ತುಂತುರು" ಕಥೆಗಳು
ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ವಿವಿಧ ಶಾಖೆಗಳ ಕನ್ನಡ ಸಂಘಗಳು ಒಗ್ಗೂಡಿ "ಸಮನ್ವಯ ಸಮಿತಿ" (ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳು) ಸ್ಥಾಪಿತವಾಯಿತು. ತನ್ಮೂಲಕ 'ಬ್ಯಾಂಕಿಂಗ್‌ನಲ್ಲಿ ಕನ್ನಡ; ಕನ್ನಡದಲ್ಲಿ ಬ್ಯಾಕಿಂಗ್" ಎಂಬ ಧೇಯ್ಯೋದ್ದೇಶದಿಂದ, ಡಾ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) ಅವರ ನೇತೃತ್ವದಲ್ಲಿ "ಬ್ಯಾಂಕಿಂಗ್ ಪ್ರಪಂಚ" ವೆಂಬ ತ್ರೈಮಾಸಿಕ ಪತ್ರಿಕೆ, ಬ್ಯಾಂಕಿಂಗ್ ಕಮ್ಮಟ ಹಾಗೂ ವಿಚಾರ ಸಂಕಿರಣಗಳನ್ನು ಯಶಸ್ವಿಯಾಗಿ ನಡೆಸಿತು. ಅದರ ಮುಂದುವರೆದ ಚಟುವಟಿಕೆಯೇ "ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ'ದ ಸಾಹಿತ್ಯ ವಾಟ್ಸಪ್ ವೇದಿಕೆ, ನೋಡಿಯೋ ದಾಸೋಹ ವೇದಿಕೆ ಮತ್ತು ಹತ್ತಾರು ಸಾಹಿತ್ಯ ಅಭಿಯಾನಗಳು ಮತ್ತು ಪ್ರಕಟಣೆಗಳು. "ಸಮನ್ವಯ ಸಮಿತಿ ಕನ್ನಡವೇ ಸತ್ಯ" ವಾಟ್ಸಪ್ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇನ್ನೂರಕ್ಕೂ ಹೆಚ್ಚು ಲೇಖಕರಿದ್ದಾರೆ. ಪಳಗಿರುವ ಕಥೆ- 'ಗಾರರಿಂದ ಸೃಜನಾತ್ಮಕ ಕನ್ನಡ ಸಾಹಿತ್ಯ ಸೃಷ್ಟಿ ಮತ್ತು ಹೊಸ ಬರಹಗಾರರಿಗೆ ಉತ್ತೇಜನ ಹಾಗೂ ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶ.
2024ರಲ್ಲಿ ನಡೆದ ಶ್ರಾವಣದ (ಆಗಸ್ಟ್ 05ರಿಂದ ಸೆಪ್ಟೆಂಬರ್ 02ರ ತನಕ) ಪುಟ್ಟ ಕಥೆಗಳ ಅಭಿಯಾನದಲ್ಲಿ 72 ಕಥೆಗಾರರಿಂದ, 150 ರಿಂದ 250 ಪದಗಳ 1070 ಕಥೆಗಳು ವೇದಿಕೆಯಲ್ಲಿ ಪ್ರಸ್ತುತವಾಗಿರುವುದು ಕನ್ನಡದಲ್ಲಿ ಪ್ರಥಮ ಮತ್ತು ದಾಖಲೆಯೇ ಸರಿ.
ಈ ಅಭಿಯಾನದ ಸಾರ್ಥಕ ರೂಪ, ನಿಮ್ಮ ಕೈಲಿರುವ 99 ಕಥೆಗಳ ಸಂಕಲನ "ತುಂತುರು", ವಿವಿಧ ಕ್ಷೇತ್ರಾನುಭವದ ವೈವಿಧ್ಯಮಯ ಕಥೆಗಳು ಇಲ್ಲಿವೆ. ಪತ್ತೇದಾರಿ, ಮಕ್ಕಳ ಕಥೆ, ಬ್ಯಾಂಕಿಂಗ್, ಸಾಮಾಜಿಕ, ವೈದ್ಯಕೀಯ, ವಿಜ್ಞಾನ ಹೀಗೆ ಹಲವಾರು ವಿಷಯಗಳು ಚಾಚು ಇಲ್ಲಿವೆ. ನಿಮ್ಮ ಪ್ರತಿಕ್ರಿಯೆ ಬರಲಿ.
-ಬೆಂಶ್ರೀ ರವೀಂದ್ರ
Share
Subscribe to our emails
Subscribe to our mailing list for insider news, product launches, and more.