Santhosh Anantapura
ತೃಷೆ
ತೃಷೆ
Publisher - ಅಂಕಿತ ಪುಸ್ತಕ
- Free Shipping Above ₹350
- Cash on Delivery (COD) Available
Pages - 184
Type - Paperback
Couldn't load pickup availability
ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಮಾಸ್ ಕಮ್ಯುನಿಕೇಷನ್ ಮತ್ತು ಜರ್ನಲಿಸಂ ಸ್ನಾತಕೋತ್ತರ ಪದವೀಧರ ಸಂತೋಷ್ ಅನಂತಪುರ, ದೈನಂದಿನ ಯಾಂತ್ರಿಕ ಲೋಕದಿಂದ ಹೊರನುಸುಳಿ, ಓದುಗರ ಭಾವಲೋಕದ ಕದ ತಟ್ಟಬಲ್ಲ, ಬುದ್ಧಿಯ ಮೇಲಿನ ಹೃದಯದ ಸವಾರಿ ಬಲು ದುಬಾರಿ ಎಂದು ನಂಬಿರುವ ಕಥೆಗಾರ. ಇವರ 'ಜಿಡ್ಡು ಕೃಷ್ಣಮೂರ್ತಿ', 'ಕಾಗೆ ಮತ್ತು ಕಡ್ಲೆಬೇಳೆ ಪಾಯಸ', 'ಸವಾರಿ ಗಿರಿ..ಗಿರಿ..', ಕೃತಿಗಳು ವಿವಿಡ್ ಲಿಪಿ, ಮೈಲಾಂಗ್, ಋತುಮಾನಗಳಲ್ಲಿ ಇ-ಬುಕ್ ಆಗಿಯೂ ಮತ್ತು 'ಸ್ಟೋರಿ ಟೆಲ್' ಆಪ್ ನಲ್ಲಿ ಆಡಿಯೋ ಬುಕ್ ಆಗಿಯೂ ಓದಲು, ಕೇಳಲು ಸಿಗುತ್ತವೆ. ಅಷ್ಟೇ ಅಲ್ಲ 'ಕಾಗೆ ಮತ್ತು ಕಡ್ಲೆಬೇಳೆ ಪಾಯಸ' ಕಥಾ ಸಂಕಲನವು ಮಲಯಾಳಂಗೂ ತರ್ಜುಮೆಗೊಂಡು ಓದುಗರ ಕೈ ಸೇರಿದೆ.
ಮಾತ್ರವಲ್ಲ ಇತ್ತೀಚೆಗೆ 'ಆಳ ನೀಳ' ಪ್ರಬಂಧ ಸಂಕಲನವೂ ಲೋಕಾರ್ಪಣೆಗೊಂಡಿದೆ.
ಈ ಸಂಕಲನದಲ್ಲಿ ಸೇರಿಕೊಂಡಿರುವ ಹತ್ತೂ ಕಥೆಗಳಿಗೆ ಒಬ್ಬೊಬ್ಬ ಓದುಗರ ಅನಿಸಿಕೆಗಳನ್ನು ದಾಖಲಿಸಿಕೊಂಡಿರುವುದು ವಿಶೇಷ.
'ಕೂಪ' ಕಥೆಯ ಬಗ್ಗೆ ಬರೆಯುತ್ತಾ, 'ಸಪ್ತಭಾಷೆಗಳ ಸಂಗಮಸ್ಥಳ ಕಾಸರಗೋಡಿನ ಒಂದು ಪ್ರದೇಶದ ಜನರು ಸಾಮಾನ್ಯವಾಗಿ ಬಳಸುವ ಕನ್ನಡ, ತುಳು, ಕೊಂಕಣಿ, ಮಲೆಯಾಳಂ, ಬ್ಯಾರಿ ಹಾಗೂ ಹಿಂದಿ, ಇಂಗ್ಲಿಷ್ ಭಾಷೆಗಳು ಪರಸ್ಪರ ಬೆಸೆದುಕೊಂಡು ಒಂದು ಪ್ರತ್ಯೇಕ ಭಾಷೆಯಾಗಿ ಅಸ್ಮಿತೆ ಪಡೆಯುತ್ತಾ ದಟ್ಟ ವಿವರಗಳಲ್ಲಿ ಚಿತ್ರಣಗೊಳ್ಳುವ ಈ ಕಥೆಗಳ ಪರಿ ಅನನ್ಯ. 'ಪ್ರಾಯಶಃ ಕಾಸರಗೋಡು ಪ್ರದೇಶದ ಭಾಷೆ ಹಾಗೂ ಸಾಂಸ್ಕೃತಿಕ ವಿವರಗಳನ್ನು ಇಷ್ಟು ಸಶಕ್ತವಾಗಿ ಅಭಿವ್ಯಕ್ತಿಸಿದ ಕಥೆಗಳು ಇದುವರೆಗೆ ಕನ್ನಡದಲ್ಲಿ ಬಂದಿಲ್ಲವೆಂದೇ ಹೇಳಬೇಕು' ಎನ್ನುವ ಡಾ. ಪಾರ್ವತಿ ಜಿ. ಐತಾಳರ ಮಾತುಗಳು ನನ್ನವೂ ಕೂಡ. ಬರಹಗಳ ಬಹುಪಾಲನ್ನು 'ಆಪ್' ಗಳಲ್ಲೇ ಓದುವ ಈ ದಿನಗಳಲ್ಲೂ, 'ಆಪ್ ಕೇ ಸಾಥ್ ನಹೀ, ಆಪ್ಕೇ ಸಾಥ್' ಬರೆಯಬಲ್ಲ ಈ ಕಥೆಗಳನ್ನು ಓದುಗರು ಪ್ರೀತಿಯಿಂದ ತಮ್ಮದಾಗಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು.
-ಬೊಳುವಾರು
Share


Subscribe to our emails
Subscribe to our mailing list for insider news, product launches, and more.