Dr. Hemalata. B
ತಿರುವುಗಳು
ತಿರುವುಗಳು
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 168
Type - Paperback
ತಿರುವುಗಳು
ಏಕಾಂತಿಯ ನೋಟ ಅವನ ಹೊಕ್ಕಳಿನಲ್ಲಿ ಸತ್ತಂತೆ ಮಲಗಿದ್ದ ಹಾವನ್ನು ಭುಸುಗುಡುವಂತೆ ಮಾಡಿತ್ತು. ಆಗೀಗ ಅಂಗಡಿಗೆ ಬಂದವಳ ಕೈ ತಾಗಿದರೆ, ಅವಳ ಮೈಯ ವಾಸನೆ ಬಂದರೆ ಅವನ ಕಾಲುಗಳು ನಡುಗಿದ್ದವು. ಅವಳು ರಾತ್ರಿ ತರಕಾರಿಯ ಬುಟ್ಟಿ ಇಟ್ಟು ಹೋದರೆ ನೆಮ್ಮದಿಯೆನಿಸುತ್ತಿತ್ತು. ಎಲ್ಲ ಜಾಡಿಸಿ ಮಂಕರಿಗಳನ್ನು ಹೊತ್ತು ಹೋದಳೆಂದರೆ ತನ್ನ ಜೊತೆ ಅವನ ಸುತ್ತಲ ಇಹವನ್ನೆಲ್ಲ ಚೀಲ ಮಾಡಿ ಹೊತ್ತೊಯ್ದಳೇನೋ ಎನ್ನುವಂತೆ ಅವನ ಒಂಟಿತನದಲ್ಲೂ ಏಕಾಂತ ಸೃಷ್ಟಿಯಾಗಿಬಿಡುತ್ತಿತ್ತು. ಕೆಂಚಣ್ಣನಿಗೆ ಭಯವಾಗತೊಡಗಿತು.
ಪಾರಿವಾಳಗಳು
ಅವರ ಕನಸುಗಳು ಗೋಡೆಗೆ ಗೋಡೆ ತಾಗಿದಂತಿದ್ದ ಆ ಗಡಿರೇಖೆಯ ನಾಡಿನ ಒಳಕ್ಕೂ ಹೊರಕ್ಕೂ ಹಾರಲಾಗದೆ ಬಂಧಿತವಾಗಿದ್ದವು. ಪಂಜರದಲ್ಲಿದ್ದ ಪಾರಿವಾಳದಂತೆಯೇ ಬಾಯ್ಮುಚ್ಚಿ ಗುಕ್ಕಿಡುತಿದ್ದ ಅವರ ಬದುಕು ಸದಾ ಬೆದರಿದಂತಹ ಸ್ಥಿತಿಯಲ್ಲೇ ಇರುತ್ತಿತ್ತು. ಯಾವಾಗ ಬೇಕಾದರೂ ಪರಿಸ್ಥಿತಿ ಬಿಗಡಾಯಿಸಿ ಗುಂಡಿನ ಚಕಮಕಿಯಾಗಬಹುದಿತ್ತು. ಮೂರು ಕಾಳಿಗಾಗಿ ಮತ್ತೊಂದು ಬೆಳಗನ್ನು ಎದುರು ನೋಡುತ್ತ ಏಳುತ್ತಿದ್ದವರ ಜೀವ ಅವರ ಕುತ್ತಿಗೆಯಲ್ಲೇ ಇರುತ್ತಿತ್ತು. ನಿನ್ನೆ ಹುಟ್ಟಿದ ಮಕ್ಕಳು ನಾಳೆ ಬೆಳಿಗ್ಗೆ ಫಕ್ಕನೆ ದೊಡ್ಡವರಾಗಿಬಿಡಬೇಕಿತ್ತು.
ಕೊಳಾಯಿಗಾರ
ನನ್ನ ಮುಖವನ್ನು ಪೂರ್ತಿಯಾಗಿ ಕನ್ನಡಿಯಲ್ಲಿ ಕಾಣದೆ ತಿಂಗಳುಗಳಾಗಿದ್ದವು. ಹಾಗಂತ ಮನೆಯಲ್ಲಿ ಕನ್ನಡಿಯಿರಲಿಲ್ಲ ಅಂತಲ್ಲ. ಅದರೆದುರು ಕೂತಿಲ್ಲ ಅಂತಲೂ ಅಲ್ಲ. ಬದುಕು ಕೆಲವೊಮ್ಮೆ ಹಾಗೆಯೇ. ನನ್ನ ದೆನ್ನುವುದು ಕೂಡ ನಿಯಂತ್ರಣಕ್ಕೆ ಸಿಗದೆ ಕೈ ಜಾರಿ ಹೋಗುವಾಗ ಅಸಹಾಯಕರಾಗಿಬಿಡಬೇಕಾಗುತ್ತದೆ. ನಮ್ಮದೆನ್ನುವ ಅತ್ಯಂತ ಪರಿಚಿತವಾದದ್ದು ಕಾಣೆಯಾದಾಗಲೇ ಅದನ್ನು ಹೆಚ್ಚು ಹೆಚ್ಚು ಬಯಸುತ್ತೇವೆ. ಇಷ್ಟಪಡುತ್ತಿದ್ದುದು ಮುಂದೆ ಸಿಗಲಾರದೆಂದು ತಿಳಿದಾಗ ವ್ಯರ್ಥ ಪ್ರಯತ್ನಗಳನ್ನಾದರೂ ಮಾಡುತ್ತ ಉಳಿದದ್ದನ್ನೇ ವಿಜೃಂಭಿಸಿ ತೋರಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಉಳಿದಿರುವುದೇನು ಎಂದು ಸ್ಪಷ್ಟವಾಗಿ ಕಾಣಬೇಕು. ಆದರೆ ಅದನ್ನು ತೋರಿಸಬೇಕಾದ ದರ್ಪಣದಿಂದಲೇ ನೂರ್ಪಟ್ಟು ಪ್ರತಿಫಲನವಾದರೆ, ಆ ಫಲಕದಲ್ಲಿ ನಮ್ಮ ಮುಖವನ್ನು ಕಾಣುವುದಾದರೂ ಹೇಗೆ?
-ಡಾ. ಪ್ರೇಮಲತ ಬಿ.
Share
Subscribe to our emails
Subscribe to our mailing list for insider news, product launches, and more.