Santoshakumara Mehendale
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕಶ್ಮೀರದ ಬಗ್ಗೆ ಇದೊಂದು ವಿಶಿಷ್ಟ ಕೃತಿ.
ದಿ ಅನ್ ಟೋಲ್ಡ್ ಸ್ಟೋರಿ ಆಫ್ ಕಶ್ಮೀರ್ ಕೃತಿ ಈ ತನಕ ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಬಯಲು ಮಾಡಿದೆ. ಕಶ್ಮೀರ ಭಾರತದ ಪಾಲಿಗೆ ಸ್ವರ್ಗ ಸದೃಶ ನಾಡಾಗಬೇಕಿತ್ತು. ದುರದೃಷ್ಟವಶಾತ್ ಅದು ಶಾಪಗ್ರಸ್ಥ ಭೂಮಿಯಾಗಿ ಪರಿಣಮಿಸಿದೆ. ಆಯಾ ಕಾಲದಲ್ಲಿ ಕಶ್ಮೀರ ವಿಷಯದಲ್ಲಿ ತೆಗೆದುಕೊಂಡ ಅವಿವೇಕದ ನಿರ್ಧಾರಗಳಿಂದ, ಇಂದಿಗೂ ನಾವು ಬೆಲೆ ತೆರುತ್ತಲೇ ಇದ್ದೇವೆ. ಭಾರತದಲ್ಲೇ ಹಿಂದೂಗಳು ಪರಕೀಯರಂತೆ, ಎರಡನೇ ದರ್ಜೆ ಪ್ರಜೆಗಳಂತೆ, ಅಸಹನೀಯವಾದ ಮತ್ತು ದುಸ್ತರ ಬದುಕನ್ನು ಬಾಳುತ್ತಿರುವುದು ದುರಂತ.
ದಿಲ್ಲಿ ಮತ್ತು ಕಶ್ಮೀರದ ನಾಯಕರ ಸಂಕುಚಿತ ಮತ್ತು ಮತೀಯ ಭಾವನೆಗಳಿಂದ, ಕಶ್ಮೀರ ನಮ್ಮ ಕೈತಪ್ಪಿ ಹೋಗುವಂಥ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಕಣಿವೆಯಲ್ಲಿ ನಿರಂತರ ಅಶಾಂತಿ ನೆಲೆಸಲು ಪ್ರತ್ಯೇಕತಾವಾದಿಗಳು ಆಡಿದ ಆಟ ಒಂದೆರಡಲ್ಲ.
ಈ ಎಲ್ಲಾ ವಿಷಯಗಳನ್ನು ಮೆಹೆಂದಳೆ ಅವರು ಈ ಕೃತಿಯಲ್ಲಿ ಐತಿಹಾಸಿಕ ಹಿನ್ನೆಲೆಯಿಂದ, ವಿಶ್ಲೇಷಣಾತ್ಮಕ ನೋಟದಿಂದ, ಚಿಕಿತ್ಸಕ ಬುದ್ಧಿಯಿಂದ ಪರಿಣಾಮಕಾರಿಯಾಗಿ ನಮ್ಮ ಮುಂದೆ ಇಟ್ಟಿದ್ದಾರೆ. ಯಾರಿಗೂ ಗೊತ್ತಾಗದೇ, ಅಲ್ಲಲ್ಲಿಯೇ ಹುದುಗಿಹೋದ, ಕಾಲಗರ್ಭ ಸೇರಬಹುದಾದ ಅನೇಕ ಭಯಾನಕ, ಐತಿಹಾಸಿಕ 'ಕಳೇಬರ'ಗಳನ್ನು ಅವರು ಬಹಿರಂಗಗೊಳಿಸಿದ್ದಾರೆ.
ಕಶ್ಮೀರದ ಬಗ್ಗೆ ಇದೊಂದು ವಿಶಿಷ್ಟ ಕೃತಿ. ಮೆಹೆಂದಳೆ ಅವರ ಪ್ರಯತ್ನ ಮತ್ತು ಕಾಳಜಿಯನ್ನು ನಾನು ಪ್ರಶಂಸಿಸುತ್ತೇನೆ.
ವಿಶ್ವೇಶ್ವರ ಭಟ್.
ಪ್ರಧಾನ ಸಂಪಾದಕ, ವಿಶ್ವವಾಣಿ
