Mikhail Naimy, To Kannada : T. N. Vasudeva Murthy
ದಿ ಬುಕ್ ಆಫ್ ಮಿರ್ದಾದ್
ದಿ ಬುಕ್ ಆಫ್ ಮಿರ್ದಾದ್
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 280
Type - Paperback
Couldn't load pickup availability
ಬೈಬಲ್ಲಿನಲ್ಲಿ ಉಲ್ಲೇಖಗೊಂಡಿರುವ ಜಲಪ್ರಳಯದ ನಂತರ ನೋವಾಹ್ ನ ಹಡಗು ವಿಶ್ರಾಂತಿ ಪಡೆದ ಸ್ಥಳದಲ್ಲಿ ನೋವಾಹ್ ನ ಮಗ ಸ್ಯಾಮ್ ಒಂದು ಮಠವನ್ನು ನಿರ್ಮಿಸಿ ಅಲ್ಲಿ ಒಂದು ಅವಿಚ್ಛಿನ್ನ ಗುರು ಪರಂಪರೆಯನ್ನು ಪ್ರಾರಂಭಿಸಿದ. ಹಲವು ತಲೆಮಾರುಗಳ ನಂತರ ಮಿರ್ದಾದ್ ಆ ಪರಂಪರೆಯ ಗುರುವಾಗಿ ತನ್ನ ಶಿಷ್ಯರೊಂದಿಗೆ ಸರಣಿ ಸಂವಾದಗಳಲ್ಲಿ ತೊಡಗುತ್ತಾನೆ. ಆ ಸಂವಾದವೇ ಈ ಕೃತಿಯ ಜೀವಾಳವಾಗಿದೆ. ಪ್ರೀತಿ, ವಿಧೇಯತೆ, ಸಾಲ, ಪಶ್ಚಾತ್ತಾಪ, ವೃದ್ಧಾಪ್ಯ ಮತ್ತು ಸಂಸಾರ ಮುಂತಾದ ವಿಷಯಗಳನ್ನು ಚರ್ಚಿಸುವ ಈ ಕೃತಿಯು ನೋವಾಹ್ ಕಾಲದ ಪ್ರಳಯಕ್ಕಿಂತಲೂ ಭೀಕರವಾದ ಮತ್ತೊಂದು ಮಹಾ ಜಲಪ್ರಳಯಕ್ಕೆ ಸಿದ್ಧರಾಗುವಂತೆ ಮಾನವಕುಲಕ್ಕೆ ಕರೆ ನೀಡುತ್ತದೆ.
ಬದುಕಿನ ಯಾವ ಗಹನವಾದ ತತ್ವವನ್ನು ಆದಿಶಂಕರರು ಅದ್ವೈತವೆಂದು ಕರೆದರೋ ಆ ತತ್ವವನ್ನು ವಿದ್ವತ್ತಿನ ಹಮ್ಮಿಲ್ಲದೆ, ಶಾಸ್ತ್ರಗಳ ಹಂಗಿಲ್ಲದೆ, ಸಂಪ್ರದಾಯದ ಸೋಂಕಿಲ್ಲದೆ ಸರಳ ಮಾತುಗಳಲ್ಲಿ, ಹೊಸತನದಿಂದ ಕೂಡಿದ ವಾಕ್ಯಗಳಲ್ಲಿ ಮೈಕಲ್ ನೈಮಿ ನಿರೂಪಿಸುತ್ತಾನೆ. ಯೇಸುಕ್ರಿಸ್ತನ ಸಂವಾದಗುಣ, ಸೂಫೀಗಳ ನಾದಪ್ರಿಯತೆ ಹಾಗು ವೇದಾಂತದ ವಿರಕ್ತಿ, ಜ್ಞಾನೋಕ್ತಿಗಳು ಒಬ್ಬ ವ್ಯಕ್ತಿಯಲ್ಲಿ ಹದಗೆಡದಂತೆ ಸಮಪಾಕಗೊಂಡಾಗಲಷ್ಟೇ ಬುಕ್ ಆಫ್ ಮಿರ್ದಾದ್‌ನಂತಹ ಅನನ್ಯ ಕೃತಿ ಜನ್ಮ ತಳೆಯಬಲ್ಲದು. 'ಇದನ್ನು ಪೂರ್ತಿಯಾಗಿ ಓದಿದರೂ ಏನೂ ದಕ್ಕದೇ ಹೋಗಬಹುದು' ಎಂದು ಓಶೋ ಹೇಳುತ್ತಾರೆ. ಸ್ವತಃ ಲೇಖಕನೇ ಈ ಕೃತಿಯ ಬಗ್ಗೆ 'ಇದು ವಿಮೋಚನೆಗಾಗಿ ಹಂಬಲಿಸುವವರ ಪಾಲಿನ ದೀಪಸ್ತಂಭವಾಗಿದೆ ಉಳಿದವರು ಇದರಿಂದ ಎಚ್ಚರದಿಂದಿರಿ' ಎಂದು ಕಿವಿಮಾತು ಹೇಳುತ್ತಾನೆ.
Share


Subscribe to our emails
Subscribe to our mailing list for insider news, product launches, and more.