Skip to product information
1 of 1

Raghavendra Patil

ತೇರು

ತೇರು

Publisher - ಮನೋಹರ ಗ್ರಂಥಮಾಲಾ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕನ್ನಡದ ಜವಾರಿ ಕತೆಗಾರ ರಾಘವೇಂದ್ರ ಪಾಟೀಲರ ತೇರು ಮುಖ್ಯವಾಗಿ ಸ್ಥಿತ್ಯಂತರವನ್ನು ಕುರಿತ ಕಾದಂಬರಿ, ಕಾಲಕಾಲಕ್ಕೆ ಸಂಭವಿಸುವ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಪಲ್ಲಟಗಳು ಮನುಷ್ಯ ಜೀವಿತದ ಗುಣಾತ್ಮಕತೆಯ ಮೇಲೆ ಬೀರುವ ಅಪರಿಹಾರ್ಯವೆನಿಸುವ ಪ್ರಭಾವಗಳನ್ನು ರೂಪಕಾತ್ಮಕ ನೆಲೆಯಲ್ಲಿ ಕಟ್ಟಿಕೊಡುವುದು ತೇರು ಕಾದಂಬರಿಯ ವೈಶಿಷ್ಟ್ಯ. ಮಾನವ ಜೀವಿತವೇ ಈ ಪಲ್ಲಟಗಳನ್ನು ಗ್ರಹಿಸುವ ಸಾಮಗ್ರಿಯಾಗುತ್ತದೆ. ಮೂರು ತಲೆಮಾರಿನ ಗ್ರಾಹಕ ಅಳತೆಗೋಲಿನಲ್ಲ ಮುರಾಣ-ಇತಿಹಾಸ-ವರ್ತಮಾನಗಳನ್ನು ಅನುಸಂಧಾನ ಮಾಡುತ್ತ ತೇರು ತನ್ನನ್ನು ತಾನೇ ಕಟ್ಟಿಕೊಳ್ಳುತ್ತದೆ. ಹಾಗೆ" ಕಟ್ಟಕೊಳ್ಳುವಾಗ ಕಾದಂಬ ಮುರಾಣದ ಕೀರ್ತನೆಗೋ ವರ್ತಮಾನದ ರ್ಭಾನೆಗೋ ತೊಡಗದೆ ಬದುಕಿನ ಸೂಕ್ಷ್ಮಗಳನ್ನು ಕಣ್ಣಲ್ಲ ಕಣ್ಣಿಟ್ಟು ನೋಡುತ್ತದೆ. ಬದುಕಿನ ಪ್ರವಹನಕ್ಕೆ ಆಯಾ ಕಾಲದಲ್ಲಿ ಕಾರಣವಾಗಿರುವ ಜೀವಶಕ್ತಿಯನ್ನೂ, ಘಾತಕವೃತ್ತಿಯನ್ನೂ ಪಕ್ಷಪಾತರಹಿತವಾಗಿ ಗುರುತಿಸುವುದು ಸಾಧ್ಯವಾಗಿದೆ. ಎನ್ನುವುದೇ ಕಾದಂಬರಿಯ ಗುಣಾತ್ಮಕಶಕ್ತಿ. ಈ ಕಾದಂಬರಿಯಲ್ಲಿ ಬರುವ ತಾತನಂತೆ ಮೊಮ್ಮಗನೂ ಆಯಾ ಕಾಲಮಾನದ ಒತ್ತಡವು ನಿರ್ಮಿಸಿದ ಕ್ರಿಯಾಶಕ್ತಿಗಳಾಗಿ ರೂಪದಾಳುವುದಕ್ಕೆ ಲೇಖಕರ ಪಾಕ್ಷಿಕವಲ್ಲದ ಜೀವನಗ್ರಾಹಕ ಶಕ್ತಿಯೇ ಕಾರಣ. ಕೇವಲ ಬದುಕಿನ ಗುಣಾತ್ಮಕತೆಗೆ ಬದ್ಧನಾದ ಲೇಖಕನಿಗೆ ಮಾತ್ರ ತೇರುವಿನಂಥ ಕಾದಂಬರಿಯನ್ನು ಸೃಷ್ಟಿಸುವುದು ಸಾಧ್ಯವಾಗುತ್ತದೆ.

- ಡಾ|| ಎಚ್. ಎಸ್. ವೆಂಕಟೇಶಮೂರ್ತಿ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)