Deepa Joshi
ತತ್ರಾಣಿ
ತತ್ರಾಣಿ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 336
Type - Paperback
ಕಳೆದ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾಗಿ ಉತ್ತರಾರ್ಧದಲ್ಲಿ ಕೊನೆಗೊಳ್ಳುವ ನಡುವಿನ ಸುಮಾರು ಐವತ್ತು ವರ್ಷಗಳ ಕಥಾ ಜಗತ್ತು ದೀಪಾ ಜೋಶಿಯವರ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತಾ ಹೋಗುವ ರೀತಿ ಅನನ್ಯವಾದುದು. ಉತ್ತರ ಕರ್ನಾಟಕದ ರಾಣೆಬೆನ್ನೂರು ಕೇಂದ್ರವಾಗುಳ್ಳ ಮಾಧ್ವ ವೈದಿಕ ಕುಟುಂಬವೊಂದರ ಬದುಕಿನ ಹೋರಾಟದ ಕಥೆ ಇಲ್ಲಿದೆ.
ಹುಚ್ಚಾಚಾರ ಸಾವಿನ ಸನ್ನಿವೇಶದಿಂದ ಆರಂಭವಾಗುವ ಈ ಕಥಾನಕವು. ಅವರ ಮಗ ಭುಜಂಗಾಚಾರು ಬದುಕಿನ ಏಳುಬೀಳುಗಳ ಹೋರಾಟದಲ್ಲಿ ಸುದೀರ್ಘ ಬಾಳ ಯಾತ್ರೆಗಳಲ್ಲಿ, ತೀವ್ರ ಬಡತನ, ಸಾವು, ದುಃಖ, ಒದ್ದಾಟಗಳನ್ನು ಎದುರಿಸುತ್ತಾ, ಆ ಕುಲುಮೆಯಲ್ಲಿ ಬೆಂದು ಮಾಗುತ್ತಾ ಎಂದೂ ಸಹನೆಯನ್ನು ಕಳೆದುಕೊಳ್ಳದೆ ಘನತೆಯಿಂದ ಬಾಳುತ್ತಲೇ ಸ್ಥಿತಪ್ರಜ್ಞ ಸ್ಥಿತಿಗೆ ತಲುಪುವ ಹಂತದಲ್ಲಿ ಅಂತ್ಯವಾಗುತ್ತದೆ.
ಕಳೆದು ಹೋದ ಕಾಲಘಟ್ಟವೊಂದನ್ನು ಪುನರ್ ಸೃಷ್ಟಿಸುವ ಕಾರ್ಯದಲ್ಲಿ ದೀಪಾ ಜೋಶಿಯವರು ತೋರಿದ ಸಂಯಮ, ಆ ಕಾಲದ ಶಾಸ್ತ್ರಗಳು, ರೀತಿ ರಿವಾಜುಗಳು, ಸಾಮಾಜಿಕ ಸ್ಥಿತಿಗತಿಗಳು... ಮೊದಲಾದ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸಿ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ದಾಖಲಿಸಿದ ರೀತಿ ಅಪರೂಪದ್ದು.
ತಮ್ಮ ಈ ಪ್ರಥಮ ಕಾದಂಬರಿಯ ಬರವಣಿಗೆಯಲ್ಲೇ ಅವರು ಪಕ್ಷತೆಯನ್ನು ಸಾಧಿಸಿರುವ ರೀತಿಯು ವಿಸ್ಮಯಕಾರಿಯಾದದ್ದು.
ನಿಸ್ಸಂದೇಹವಾಗಿ ಈ ಕಾದಂಬರಿಯು ಈಚೆಗೆ ಬಂದ ಪ್ರಮುಖ ಕೃತಿಗಳ ಪೈಕಿ ಒಂದು ಎಂದು ಹೇಳಬಹುದು.
-ಸುಬ್ರಾಯ ಚೊಕ್ಕಾಡಿ
Share
Subscribe to our emails
Subscribe to our mailing list for insider news, product launches, and more.